Last Updated:
ಮುಂಗಾರು ಮಳೆ ಕರಾವಳಿ ಭಾಗಕ್ಕೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ 500 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಹೊಸ ತಳಿಯನ್ನ ಪ್ರಾಯೋಗಿಕವಾಗಿ ಬೆಳೆಸಲು ಸಿದ್ಧತೆ ನಡೆಸಲಾಗಿದೆ. ಈ ಮೂಲಕ ಈ ಭಾಗದ ಕೃಷಿಕರನ್ನು ಹೊಸ ತಳಿಯತ್ತ ಆಕರ್ಷಿಸಲು ಯೋಜನೆ ರೂಪಿಸಲಾಗಿದೆ.
ಪುತ್ತೂರು: ಮುಂಗಾರು ಮಳೆ ಶುರುವಾದರೆ (Monsoon Rains) ರೈತರಿಗೆ ಎಲ್ಲಿಲ್ಲದ ಸಂತಸ. ಏಕೆಂದರೆ ಬೇಸಿಗೆಯಲ್ಲಿ ಮಳೆಯಿಲ್ದೆ (Summer). ಬೆಳೆ ಬೆಳೆಯೋಕೆ ಒದ್ದಾಡ್ತಿದ್ರು. ಆದರೆ ಮುಂಗಾರು ಮಳೆ ಬಂದ್ರೆ ಕೃಷಿ ಚಟುವಟಿಕೆಗಳೆಲ್ಲಾ (Agricultural Activities) ಶುರುವಾಗುತ್ತೆ. ಭೂ ಒಡಲಲ್ಲಿ ಬಂಗಾರದಂತ ಬೆಳೆ ಬೆಳೆಯೋಕೆ ಅನ್ನದಾತರು ಸಜ್ಜಾಗ್ತಾರೆ. ಇದೀಗ ಕರಾವಳಿಯಲ್ಲೂ ಉತ್ತಮ ಮಳೆಯಾಗ್ತಿರೋದ್ರಿಂದ ಕೃಷಿಕರೆಲ್ಲಾ (Farmers) ಜಮೀನಿನತ್ತ ಮುಖಮಾಡಿದ್ದಾರೆ. ಆದರೆ ಈ ಬಾರಿ ಭತ್ತದ ಬೆಳೆಗೆ ಹೆಚ್ಚು ಒತ್ತು ಕೊಟ್ಟು ಸಹ್ಯಾದ್ರಿ ಬ್ರಹ್ಮ (Paddy Rice Cultivation) ಅನ್ನೋ ಹೊಸ ಭತ್ತದ ತಳಿ ಬೆಳೆಯೋಕೆ ಒಲವು ತೋರಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಮುಂಗಾರಿ ಮಳೆ ಆರ್ಭಟ ಜೋರಾಗಿದೆ. ಕಳೆದೆರಡು ದಿನದಿಂದ ಮಳೆರಾಯ ಅಬ್ಬರಿಸ್ತಿದ್ದಾನೆ. ಬಿಸಿಲಿಗೆ ಕಾದುಕೆಂಡವಾಗಿದ್ದ ಭೂಮಿ ತಂಪಾಗಿದೆ. ಹೀಗಾಗಿ ಅನ್ನಾದಾತರು ಬಿತ್ತನೆ ಬೀಜ, ಕೃಷಿ ಪರಿಕರಗಳು, ಹಸಿರೆಲೆ ಗೊಬ್ಬರವನ್ನ ಸಿದ್ಧ ಪಡಿಸಿಕೊಳ್ತಿದ್ದಾರೆ. ಮೊದ್ಲೆಲ್ಲಾ ಎಂ.4 ಭದ್ರಾ ತಳಿಯನ್ನ ಹೆಚ್ಚಾಗಿ ಬೆಳೆಯುತ್ತಿದ್ರೆ. ಆದರೆ ಅದರಲ್ಲಿ ಉತ್ತಮ ಇಳುವರಿ ಸಿಗದ ಕಾರಣ ಹೊಸ ತಳಿಯತ್ತ ಮುಖ ಮಾಡಿದ್ದಾರೆ. ಈ ಬಾರಿ ಸಹ್ಯಾದ್ರಿ ಬ್ರಹ್ಮ ಅನ್ನೋ ಭತ್ತದ ತಳಿಯನ್ನ 500 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲು ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಕಳೆದ ವರ್ಷದಂತೆ ಈ ಬಾರಿಯೂ ಭತ್ತದ ಕೃಷಿಯಲ್ಲಿ ತಮ್ಮ ಗುರಿಯನ್ನು ಸಾಧಿಸಲಿದೆ.
ಜಿಲ್ಲಾ ಕೃಷಿ ಇಲಾಖೆಯಿಂದ ಕೃಷಿ ಭಾಗ್ಯ ಯೋಜನೆ, ಕೃಷಿಯಂತ್ರೀಕರಣ, ತುಂತುರು ನೀರಾವರಿಯ ಸೌಲಭ್ಯಗಳನ್ನು ನೀಡಲಾಗಿದೆ. 241 ಕೃಷಿ ಹೊಂಡಗಳು, 2,100 ರೈತರಿಗೆ ಸಬ್ಸಿಡಿ ದರದಲ್ಲಿ ಕೃಷಿ ಯಂತ್ರೋಪಕರಣಗಳ ವಿತರಣೆ, 3,751 ತುಂತುರು ನೀರಾವರಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕಾಲಕ್ಕೆ ತಕ್ಕಂತೆ ಜಿಲ್ಲೆಯ ಜನ ತಮ್ಮ ಕೃಷಿಯನ್ನೂ ಬದಲಾಯಿಸಿದ್ದು, ಹೆಚ್ಚಿನ ಕೃಷಿಕರು ಭತ್ತ ಬಿಟ್ಟು ತೋಟಗಾರಿಕಾ ಬೆಳೆಯತ್ತ ವಾಲಿದ್ದಾರೆ. ಆದ್ರೆ ಭತ್ತದ ಕೃಷಿಯನ್ನು ಯಾವುದೇ ಲಾಭದ ದೃಷ್ಟಿಯಿಂದ ನೋಡದೆ ಬೆಳೆ ಮಾಡುವ ಹಲವು ಕೃಷಿಕರು ಜಿಲ್ಲೆಯಲ್ಲಿದ್ದು, ಬಂಟ್ವಾಳ ತಾಲೂಕಿನ ಸಚಿಪನಡುವಿನ ಕೃಷಿಕ ಪ್ರಭಾಕರ ಶೆಟ್ಟಿ ಇಂಥಹ ಕೃಷಿಕರಲ್ಲಿ ಒಬ್ಬರಾಗಿದ್ದಾರೆ.
ನ್ಯೂಸ್18 ಕನ್ನಡದೊಂದಿಗೆ ಮಾತನಾಡಿದ ದಕ್ಷಿಣಕನ್ನಡ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ , ಇಲ್ಲಿ ನಾವು ತುಂಬಾ ವರ್ಷಗಳಿಂದ ಭದ್ರಾ ತಳಿಯನ್ನ ಬೆಳೆಯುತ್ತಿದ್ದೇವು, ಆದರೆ ಈಗ ಕೇಂದ್ರ ಸರ್ಕಾರ ಪ್ರಯೋತ್ಸಹದ ಹಣ ಸಿಗುತ್ತಿಲ್ಲ. ಆದ್ದರಿಂದ ಈ ಬಾರಿ ನಾವು ಸಹ್ಯಾದ್ರಿ ಬ್ರಹ್ಮ ತಳಿಯ ಭತ್ತ ಬೆಳೆಯಲು ಪ್ರತ್ಯಾಕ್ಷಿಕೆಯ ಮೂಲಕ ಬೆಳೆಯಲು ಮುಂದಾಗಿದ್ದೇವೆ ಎಂದು ವಿವರಿಸಿದ್ದಾರೆ.
ನ್ಯೂಸ್18 ಕನ್ನಡದೊಂದಿಗೆ ಮಾತನಾಡಿದ ಭತ್ತ ಬೆಳೆಗಾರ ಪ್ರಭಾಕರ ಶೆಟ್ಟಿ, ಬೇಗ ಭತ್ತ ನಾಟಿ ಮಾಡಿದರೆ ಕೊಯ್ಲು ಸಂದರ್ಭದಲ್ಲಿ ಸಮಸ್ಯೆ ಆಗಲಿದೆ. ಏಕೆಂದರೆ ಕೊಯ್ಲ ಮಾಡಲು ಮಿಷನ್ ಬಳಕೆ ಮಾಡುತ್ತೇವೆ. ಇದಕ್ಕೆ ಉತ್ತಮ ವಾತಾವರಣ ಇರ್ಬೇಕು. ಆದರೆ ಇದರಿಂದ ಏನು ಉಳಿಯೋದಿಲ್ಲ. ಮಕ್ಕಳು ಕೂಡ ಗದ್ದೆ ಮಾಡೋದು ಬೇಡ, ತೋಟವನ್ನೇ ನೋಡಿಕೊಂಡು ಇಡೀ ಎಂದು ಹೇಳ್ತಿದ್ದಾರೆ. ನಮಗೆ ಭಕ್ತ ಮಾಡೋದು ಬಹಳ ಇಷ್ಟ ಅದಕ್ಕೆ ಮಾಡ್ತಿದ್ದೇವೆ ಎಂದು ಹೇಳಿದರು.
Dakshina Kannada,Karnataka
Jun 13, 2026 12:18 PM IST













