Last Updated:
ಮಂಗಳೂರಿನ ತಣ್ಣೀರುಬಾವಿ ಹಾಗೂ ಸಸಿಹಿತ್ಲು ಬೀಚ್ಗಳು ಸರ್ಫಿಂಗ್ ಕ್ರೀಡೆಯ ಪ್ರಮುಖ ತಾಣಗಳಾಗಿ ಬೆಳೆಯುತ್ತಿವೆ. 10ಕ್ಕೂ ಹೆಚ್ಚು ಸರ್ಫಿಂಗ್ ಕ್ಲಬ್ಗಳು ಮಕ್ಕಳಿಗೆ ಮತ್ತು ಯುವಕರಿಗೆ ತರಬೇತಿ ನೀಡುತ್ತಿದ್ದು, ಮಾಸಿಕ ಶುಲ್ಕ ಸುಮಾರು ₹7 ಸಾವಿರದವರೆಗೆ ಇದೆ.
ದಕ್ಷಿಣ ಕನ್ನಡ: ಮಂಗಳೂರು ಅಂದ್ರೆ ನೆನಪಾಗೋದು ಸಮುದ್ರ (Sea) ಆದರೆ ಇದೇ ಸಮುದ್ರ ಈಗ ಕೇವಲ ಪ್ರವಾಸಿಗರನ್ನಷ್ಟೇ ಅಲ್ಲ, ಸರ್ಫಿಂಗ್ ಕಲಿಯಲು ಬಯಸುವವರನ್ನೂ ಸೆಳೆಯುತ್ತಿದೆ. ಮಂಗಳೂರು–ಮುಲ್ಕಿ ಕರಾವಳಿಯಲ್ಲಿ ಸರ್ಫಿಂಗ್ ತರಬೇತಿ ನೀಡುವ ಸಂಸ್ಥೆಗಳು (Institution) ಕಾರ್ಯನಿರ್ವಹಿಸುತ್ತಿದ್ದು, ಆರಂಭಿಕರಿಂದ ಮುಂದುವರಿದ ಹಂತದವರೆಗೂ ತರಬೇತಿ ಪಡೆಯಲು ಅವಕಾಶವಿದೆ. Mantra Surf Club 2004ರಿಂದ ಮುಲ್ಕಿ ಭಾಗದಲ್ಲಿ ಸರ್ಫಿಂಗ್ ತರಬೇತಿ ನೀಡುತ್ತಿದ್ದು, beginner, intermediate ಮತ್ತು advanced coaching ಕಾರ್ಯಕ್ರಮಗಳನ್ನು ನಡೆಸುತ್ತಿದೆ.














