Last Updated:
ಬಿಗ್ ಬಾಸ್ ಕಾನ್ಸೆಪ್ಟ್ ಈ ಸಲ ಹೇಗೆ ಇರ್ತದೆ? ಈ ಸುದೀಪ್ ಪೈಲಟ್ ಕಾಸ್ಟೂಮ್ ಅಲ್ಲಿ ಇರೋದು ಯಾಕೆ? ಈ ಎಲ್ಲದರ ಒಂದಷ್ಟು ಮಾಹಿತಿ ಇಲ್ಲಿದೆ ಓದಿ.
ಬಿಗ್ ಬಾಸ್ ಸೀಸನ್-13 (Bigg Boss season-13) ರ ಕಾನ್ಸೆಪ್ಟ್ ಈ ಸಲ ವಿಭಿನ್ನವಾಗಿದೆ. ಇದರ ಝಲಕ್ ಪ್ರೋಮೋಗಳಲ್ಲೂ ಕಾಣಿಸಿದೆ. ಸುದೀಪ್ ಪೈಲಟ್ (Sudeepa Pilot) ಆಗಿ ಕಂಗೊಳಿಸಿದ್ದಾರೆ. ಕ್ಯಾಪ್ಟನ್ ಕಾಸ್ಟೂಮ್ (Captain Concept) ಧರಿಸಿಕೊಂಡು ಸಿಕ್ಕಾಪಟ್ಟೆ ಖುಷಿ ಆಗಿದ್ದಾರೆ. ಈ ಡ್ರೆಸ್ ಅಲ್ಲಿ ತೆಗೆದಿರೋ ಫೋಟೋಗಳನ್ನು ಹೆಚ್ಚು ಇಷ್ಟಪಟ್ಟಿದ್ದಾರೆ. ಆದರೆ, ಇಡೀ ಶೋ ವಿಮಾನಯಾನ ಥೀಮ್ (Aviation theme) ಅಲ್ಲಿಯೇ ಇರುತ್ತದೆ. ಇದು ಹೇಗೆಲ್ಲ ಇರುತ್ತದೆ ಅನ್ನುವ ಕುತೂಹಲವೂ ಹೆಚ್ಚಾಗಿದೆ. ಇದಕ್ಕೆ ಒಂದಷ್ಟು ಉತ್ತರ ಸಿಕ್ಕಿದೆ. ಅದರ ವಿವರ ಮುಂದೆ ಇದೆ ಓದಿ.














