Darshan: ಜೈಲಿಂದ ಹೊರಬರಲು ದರ್ಶನ್​​ಗೆ ಸಿಗುತ್ತಾ ಬಿಗ್ ಚಾನ್ಸ್​? ಸೆಷನ್ಸ್ ಕೋರ್ಟ್​​​​​​​ನಿಂದ ಮಹತ್ವದ ನಿರ್ಧಾರ | | ACTPnews

News18


Last Updated:

ಜೂನ್​ 1ರಂದು ಕೋರ್ಟ್​​ನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷ್ಯಗಳ ವಿಚಾರಣೆ ನಡೆದಿದೆ. ಬಳಿಕ ಇತ್ತೀಚಿಗೆ ಸೆಷನ್ಸ್ ಕೋರ್ಟ್​​ಗಳ ಮರು ನಿಯೋಜನೆ ಆಗಿದ್ದು, ಕೋರ್ಟ್​​​ ಮಹತ್ವದ ತೀರ್ಪು ನೀಡಿದೆ.

News18
News18

ಬೆಂಗಳೂರು (ಮೇ.02): ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ನಟ ದರ್ಶನ್ (Actor Darshan) ಜೈಲು ಸೇರಿದ್ದಾರೆ. ಹೊರಗೆ ಐಷಾರಾಮಿ ಜೀವನ ಕಂಡಿದ್ದ ದರ್ಶನ್​ ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ (Jail) ಕಂಬಿ ಎಣಿಸುತ್ತಿದ್ದಾರೆ. ಬೇಲ್ (Bail)​ ಸಿಗದ ಹಿನ್ನೆಲೆ ನಟ ದರ್ಶನ್​​ ಜೈಲಿನಲ್ಲೇ ಮಾನಸಿಕವಾಗಿ ನೊಂದಿದ್ದಾರೆ. ಮತ್ತೊಂದೆಡೆ ಸಾಕ್ಷ್ಯಗಳ ವಿಚಾರಣೆ ಕೂಡ ತಡವಾಗ್ತಿದೆ. ಇದರ ನಡುವೆ ಕೇಸ್​ ವಿಚಾರಣೆ ಕೈಗೆತ್ತಿಕೊಂಡ 64ನೇ ಸೆಷನ್ಸ್ ಕೋರ್ಟ್, ಸಂಪೂರ್ಣ ಕೇಸ್ ಫೈಲ್​​ನನ್ನು 59ನೇ ಸೆಷನ್ಸ್ ಕೋರ್ಟ್​​​ಗೆ (Court) ವರ್ಗಾಯಿಸಲು ನಿರ್ದೇಶನ ನೀಡಿದೆ.

ದರ್ಶನ್​ ಕೇಸ್​​ನಲ್ಲಿ ಕೋರ್ಟ್​ ಮಹತ್ವದ ನಿರ್ಧಾರ

ಆರೋಪಿ ದರ್ಶನ್ ಆ್ಯಂಡ್​ ಗ್ಯಾಂಗ್ ವಿರುದ್ಧದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ಆದೇಶದ ಪ್ರತಿಯನ್ನು ದರ್ಶನ್ ಪರ ವಕೀಲರು ಬೆಂಗಳೂರಿನ ಸೆಷನ್ಸ್ ಕೋರ್ಟ್‌ಗೆ ಸಲ್ಲಿಸಿದ್ದಾರೆ. ಈ ಆದೇಶದ ಅನ್ವಯ, ಪ್ರಕರಣದ ತ್ವರಿತಗತಿ ವಿಚಾರಣೆ ನಡೆಸುವ ಹಾಗೂ ಆರೋಪಿಗಳಿಗೆ ಒದಗಿಸಬೇಕಾದ ಕನಿಷ್ಠ ಸೌಲಭ್ಯಗಳ ಮಾರ್ಗಸೂಚಿಗಳನ್ನ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದರ ಕುರಿತು ಸೆಷನ್ಸ್ ನ್ಯಾಯಾಲಯವು ಮಹತ್ವದ ನಿರ್ಧಾರ ಕೈಗೊಳ್ಳಲಿದೆ.

64ನೇ ಸೆಷನ್ಸ್ ಕೋರ್ಟ್​​​ನಿಂದ ನಿರ್ದೇಶನ.

ಜೂನ್​ 1ರಂದು ಕೋರ್ಟ್​​ನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷ್ಯಗಳ ವಿಚಾರಣೆ ನಡೆದಿದೆ. ಬಳಿಕ ಇತ್ತೀಚಿಗೆ ಸೆಷನ್ಸ್ ಕೋರ್ಟ್​​ಗಳ ಮರು ನಿಯೋಜನೆ ಆಗಿದ್ದು. 64ನೇ ಸೆಷನ್ಸ್ ಕೋರ್ಟ್​ಗೆ ನಿಗದಿಯಾಗಿದ್ದ ದರ್ಶನ್ ಕೊಲೆ ಕೇಸ್​ನನ್ನ 59ನೇ ಸೆಷನ್ಸ್ ಕೋರ್ಟ್​​ಗೆ ಕೇಸ್ ಫೈಲ್ ವರ್ಗಾಯಿಸಲು ನಿರ್ದೇಶನ ನೀಡಿದೆ.

ಜೂನ್​ 15ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್​

ಮುಂದಿನ ವಿಚಾರಣೆ ವೇಳೆ ಆರೋಪಿಗಳನ್ನ 59ನೇ ಕೋರ್ಟ್​​ಗೆ ಹಾಜರು ಪಡಿಸಲು ಸೂಚನೆ ನಡೆಸಿದೆ. ಕಾಮಾಕ್ಷಿಪಾಳ್ಯ ಪೊಲೀಸರು ಕಾರಾಗೃಹ ಇಲಾಖೆ ಅಧಿಕಾರಿಗಳಿಗೂ ಸಹ ಸೂಚನೆ ನೀಡಿದ್ದಾರೆ. ಬಳಿಕ ಕೋರ್ಟ್​​ ಮುಂದಿನ ವಿಚಾರಣೆಯನ್ನ ಜೂನ್ 15ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.

ಸುಪ್ರೀಂಕೋರ್ಟ್​​ನಿಂದಲೂ ಖಡಕ್ ಸೂಚನೆ

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರೋ ಸುಪ್ರೀಂ ಕೋರ್ಟ್, ತ್ವರಿತಗತಿ ತನಿಖೆಗೆ ಕಟ್ಟುನಿಟ್ಟಿನ ಗಡುವು ವಿಧಿಸಿದ್ದು, ಮುಂಬರುವ ಒಂದು ವರ್ಷದ ಅವಧಿಯಲ್ಲಿ ಪ್ರಕರಣದ ಪ್ರಮುಖ 60 ಸಾಕ್ಷಿಗಳ ವಿಚಾರಣೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ಈ ಹಿಂದೆ ನಿರ್ದೇಶನ ನೀಡಿತ್ತು.

ಜಾಮೀನು ಯಾವಾಗ?

ಸಾಕ್ಷ್ಯಗಳ ವಿಚಾರಣೆ ವಿಳಂಬವಾದ್ರೆ ವರ್ಷದೊಳಗೆ ಅಷ್ಟು ಸಾಕ್ಷ್ಯ ವಿಚಾರಣೆ ಮಾಡಲು ಸಾಧ್ಯವಾಗದಿದ್ರೆ. ದರ್ಶನ್​ ಜಾಮೀನಿನ ಮೊರೆ ಹೋಗಬಹುದು ಅಂತಾರೆ ವಕೀಲರು.

(ವರದಿ: ಮುನಿರಾಜು, ನ್ಯೂಸ್​18 ಕನ್ನಡ, ಬೆಂಗಳೂರು)



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed