Dam Water Level: ಮಳೆ ಕೈಕೊಟ್ಟ ಪರಿಣಾಮ ಜಲಾಶಯಗಳಲ್ಲಿ ನೀರು ಎಷ್ಟು? KRS, ಆಲಮಟ್ಟಿ, ತುಂಗಭದ್ರ ಸೇರಿ ಎಲ್ಲ ಡ್ಯಾಂಗಳ ಲೇಟೆಸ್ಟ್ ಮಾಹಿತಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಜಲಾಶಯಗಳ ನೀರಿನ ಮಟ್ಟ


Last Updated:

ರಾಜ್ಯದ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿತ. ಕೆಆರ್‌ಎಸ್‌ನಲ್ಲಿ 35.87%, ತುಂಗಭದ್ರಾದಲ್ಲಿ 24.08% ನೀರು. ಮಳೆ ಕೊರತೆಯಿಂದ ರೈತರಿಗೆ ಆತಂಕ, ಕುಡಿಯುವ ನೀರಿಗೂ ಸಮಸ್ಯೆ.

ಜಲಾಶಯಗಳ ನೀರಿನ ಮಟ್ಟ
ಜಲಾಶಯಗಳ ನೀರಿನ ಮಟ್ಟ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ (Rain) ನಿರೀಕ್ಷಿತ ಮಟ್ಟದಲ್ಲಿ ಸುರಿಯದ ಪರಿಣಾಮ ಹಲವು ಪ್ರಮುಖ ಜಲಾಶಯಗಳಲ್ಲಿ (Reservoir) ನೀರಿನ (Water) ಸಂಗ್ರಹ ಇನ್ನೂ ತೃಪ್ತಿಕರ ಮಟ್ಟ ತಲುಪಿಲ್ಲ. ವಿಶೇಷವಾಗಿ ಕಾವೇರಿ ಕಣಿವೆಯ ಜಲಾಶಯಗಳ ಸ್ಥಿತಿ ಸರ್ಕಾರ ಹಾಗೂ ರೈತರ (Farmer) ಆತಂಕವನ್ನು ಹೆಚ್ಚಿಸಿದ್ದು, ಮುಂದಿನ ಕೆಲವು ವಾರಗಳ ಮಳೆಯೇ ನೀರಿನ ಲಭ್ಯತೆಯನ್ನು ನಿರ್ಧರಿಸುವಂತಿದೆ.ಜುಲೈ 16ರಂದು ಬಿಡುಗಡೆಯಾದ ಅಂಕಿ-ಅಂಶಗಳ ಪ್ರಕಾರ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹೀಗಿದೆ.

ಕೆಆರ್‌ಎಸ್, ತುಂಗಭದ್ರಾದಲ್ಲಿ ನೀರಿಲ್ಲ

ರಾಜ್ಯದ ಜೀವನಾಡಿ ಎಂದೇ ಕರೆಯಲ್ಪಡುವ ಕೆಆರ್‌ಎಸ್ ಜಲಾಶಯದ ಸ್ಥಿತಿ ಈಗ ತೀವ್ರ ಕಳವಳಕಾರಿಯಾಗಿದೆ. ಗರಿಷ್ಠ 49.45 ಟಿಎಂಸಿ ಸಾಮರ್ಥ್ಯವಿರುವ ಈ ಬೃಹತ್ ಡ್ಯಾಂನಲ್ಲಿ ಕೇವಲ 35.87% (9.36 ಟಿಎಂಸಿ) ನೀರು ಮಾತ್ರ ಉಳಿದಿದೆ. ಇನ್ನು ಉತ್ತರ ಕರ್ನಾಟಕದ ರೈತರ ಪಾಲಿನ ಆಶಾಕಿರಣವಾದ ತುಂಗಭದ್ರಾ ಡ್ಯಾಂನಲ್ಲೂ ಕೇವಲ 24.08% ನೀರಿದ್ದು, ಇದು ಕೃಷಿ ಚಟುವಟಿಕೆಗಳಿಗೆ ದೊಡ್ಡ ಅಡ್ಡಿಯಾಗುವ ಸೂಚನೆ ನೀಡಿದೆ.
ಎಲ್ಲಿ ಎಷ್ಟು ನೀರಿದೆ? (ಮುಖ್ಯ ಅಂಕಿಸಂಖ್ಯೆಗಳು)

ವಾಣಿವಿಲಾಸ ಸಾಗರ: 78.93% (ಸದ್ಯಕ್ಕೆ ನೆಮ್ಮದಿ)

ಆಲಮಟ್ಟಿ: 72.42%

ಹಾರಂಗಿ: 63.36%

ಕಬಿನಿ: 62.13%

ಮಲಪ್ರಭಾ: ಕೇವಲ 33.13%

ಭೀಮಾ ಲಿಫ್ಟ್ ಡ್ಯಾಂ: ಕೇವಲ 7.39% (ಅತ್ಯಂತ ಕನಿಷ್ಠ)

ಮಳೆರಾಯ ಕೈಕೊಟ್ಟರೆ ಗತಿ ಏನು?

ಪ್ರಮುಖ ಜಲಾಶಯಗಳಿಗೆ ಒಳಹರಿವು ಅತ್ಯಂತ ಕಡಿಮೆಯಿದೆ. ತುಂಗಭದ್ರಾಗೆ ಕೇವಲ 4,860 ಕ್ಯೂಸೆಕ್ಸ್ ಮತ್ತು ಕೆಆರ್‌ಎಸ್‌ಗೆ ಕೇವಲ 1,909 ಕ್ಯೂಸೆಕ್ಸ್ ನೀರು ಮಾತ್ರ ಹರಿದುಬರುತ್ತಿದೆ. ಮುಂದಿನ ಕೆಲವೇ ದಿನಗಳಲ್ಲಿ ರಾಜ್ಯದ ಪ್ರಮುಖ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗದಿದ್ದರೆ, ಕುಡಿಯುವ ನೀರು ಮತ್ತು ನೀರಾವರಿಗಾಗಿ ರಾಜ್ಯ ಸರ್ಕಾರ ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ.
ಕೃಷಿ ಚಟುವಟಿಕೆಗಳಿಗೆ ಸಂಕಷ್ಟ

ಜಲಾಶಯಗಳ ಮಟ್ಟ ಹೀಗೆಯೇ ಮುಂದುವರಿದರೆ, ಬೆಳೆಗಳಿಗೆ ನೀರು ಹರಿಸುವುದು ಸವಾಲಾಗಲಿದೆ. ಕೃಷಿಕರು ತಮ್ಮ ಪಂಪ್‌ಸೆಟ್‌ಗಳನ್ನು ನಂಬಿ ಬೆಳೆ ಬೆಳೆಯುವ ಮುನ್ನ ಎಚ್ಚರ ವಹಿಸಬೇಕಾದ ಪರಿಸ್ಥಿತಿ ಇದೆ. ಸದ್ಯದ ಮಟ್ಟಿಗೆ ಇಡೀ ರಾಜ್ಯದ ನೀರಾವರಿ ವ್ಯವಸ್ಥೆ ಸಂಪೂರ್ಣವಾಗಿ ಮುಂಗಾರು ಮಳೆಯ ಕೃಪೆಯ ಮೇಲೆ ಅವಲಂಬಿತವಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed