ತಮಿಳುನಾಡು ಸಿಎಂ ವಿಜಯ್ ಅವರು ನಟಿಸಿದ ಇತ್ತೀಚೆಗೆ ಬಿಡುಗಡೆಯಾದ ಸಿನಿಮಾ ಜನ ನಾಯಗನ್ನಲ್ಲಿ ಕೊನೆಯ ಬಾರಿಗೆ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಂಡರು. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಗಳಿಕೆ ಕಂಡಿದೆ. ಆದರೆ ಜನ ನಾಯಗನ್ ಟಾಪ್ 5 ಬಿಗ್ ಓಪನಿಂಗ್ ಸಿನಿಮಾಗಳ ಲಿಸ್ಟ್ನಲ್ಲಿ ಸ್ಥಾನ ಪಡೆಯೋಕೆ ಸಾಧ್ಯವಾಗಿಲ್ಲ.
ಜನ ನಾಯಗನ್ ವಿಜಯ್ ಅವರ ಹಿಂದಿನ ಹಿಟ್ಗಳಾದ ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ ( ವಿಶ್ವಾದ್ಯಂತ ₹ 99.39 ಕೋಟಿ) ಮತ್ತು ಲಿಯೋ ( ವಿಶ್ವಾದ್ಯಂತ ₹ 142.03 ಕೋಟಿ) ಗಳ ಮೊದಲ ದಿನದ ಕಲೆಕ್ಷನ್ಗಿಂತ ಹಿಂದುಳಿದಿದೆ.
ಈ ವರ್ಷದ ಜನವರಿಯಲ್ಲಿ ಬಿಡುಗಡೆಗೆ ನಿಗದಿಯಾಗಿದ್ದ ಸಿನಿಮಾ ನಂತರ ಹಲವು ವಿಳಂಬಗಳಾಗಿ ಗುರುವಾರ ಜು.23ರಂದು ರಿಲೀಸ್ ಆಯಿತು. ಜನ ನಾಯಗನ್ ಅಂತಿಮವಾಗಿ ವಿಶ್ವಾದ್ಯಂತ ಥಿಯೇಟರ್ಗಳಿಗೆ ತಲುಪಿತು.
‘ತಲಪತಿ’ ವಿಜಯ್ ನಟಿಸಿದ ‘ಜನ ನಾಯಗನ್’ ಸಿನಿಮಾ ಭಾರತದಲ್ಲಿ 13,067 ಶೋಗಳಲ್ಲಿ ₹ 41 ಕೋಟಿ ನೆಟ್ ಮತ್ತು ₹ 48.27 ಕೋಟಿ ಗ್ರಾಸ್ ಕಲೆಕ್ಷನ್ ಆಗಿದೆ. ಚಿತ್ರವು ಚಿತ್ರಮಂದಿರಗಳಲ್ಲಿ ಸರಾಸರಿ ಶೇ. 41.6 ರಷ್ಟು ಪ್ರೇಕ್ಷಕರಿದ್ದರು.
ಚಿತ್ರದ ಆರಂಭಿಕ ದಿನದ ಗಳಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ತಮಿಳು ವರ್ಷನ್. ಇದು ಭಾರತದಲ್ಲಿ ₹ 41 ಕೋಟಿ ನಿವ್ವಳ ಗಳಿಕೆಯಲ್ಲಿ ₹ 36.50 ಕೋಟಿಯನ್ನು ತಮಿಳು ಗಳಿಸಿದೆ. 7,585 ಪ್ರದರ್ಶನಗಳಲ್ಲಿ 60% ಆಕ್ಯುಪೆನ್ಸಿ ಹೊಂದಿದೆ. ತೆಲುಗು ವರ್ಷನ್ ₹ 2.75 ಕೋಟಿ ಗಳಿಸಿದೆ. 1,502 ಪ್ರದರ್ಶನಗಳಲ್ಲಿ 30% ಆಕ್ಯುಪೆನ್ಸಿ ಹೊಂದಿದೆ.
ಆದರೆ ಹಿಂದಿ ಡಬ್ಬಿಂಗ್ ಪ್ರದರ್ಶನಗಳು ಅಂಥಹ ದೊಡ್ಡ ಒಪನಿಂಗ್ ಕಂಡಿಲ್ಲ. 3,980 ತೆರೆಯ ಮೇಲೆ ಸಿನಿಮಾ ಬಿಡುಗಡೆಯಾದರೂ ₹ 1.75 ಕೋಟಿ ಅಷ್ಟೇ ಸಂಗ್ರಹಿಸಿದೆ. ಕೇವಲ 11% ಆಕ್ಯುಪೆನ್ಸಿಯನ್ನು ದಾಖಲಿಸಿದೆ.
ಒಟ್ಟಾರೆಯಾಗಿ, ತಮಿಳು ವರ್ಷನ್ ಸಿನಿಮಾದಲ್ಲಿಯೇ ಜನ ನಾಯಗನ್ ಭಾರತದಲ್ಲಾದ ಒಟ್ಟು ಗಳಿಕೆಯ ಸುಮಾರು 89% ರಷ್ಟಿದೆ.
ಈ ಚಿತ್ರವು ವಿದೇಶಗಳಲ್ಲಿ ರಿಲೀಸ್ ಆಗಿದ್ದು ₹ 30 ಕೋಟಿಗಳಷ್ಟು ಒಟ್ಟು ಹಣವನ್ನು ಸಂಗ್ರಹಿಸಿದೆ. ದೇಶೀಯ ಗಳಿಕೆಯನ್ನು ಪರಿಗಣಿಸಿದರೆ, ಜನ ನಾಯಗನ್ ಚಿತ್ರದ ವಿಶ್ವಾದ್ಯಂತ ಒಟ್ಟು ಸಂಗ್ರಹ ₹ 78.27 ಕೋಟಿ ತಲುಪಿದೆ.
2026 ರ ಅತಿದೊಡ್ಡ ಮತ್ತು ವಿವಾದಾತ್ಮಕ ರಿಲೀಸ್ಗಳಲ್ಲಿ ಒಂದಾದ ಜನ ನಾಯಗನ್, ಭಾರತದಲ್ಲಿ ₹50 ಕೋಟಿ ಗಡಿ ದಾಟುವ ನಿರೀಕ್ಷೆಯಿತ್ತು. ವಿಜಯ್ ಅವರ ಲಿಯೋ ( ₹ 64.80 ಕೋಟಿ), ರಜನಿಕಾಂತ್ ಅವರ ಕೂಲಿ ( ₹ 65 ಕೋಟಿ), 2.0 ( ₹ 60.25 ಕೋಟಿ), ವಿಜಯ್ ಅವರ ಬೀಸ್ಟ್ ( ₹ 49.30 ಕೋಟಿ) ಮತ್ತು ಅವರ ಗೋಸ್ಟ್ ( ₹44 ಕೋಟಿ) ಗಳಿಸಿದೆ. ಈ ಸಿನಿಮಾಗಳ ಕೆಲವೊಂದು ದಾಖಲೆಯ ಓಪನಿಂಗ್ ಡೇ ಕಲೆಕ್ಷನ್ ರೆಕಾರ್ಡ್ ಬ್ರೇಕ್ ಮಾಡಲು ವಿಫಲವಾಯಿತು.
ಎಚ್ ವಿನೋತ್ ನಿರ್ದೇಶನದ, ಜನ ನಾಯಕನ್, ವಿಜಯ್ ಜೊತೆಗೆ, ಮಮಿತಾ ಬೈಜು, ಪ್ರಕಾಶ್ ರಾಜ್, ಬಾಬಿ ಡಿಯೋಲ್, ಗೌತಮ್ ವಾಸುದೇವ್ ಮೆನನ್, ಪ್ರಿಯಾಮಣಿ ಮತ್ತು ನರೇನ್ ಸೇರಿದಂತೆ ಸಮಗ್ರ ತಾರಾಗಣವನ್ನು ಒಳಗೊಂಡಿದೆ.
ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಅವರ ಸಂಗೀತ, ಸತ್ಯನ್ ಸೂರ್ಯನ್ ಅವರ ಛಾಯಾಗ್ರಹಣ, ಪ್ರದೀಪ್ ಇ ರಾಗವ್ ಅವರ ಸಂಕಲನ ಮತ್ತು ವಿ ಸೆಲ್ವಕುಮಾರ್ ಅವರ ನಿರ್ಮಾಣ ವಿನ್ಯಾಸವಿದೆ.
ಈ ವರ್ಷದ ಆರಂಭದಲ್ಲಿ ಪೊಂಗಲ್ ಹಬ್ಬದ ಸಂದರ್ಭದಲ್ಲಿ ಜನವರಿ 9 ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರ, ಸುಮಾರು ಏಳು ತಿಂಗಳ ವಿಳಂಬದ ನಂತರ ಅಂತಿಮವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.
ಚಿತ್ರದಲ್ಲಿನ ಕೆಲವು ದೃಶ್ಯಗಳು ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡಬಹುದು ಎಂಬ ಕಾರಣಕ್ಕೆ ಸಿಬಿಎಫ್ಸಿ ಸೆನ್ಸಾರ್ ಸರ್ಟಿಫಿಕೇಟ್ ತಡೆಹಿಡಿಯಲು ನಿರ್ಧರಿಸಿದಾಗ, ಪ್ರಮಾಣೀಕರಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಚಿತ್ರವು ತೊಂದರೆಗೆ ಸಿಲುಕಿತು.
ತಮಿಳಗ ವೆಟ್ರಿ ಕಳಗಂ (ಟಿವಿಕೆ) ನಾಯಕನಾಗಿ ಶಾಶ್ವತವಾಗಿ ರಾಜಕೀಯಕ್ಕೆ ತೆರಳುವ ಮೊದಲು ವಿಜಯ್ ಅವರ ‘ಕೊನೆಯ’ ಚಿತ್ರ ಇದಾಗಿದೆ.













