Last Updated:
Nuclear Program: ಇರಾನ್‌ಗೆ ಯಾಕೆ ಅಣುಬಾಂಬ್ ನಿರ್ಮಿಸಲು ಅವಕಾಶ ಸಿಗುತ್ತಿಲ್ಲ? ಎಂಬ ಪ್ರಶ್ನೆ ಮತ್ತೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಮಧ್ಯಪ್ರಾಚ್ಯದಲ್ಲಿ ಇಸ್ರೇಲ್–ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಹಾಗಾದರೆ, ಇಸ್ರೇಲ್ ಅಣ್ವಸ್ತ್ರ ಹೇಗೆ ತಯಾರಿಸಿತು? ಆ ತಂತ್ರಜ್ಞಾನ ಸಿಕ್ಕಿದ್ದು ಎನ್ನುವುದನ್ನು ನೋಡೋಣ ಬನ್ನಿ.
ಇಸ್ರೇಲ್ (Israel) ಅಣ್ವಸ್ತ್ರಗಳನ್ನು(Nuclear Power) ಹೇಗೆ ಅಭಿವೃದ್ಧಿಪಡಿಸಿತು? ಆದರೆ ಇರಾನ್‌ಗೆ ಯಾಕೆ ಅಣುಬಾಂಬ್ ನಿರ್ಮಿಸಲು ಅವಕಾಶ ಸಿಗುತ್ತಿಲ್ಲ? ಎಂಬ ಪ್ರಶ್ನೆ ಮತ್ತೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಮಧ್ಯಪ್ರಾಚ್ಯದಲ್ಲಿ (Middle East) ಇಸ್ರೇಲ್–ಇರಾನ್ (Israel-Iran) ನಡುವಿನ ಉದ್ವಿಗ್ನತೆ (Conflict) ಹೆಚ್ಚುತ್ತಿರುವ ಸಂದರ್ಭದಲ್ಲೇ ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಹಾಗಾದರೆ, ಇಸ್ರೇಲ್ ಅಣ್ವಸ್ತ್ರ ಹೇಗೆ ತಯಾರಿಸಿತು? ಆ ತಂತ್ರಜ್ಞಾನ ಸಿಕ್ಕಿದ್ದು ಎನ್ನುವುದನ್ನು ನೋಡೋಣ ಬನ್ನಿ.
ಇಸ್ರೇಲ್ ವಿಶ್ವದ ಅಣ್ವಸ್ತ್ರ ಹೊಂದಿರುವ ರಾಷ್ಟ್ರಗಳಲ್ಲಿ ಒಂದೆಂದು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ. ಆದರೆ ಅದು ತನ್ನ ಬಳಿ ಅಣುಬಾಂಬ್‌ಗಳಿವೆ ಎಂದು ಅಧಿಕೃತವಾಗಿ ಎಂದಿಗೂ ಘೋಷಿಸಿಲ್ಲ. ಈ ನೀತಿಯನ್ನು “ನ್ಯೂಕ್ಲಿಯರ್ ಅಂಬಿಗ್ಯುಟಿ” ಎಂದು ಕರೆಯಲಾಗುತ್ತದೆ. ಅಂದರೆ, ಅಣ್ವಸ್ತ್ರಗಳಿವೆ ಎಂಬುದನ್ನೂ ಖಚಿತಪಡಿಸದು, ಇಲ್ಲವೆಂದು ಕೂಡ ಹೇಳುವುದಿಲ್ಲ.
1950 ಮತ್ತು 1960ರ ದಶಕಗಳಲ್ಲಿ ಇಸ್ರೇಲ್ ತನ್ನ ಅಣು ಯೋಜನೆಯನ್ನು ರಹಸ್ಯವಾಗಿ ಆರಂಭಿಸಿತು. ಈ ಯೋಜನೆಗೆ ಫ್ರಾನ್ಸ್ ಪ್ರಮುಖ ಸಹಕಾರ ನೀಡಿದ ದೇಶವೆಂದು ಹೇಳಲಾಗುತ್ತದೆ. ಆ ಸಮಯದಲ್ಲಿ ಫ್ರಾನ್ಸ್ ಮತ್ತು ಇಸ್ರೇಲ್ ನಡುವೆ ಬಲವಾದ ರಕ್ಷಣಾತ್ಮಕ ಸಂಬಂಧ ಇತ್ತು. ಫ್ರಾನ್ಸ್‌ನ ತಾಂತ್ರಿಕ ನೆರವಿನಿಂದ ಇಸ್ರೇಲ್‌ನ ಡಿಮೋನಾ ಪ್ರದೇಶದಲ್ಲಿ ಅಣು ಸಂಶೋಧನಾ ಕೇಂದ್ರ ನಿರ್ಮಾಣವಾಯಿತು. ಬಳಿಕ ಅಮೆರಿಕವೂ ನೇರವಾಗಿ ಅಲ್ಲದಿದ್ದರೂ ರಾಜಕೀಯ ಮತ್ತು ಭದ್ರತಾ ಬೆಂಬಲ ನೀಡಿದೆಯೆಂಬ ಅಭಿಪ್ರಾಯ ಹಲವರದು.
ಇಸ್ರೇಲ್ ತನ್ನ ಭದ್ರತೆಯನ್ನು ಪ್ರಮುಖ ಕಾರಣವಾಗಿ ಮುಂದಿಟ್ಟುಕೊಂಡಿತ್ತು. ಸುತ್ತಮುತ್ತಲಿನ ಅರಬ್ ರಾಷ್ಟ್ರಗಳಿಂದ ಯುದ್ಧ ಭೀತಿ ಇರುವ ಕಾರಣದಿಂದಲೇ ಅಣ್ವಸ್ತ್ರಗಳು ಅವಶ್ಯಕ ಎಂದು ಅದು ಭಾವಿಸಿತು. ಹಲವು ಯುದ್ಧಗಳನ್ನು ಎದುರಿಸಿದ ನಂತರ, ತನ್ನ ಅಸ್ತಿತ್ವದ ರಕ್ಷಣೆಗೆ ಅಣ್ವಸ್ತ್ರಗಳು ಅಗತ್ಯವೆಂಬ ನಿಲುವು ಇಸ್ರೇಲ್ ತೆಗೆದುಕೊಂಡಿತ್ತು.
ಇನ್ನೊಂದೆಡೆ, ಇರಾನ್ ಕೂಡ ಅಣು ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿದ್ದರೂ, ಅದರ ಮೇಲೆ ಅಮೆರಿಕ ಸೇರಿದಂತೆ ಪಾಶ್ಚಾತ್ಯ ರಾಷ್ಟ್ರಗಳು ಕಠಿಣ ನಿಗಾ ಇಟ್ಟಿವೆ. ಇರಾನ್ ತನ್ನ ಅಣು ಯೋಜನೆ ಶಾಂತಿಯುತ ಉದ್ದೇಶಕ್ಕಾಗಿ ಮಾತ್ರ ಎಂದು ಹೇಳುತ್ತದೆ. ಆದರೆ ಅಮೆರಿಕ, ಇಸ್ರೇಲ್ ಮತ್ತು ಕೆಲವು ಯುರೋಪಿಯನ್ ರಾಷ್ಟ್ರಗಳು ಇರಾನ್ ಗುಪ್ತವಾಗಿ ಅಣುಬಾಂಬ್ ಅಭಿವೃದ್ಧಿಪಡಿಸಲು ಯತ್ನಿಸುತ್ತಿದೆ ಎಂದು ಆರೋಪಿಸುತ್ತಿವೆ.
ಈ ಕಾರಣದಿಂದ ಇರಾನ್ ಮೇಲೆ ಹಲವು ವರ್ಷಗಳಿಂದ ಆರ್ಥಿಕ ನಿರ್ಬಂಧಗಳು ವಿಧಿಸಲಾಗಿದೆ. ಅದರ ಅಣು ಕೇಂದ್ರಗಳ ಮೇಲೆ ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (IAEA) ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಸುತ್ತಿದೆ. ಇರಾನ್ ಅಣ್ವಸ್ತ್ರ ಹೊಂದಿದರೆ ಮಧ್ಯಪ್ರಾಚ್ಯದಲ್ಲಿ ದೊಡ್ಡ ಮಟ್ಟದ ಅಣ್ವಸ್ತ್ರ ಸ್ಪರ್ಧೆ ಆರಂಭವಾಗಬಹುದು ಎಂಬ ಆತಂಕವೂ ಇದೆ. ಸೌದಿ ಅರೇಬಿಯಾ, ಟರ್ಕಿ ಮುಂತಾದ ರಾಷ್ಟ್ರಗಳೂ ಬಳಿಕ ಅಣ್ವಸ್ತ್ರ ಅಭಿವೃದ್ಧಿಗೆ ಮುಂದಾಗಬಹುದು ಎಂದು ವಿಶ್ಲೇಷಕರು ಎಚ್ಚರಿಸುತ್ತಿದ್ದಾರೆ.
ಇತ್ತೀಚಿನ ಇಸ್ರೇಲ್–ಇರಾನ್ ಸಂಘರ್ಷದ ವೇಳೆ ಎರಡೂ ದೇಶಗಳ ಅಣು ಕೇಂದ್ರಗಳ ಬಗ್ಗೆ ಜಾಗತಿಕ ಆತಂಕ ಹೆಚ್ಚಾಗಿದೆ. ಇಸ್ರೇಲ್‌ನ ಡಿಮೋನಾ ಕೇಂದ್ರ ಮತ್ತು ಇರಾನ್‌ನ ನತಾಂಜ್ ಹಾಗೂ ಬುಶೆರ್ ಅಣು ಕೇಂದ್ರಗಳು ಸುದ್ದಿಯಲ್ಲಿವೆ. ಈ ಬೆಳವಣಿಗೆಗಳಿಂದ ಮಧ್ಯಪ್ರಾಚ್ಯದಲ್ಲಿ ಅಣು ಯುದ್ಧದ ಭೀತಿ ಹೆಚ್ಚುತ್ತಿದೆ ಎಂದು ಅಂತರಾಷ್ಟ್ರೀಯ ತಜ್ಞರು ಎಚ್ಚರಿಸಿದ್ದಾರೆ.
Nuclear Program: ಇರಾನ್ ಅಣ್ವಸ್ತ್ರ ತಯಾರಿಸಲು ಸಾಧ್ಯವಿಲ್ಲ, ಆದರೆ ಇಸ್ರೇಲ್ ಇದನ್ನು ಹೇಗೆ ತಯಾರಿಸಿತು? ಆ ತಂತ್ರಜ್ಞಾನ ಸಿಕ್ಕಿದ್ದು ಎಲ್ಲಿಂದ ಗೊತ್ತಾ?













