Doddanna: ಸಾವಿನ ವದಂತಿ ಬೆನ್ನಲ್ಲೇ ಆಂಜನೇಯನ ಮೊರೆ ಹೋದ ದೊಡ್ಡಣ್ಣ ’ Doddanna Visits Anjaneya temple after releasing video clarity about his death news | | ACTPnews

ದೊಡ್ಡಣ್ಣ


Last Updated:

Doddanna: ತಮ್ಮ ಸಾವಿನ ಸುದ್ದಿ ಸುಳ್ಳು ಎಂದು ಕ್ಲಾರಿಟಿ ಕೊಟ್ಟ ಬೆನ್ನಲ್ಲೇ ಹಿರಿಯ ನಟ ದೊಡ್ಡಣ್ಣ ಆಂಜನೇಯನ ಮೊರೆ ಹೋಗಿದ್ದಾರೆ.

ದೊಡ್ಡಣ್ಣ
ದೊಡ್ಡಣ್ಣ

ಇತ್ತೀಚೆಗಷ್ಟೇ ತಮ್ಮ ಸಾವಿನ ಸುದ್ದಿ ಸುಳ್ಳು ಎಂದು ವಿಡಿಯೋ ಮೂಲಕ ಸ್ಪಷ್ಟನೆ ಕೊಟ್ಟಿದ್ದ ಹಿರಿಯ ನಟ ದೊಡ್ಡಣ್ಣ ಅವರು ಈಗ ಆಂಜನೇಯನ ಮೊರೆ ಹೋಗಿದ್ದಾರೆ. ನಟ ದೊಡ್ಡಣ್ಣ (Actor Doddanna) ಅವರು ತಮ್ಮ ವಿರುದ್ಧ ಹರಿದಾಡಿದ್ದ ಸಾವಿನ ಸುಳ್ಳು ವದಂತಿಯ ಬೆನ್ನಲ್ಲೇ ಕಂಟಕ ನಿವಾರಣೆಗಾಗಿ ದೇವರ ಮೊರೆ ಹೋಗಿದ್ದಾರೆ.

ಶನಿವಾರದಂದು ಅವರು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಪ್ರಸಿದ್ಧ ಅಂಜನೇಯ ಸ್ವಾಮಿ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದಿದ್ದಾರೆ.

ತಮ್ಮ ನಿಧನ ಸುದ್ದಿ ಬಗ್ಗೆ ಕ್ಲಾರಿಟಿ ಕೊಟ್ಟ ದೊಡ್ಡಣ್ಣ ಅವರು ನಾನು ಮಲಗಿ ಎದ್ದೇಳೋಕೂ ಮುನ್ನ ಅವಿವೇಕಿಗಳು ನಾನು ನಿಧನ ಅಗಿದ್ದೀನಿ ಅಂತ ಫೇಕ್ ನ್ಯೂಸ್ ನಲ್ಲಿ ಹಾಕಿದ್ದಾರೆ. ನಾನು ನಿಧನವಾಗಿದ್ದೀನಿ ಅನ್ನೋದು ಶುದ್ದ ಸುಳ್ಳು ಎಂದಿದ್ದಾರೆ.

ನಾನು ಅರೋಗ್ಯವಾಗಿದ್ದೀನಿ. ನೆಮ್ಮದಿಯಾಗಿದ್ದೀನಿ. ಬೆಳಗ್ಗೆಯಿಂದ ನನಗೆ ಮುಖ ತೊಳೆಯೋಕೆ ಆಗ್ತಿಲ್ಲ, ಅಷ್ಟು ಕರೆಗಳು ಬರ್ತಿವೆ. ಈ ವಿವರ ನಿಮ್ಮ‌ಜೊತೆ ಹೇಳಬೇಕು ಅಂತ ವಿಡಿಯೋ ಮಾಡಿದ್ದೀನಿ ಎಂದು ನಟ ಹೇಳಿದ್ದಾರೆ.

2021 ಮೇನಲ್ಲಿಯೂ ಇದೇ ರೀತಿ ದೊಡ್ಡಣ್ಣ ಅವರ ಕುರಿತು ಸುಳ್ಳು ಸುದ್ದಿ ಹರಡಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಹಿರಿಯ ನಟ ದೊಡ್ಡಣ್ಣ ಅವರ ಕುರಿತು ಸುಳ್ಳು ಸುದ್ದಿ ಹಬ್ಬಿತ್ತು. ನಟ ದೊಡ್ಡಣ್ಣ ಇನ್ನಿಲ್ಲ ಎಂಬಂತೆ ಬಿಂಬಿಸಿ ಸೋಷಿಯಲ್ ಮೀಡಿಯಾದಲ್ಲಿ ಅವರ ಫೋಟೋ ಶೇರ್ ಮಾಡಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ಫೇಕ್ ಪೋಸ್ಟ್ ವೈರಲ್ ಆಗಲು ಹೆಚ್ಚು ಸಮಯ ಬೇಕಾಗಲಿಲ್ಲ.

ಈ ಬಾರಿಯೂ ಅದೇ ರೀತಿ ಸಂಭವಿಸಿದ್ದು ನಂತರ ದೊಡ್ಡಣ್ಣ ಅವರು ವಿಡಿಯೋ ಮಾಡುವ ಮೂಲಕ ಕ್ಲಾರಿಟಿ ಕೊಡಬೇಕಾಯಿತು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports