Last Updated:
ಕರಾವಳಿ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಗ್ತಾನೇ ಇದೆ. ಬೆಂಗಳೂರು ಜನ ಕೂಡ ಇದನ್ನ ಕೊಂಡಾಡಿದ್ದಾರೆ. ಕರಾವಳಿ ಬದಲು, ಮಹಾಬಲ ಮಹಾವೀರ ಅಂತ ಚಿತ್ರಕ್ಕೆ ಹೆಸರು ಇಡಬೇಕಿತ್ತು ಅಂತೂ ಸಲಹೆ ಕೊಟ್ಟಿದ್ದಾರೆ. ಈ ರಿಯಾಕ್ಷಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ಕರಾವಳಿ ಚಿತ್ರ (Karavali Movie) ಗೆದ್ದೇ ಬಿಡ್ತು ನೋಡಿ. ಈ ಒಂದು ಅಭಿಪ್ರಾಯ ಪಬ್ಲಿಕ್ ರಿಯಾಕ್ಷನ್ (Public Reaction) ನೋಡಿದ್ರೇನೆ ಬರ್ತಿದೆ. ರಾಜ್ಯದ ನಾಲ್ಕು ಕಡೆ ಈ ಚಿತ್ರದ ಪ್ರೀಮಿಯರ್ ಆಗಿದೆ. ಎಲ್ಲೆಡೆ ಒಂದೇ ರೀತಿಯ ರಿಯಾಕ್ಷನ್ (Reaction) ಬಂದಿದೆ. ಬೆಂಗಳೂರು ಪ್ರೀಮಿಯರ್ ಶೋದಲ್ಲು (Bengaluru Premiere Show) ಜನ ಇದನ್ನ ಮೆಚ್ಚಿಕೊಂಡಿದ್ದಾರೆ. ಸೆಲೆಬ್ರಿಟಿಗಳು ಈ ಚಿತ್ರ ಮೆಚ್ಚಿಕೊಂಡಿದ್ದಾರೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.
ಮಹಾವೀರ-ಮಹಾಬಲ...
ಕರಾವಳಿ ಚಿತ್ರದ ಪಬ್ಲಿಕ್ ರಿಯಾಕ್ಷನ್
ಮಹಾವೀರ ಪಾತ್ರಧಾರಿ ರಾಜ್ ಬಿ ಶೆಟ್ಟಿ ತೆರೆ ಮೇಲೆ ಬಂದಾಗ ಕರೆಂಟ್ ಪಾಸ್ ಆಗುತ್ತದೆ. ಆ ರೀತಿನೇ ಈ ಚಿತ್ರ ಇದೆ ಅಂತಲೇ ಪ್ರೀಮಿಯರ್ ಶೋದಲ್ಲಿ ಹೇಳಿದ್ದಾರೆ.
ಚಿತ್ರದಲ್ಲಿ ಮಹಾಬಲ ಪಾತ್ರಧಾರಿ ಮಿತ್ರ ಕೂಡ ಜನರ ಹೃದಯ ಗೆದ್ದು ಬಿಟ್ಟಿದ್ದಾರೆ. ಒಂದು ಎರಡೋ ಕಡೆ ಹೀಗೆ ಹೇಳ್ತಾರೆ ಅನ್ನೋ ಹಾಗಿಲ್ಲ. ಆದರೆ, ಎಲ್ಲಿ ಶೋ ಆಗಿದೆಯೋ ಅಲ್ಲಿ ಈ ಎರಡೂ ಪಾತ್ರದ ಕುರಿತು ಜನ ಮಾತನಾಡಿದ್ದಾರೆ.
ಬೆಂಗಳೂರಿನ ಜನ ಈ ಚಿತ್ರವನ್ನ ರಿಲೀಸ್ ಒಂದು ದಿನ ಮುಂಚೇನೆ ನೋಡಿದ್ದಾರೆ. ನೋಡಿದ್ಮೇಲೆ ತಮ್ಮ ಪ್ರಾಮಾಣಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕನ್ನಡ ಚಿತ್ರರಂಗ ಕಮ್ಬ್ಯಾಕ್ ಮಾಡಿದೆ ಅನ್ನುವ ಅರ್ಥದಲ್ಲೂ ಅನೇಕರು ಹೇಳಿರೋದು ಇದೆ.
ಕರಾವಳಿ ಚಿತ್ರಕ್ಕೆ ಉತ್ತಮ ಅಭಿಪ್ರಾಯಗಳೇ ಬರ್ತಿವೆ. ಇದರಿಂದ ಇಡೀ ತಂಡಕ್ಕೆ ತುಂಬಾನೆ ಖುಷಿ ಆಗಿದೆ. ಇದನ್ನ ರಾಜ್ ಬಿ ಶೆಟ್ಟಿ, ಗುರುದತ್ತ ಗಾಣಿಗ, ಮಿತ್ರ ಅವರ ಮೊಗದಲ್ಲಿಯೇ ನೋಡಬಹುದು.
ಮಹಾಬಲ-ಮಹಾವೀರ ಪಾತ್ರಕ್ಕೆ ಕಳೆದೇ ಹೋದ ಜನ
ಕನ್ನಡದ ಕರಾವಳಿ ಸಿನಿಮಾ ಈ ವರ್ಷದ ಅತಿ ದೊಡ್ಡ ಹಿಟ್ ಅನ್ನುವ ಅರ್ಥದಲ್ಲೂ ಅನೇಕ ಜನರು ಅಭಿಪ್ರಾಯ ಪಟ್ಟಿದ್ದಾರೆ. ಆ ಮಟ್ಟಿಗೇನೆ ಈ ಚಿತ್ರ ಜನರ ಮನಸ್ಸನ್ನ ಗೆದ್ದು ಬಿಟ್ಟಿದೆ.
ಜುಲೈ-24 ರಂದು ಚಿತ್ರ ರಿಲೀಸ್ ಆಗಿದೆ. ಈಗಾಗಲೇ ಈ ಚಿತ್ರಕ್ಕೆ ಒಳ್ಳೆ ಅಭಿಪ್ರಾಯ ಬಂದಿವೆ. ರಿಲೀಸ್ ಆದ ಮೊದಲ ದಿನ ಜನ ಈ ಚಿತ್ರವನ್ನ ಹೇಗೆ ತೆಗೆದುಕೊಳ್ಳುತ್ತಾರೆ ಅನ್ನುವ ಕುತೂಹಲವು ಇವೆ. ಇದರ ಹೊರತಾಗಿ ಈ ಚಿತ್ರದಲ್ಲಿ ಸಾಕಷ್ಟು ವಿಷಯ ಇದೆ.
ಕರಾವಳಿಯಲ್ಲಿ ಕಂಬಳದ ವಿಚಾರವಾಗಿ ಏನೆಲ್ಲ ಆಗುತ್ತದೆ. ಯಾವ ರೀತಿ ಒಂದು ಕಂಬಳಕ್ಕೆ ತಯಾರಿ ನಡೆಸುತ್ತಾರೆ ಅನ್ನೋದು ಇದರಲ್ಲಿದೆ. ಆದರೆ, ಇಲ್ಲಿ ಎಮೋಷನಲ್ ಸ್ಟೋರಿನೂ ಇದೆ.
ಈ ಒಂದು ಎಮೋಷನಲ್ ಸ್ಟೋರಿಯಲ್ಲಿ ಮಹಾವೀರ ಮತ್ತು ಮಹಾಬಲ ಎಲ್ಲರನ್ನೂ ಅಳಿಸಿ ಬಿಡ್ತಾರೆ. ಆ ರೀತಿನೇ ಇವರು ಇದರಲ್ಲಿ ನಟಿಸಿದ್ದಾರೆ. ಪ್ರಜ್ವಲ್ ದೇವರಾಜ್ ಕೂಡ ಈ ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ ಅನ್ನುವ ಅಭಿಪ್ರಾಯ ಕೂಡ ಬಂದಿವೆ ಅಂತಲೇ ಹೇಳಬಹುದು.
Bangalore [Bangalore],Bangalore,Karnataka
Jul 24, 2026 10:22 AM IST














