Devi Mahathme Movie: ‘ದೇವಿ ಮಹಾತ್ಮೆ’‌ ಚಿತ್ರದ ಟೀಸರ್ ರಿಲೀಸ್; ರಂಗಾಯಣ ರಘು ನಟನೆಗೆ ಫ್ಯಾನ್ಸ್‌ ಫಿದಾ | | ACTPnews

ದೇವಿ ಮಹಾತ್ಮೆ ಸಿನಿಮಾ ಟೀಸರ್; ರಂಗಾಯಣ ರಘು ನಿಮ್ಮನ್ನ ಕಾಡ್ತಾರೆ!


Last Updated:

ರಂಗಾಯಣ ರಘು ಅಭಿನಯಿಸಿರುವ ದೇವಿ ಮಹಾತ್ಮೆ ಚಿತ್ರ ಏನೋ ಮಾಡುವ ಹಾಗೆ ಇದೆ. 1 ನಿಮಿಷ 5 ಸೆಕೆಂಡ್‌ನ ಈ ಟೀಸರ್‌ನ ಕೊನೆಯಲ್ಲಿ ರಂಗಾಯಣ ರಘು ನಿಮಗೆ ಬೇರೆ ರೀತಿನೇ ಕಾಣಿಸುತ್ತಾರೆ. ಇಲ್ಲಿ ಇವರ ಅಸಲಿ ಪ್ರತಿಭೆ ಹೊರ ಬಂದಿದೆ. ಈ ಚಿತ್ರದ ಸುತ್ತ ಇನ್ನಷ್ಟು ವಿವರ ಇಲ್ಲಿದೆ ಓದಿ.

ದೇವಿ ಮಹಾತ್ಮೆ ಸಿನಿಮಾ ಟೀಸರ್; ರಂಗಾಯಣ ರಘು ನಿಮ್ಮನ್ನ ಕಾಡ್ತಾರೆ!
ದೇವಿ ಮಹಾತ್ಮೆ ಸಿನಿಮಾ ಟೀಸರ್; ರಂಗಾಯಣ ರಘು ನಿಮ್ಮನ್ನ ಕಾಡ್ತಾರೆ!

ರಂಗಾಯಣ ರಘು (Rangayana Raghu) ಕಳೆದ 28 ವರ್ಷದ ಸಿನಿಮಾ ಜರ್ನಿಯಲ್ಲಿ 400 ಸಿನಿಮಾ ಮಾಡಿದ್ದಾರೆ. ಮೊನ್ನೆಯಷ್ಟೆ ಇವರ 400 ಚಿತ್ರದ ಹೊಸ ಜೀವನ (Hosa Jeevana) ಅನ್ನುವ ಟೈಟಲ್ ರಿವೀಲ್ ಆಗಿದೆ. ಆದರೆ, ವಿಷಯ ಈಗ ಇದಲ್ಲ ನೋಡಿ. ದೇವಿ ಮಹಾತ್ಮೆ (Devi Mahathme) ಅಂತ ಇನ್ನೂ ಒಂದು ಚಿತ್ರ ಮಾಡಿದ್ದಾರೆ. ನಾಗರಾಜ್ ಸೋಮಯಾಜಿ (Nagaraj Somayaji) ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಇದು ಬೇರೆ ತರದ ಚಿತ್ರ ಅನಿಸುತ್ತದೆ. ಟೀಸರ್‌ನ ಕೊನೆಯ ಕೆಲವು ಸೆಕೆಂಡ್‌ ಅಲ್ಲಿ ರಂಗಾಯಣ ರಘು ತುಂಬಾನೆ ಇಷ್ಟ ಆಗ್ತಾರೆ. ಅಷ್ಟೆ ಕಾಡ್ತಾರೆ. ಈ ಚಿತ್ರದ ಇನ್ನಷ್ಟು ವಿಷಯ ಇದೆ. ಅದು ಇಲ್ಲಿದೆ ಓದಿ.

ರಂಗಾಯಣ ರಘು

ರಂಗಾಯಣ ರಘು ಅವರ ಮೇಲೆ ಒಂದು ಸಣ್ಣ ದೂರಿತ್ತು. ಒಂದೇ ರೀತಿಯ ಅಭಿನಯ ಮಾಡ್ತಾರೆ ಅನ್ನುವವರು ಇದ್ದರು. ಆದರೆ, ಅಸಲಿಗೆ ಆ ರೀತಿಯ ಪಾತ್ರಗಳೆ ಇಲ್ಲಿ ಕ್ರಿಯೇಟ್ ಆಗುತ್ತಿದ್ದವು.
rangayana raghu devi mahathme cinema teaser released

ಚಿತ್ರದಲ್ಲಿ ದೇವಿ ಅಷ್ಟೆ ಇಲ್ಲ..

ಈ ಕಾರಣಕ್ಕೋ ಏನೋ? ರಘು ಅವರ ಪಾತ್ರದಲ್ಲಿ ವ್ಯತ್ಯಾಸ ಕಾಣಿಸ್ತಾ ಇರಲಿಲ್ಲ. ಆದರೆ, ಶಾಖಾಹಾರಿ ಚಿತ್ರ ಇವರ ಅಸಲಿ ಪ್ರತಿಭೆಯನ್ನ ತೋರಿಸಿತ್ತು. ಈ ಒಂದು ಕೆಲಸವನ್ನ ಈಗ ಡೈರೆಕ್ಟರ್ ನಾಗರಾಜ್ ಸೋಮಯಾಜಿ ಕೂಡ ಮಾಡಿದ್ದಾರೆ.

ದೇವಿ ಮಹಾತ್ಮೆ ಸಿನಿಮಾ

ದೇವಿ ಮಹಾತ್ಮೆ ಚಿತ್ರದಲ್ಲಿ ಕರಾವಳಿ ಕಡೆಯ ಕತೆ ಇದ್ದಂತೆ ಇದೆ. ಟೀಸರ್ ಅಲ್ಲಿ ಕಾಣಿಸುವ ಪರಿಸರ ಕರಾವಳಿ ಚಿತ್ರಣ ಕಟ್ಟಿಕೊಡುತ್ತದೆ. ರಂಗಾಯಣ ರಘು ಅವರ ವೇಷವೂ ಅಲ್ಲಿಯದ್ದೇ ಆಗಿದೆ.

ಆದರೆ, ಇವರ ಈ ಒಂದು ಪಾತ್ರದಲ್ಲಿ ಒಂದು ನೋವು ಕಾಣಿಸುತ್ತದೆ. ಹುಲಿ ಕುಣಿತದ ಮಾಸ್ಕ್ ಕೈಯಲ್ಲಿ ಹಿಡಿದಾಗ ಇವರ ಭಾವನೆಗಳು ಬದಲಾಗುತ್ತವೆ. ಕೈಯಲ್ಲಿ ಹಿಡಿದ ಹಳೆ ಖಾಲಿ ಡಬ್ ಇವರಲ್ಲಿ ಬೇರೆ ಭಾವನೆ ಮೂಡಿಸುತ್ತದೆ.

ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ

ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಕಂಟೆಂಟ್ ಈ ಚಿತ್ರದಲ್ಲಿದೆ. ಇದರಲ್ಲಿ ಸುಮಾರು ಕ್ಯಾರೆಕ್ಟರ್‌ಗಳು ಇವೆ. ಹಾಗೆ ಪ್ರತಿಮಾ ನಾಯಕ್, ಸುಂದರ್ ವೀಣಾ, ಅರವಿಂದ್ ಕುಪ್ಳಿಕರ್, ಬಾಸುಮ ಕೊಡಗು, ನಾಗೇಂದ್ರ ಶಾ ನಟಿಸಿದ್ದಾರೆ.

rangayana raghu devi mahathme cinema teaser released

ಅಪ್ಪನ ವಿಚಿತ್ರ ಹಾವ-ಭಾವ

ಇವರಲ್ಲದೆ ಪಿಡಿ ಸತೀಶ್ ಚಂದ್ರ, ಪ್ರಶಾಂತ್ ಹಿರೇಮಠ, ಆದಿತ್ಯ ರಾಜ್ ರಘು ಪಾಂಡೇಶ್ವರ, ಪಲ್ಲವಿ ಮಂಜುನಾಥ್, ಶೈಲಶ್ರೀ ಮೂಲ್ಕಿ, ಶ್ವೇತಾ ಶ್ರೀನಿವಾಸ, ಮಹಾದೇವ ಹಡಪದ್ ಈ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಅಪ್ಪನ ವಿಚಿತ್ರ ಹಾವ-ಭಾವ

ಆದರೆ, ಇಲ್ಲಿ ಅಪ್ಪನ ಪಾತ್ರದಲ್ಲಿರುವ ರಂಗಾಯಣ ರಘು ಅದ್ಭುತ ಅನಿಸುತ್ತಾರೆ. ಒಂದು ನಿಮಿಷ ಐದು ಸೆಕೆಂಡ್‌ನ ಈ ಟೀಸರ್ ಕೊನೆಯಲ್ಲಿ ರಂಗಾಯಣ ರಘು ಹಾವ-ಭಾವವೇ ಬದಲಾಗುತ್ತವೆ.

ಚಿತ್ರದಲ್ಲಿ ದೇವಿ ಅಷ್ಟೆ ಇಲ್ಲ..

ಈ ಚಿತ್ರ ಡೈರೆಕ್ಟರ್ ನಾಗರಾಜ್ ಸೋಮಯಾಜಿ ನ್ಯೂಸ್-18 ಕನ್ನಡ ಜೊತೆಗೆ ಮಾತನಾಡಿದ್ದರು. ಈ ಸಿನಿಮಾದಲ್ಲಿ ಬೇರೆ ರೀತಿಯ ಕತೆ ಹೇಳುತ್ತಿದ್ದೇವೆ.

ಆದರೆ, ದೇವಿ ಮಹಾತ್ಮೆ ಅಂದರೆ ಇದು ದೇವರ ಸಿನಿಮಾ ಅಲ್ಲ ಅಂತಲೂ ಹೇಳಿದ್ದರು. ಅದು ಈ ಚಿತ್ರದ ಟೀಸರ್ ಅಲ್ಲಿಯೇ ತಿಳಿಯುತ್ತಿದೆ. ಆ ರೀತಿನೇ ಟೀಸರ್ ಇದೆ. ಚಿತ್ರದ ಇತರ ವಿಚಾರ ಅಂತ ಬಂದ್ರೆ, ಎಸ್.ಕೆ.ರಾವ್ ಕ್ಯಾಮರಾವರ್ಕ್ ಮಾಡಿದ್ದಾರೆ. ಲಿಕಿತ್ ಪ್ರಸಾದ್ ಕೆ.ಶೆಟ್ಟಿ ಸಂಗೀತ ಕೊಟ್ಟಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed