Kantara: ರಿಷಬ್ ಶೆಟ್ರ ಕಾಂತಾರ ಚಿತ್ರದ ಆ ಒಂದು ಹಾಡು ಕಪೋಸ್ ಆಗಿತ್ತು; ಆದರೆ ಬಳಕೆ ಆಗಲೇ ಇಲ್ಲ! | | ACTPnews

ಕಾಂತಾರ ಚಿತ್ರದ ಆ ಒಂದು ಹಾಡು ಕಪೋಸ್ ಆಗಿತ್ತು; ಆದರೆ, ಬಳಕೆ ಆಗಲೇ ಇಲ್ಲ!


Last Updated:

ಕಾಂತಾರ ಚಿತ್ರದಲ್ಲಿ ಐದು ಹಾಡುಗಳಿದ್ದವು. ಆದರೆ, ಒಂದು ಬಳಕೆ ಆಗಲೇ ಇಲ್ಲ. ಇದು ಲವ್ ಸಾಂಗ್ ಆಗಿದ್ದರೂ ಶೆಟ್ರು ಈ ಹಾಡನ್ನ ಚಿತ್ರದಲ್ಲಿ ಉಪಯೋಗಿಸಲೇ ಇಲ್ಲ. ಈ ಹಾಡಿನ ಬಗ್ಗೆ ಅಜನೀಶ್ ಲೋಕನಾಥ್ ಈಗ ಹೇಳಿಕೊಂಡಿದ್ದಾರೆ. ಅದರ ವಿವರ ಮುಂದೆ ಇದೆ ಓದಿ.

ಕಾಂತಾರ ಚಿತ್ರದ ಆ ಒಂದು ಹಾಡು ಕಪೋಸ್ ಆಗಿತ್ತು; ಆದರೆ, ಬಳಕೆ ಆಗಲೇ ಇಲ್ಲ!
ಕಾಂತಾರ ಚಿತ್ರದ ಆ ಒಂದು ಹಾಡು ಕಪೋಸ್ ಆಗಿತ್ತು; ಆದರೆ, ಬಳಕೆ ಆಗಲೇ ಇಲ್ಲ!

ಕಾಂತಾರ ಚಿತ್ರದಲ್ಲಿ (Kantara Movie) ಎಲ್ಲವೂ ಇದೆ. ರೋಮ್ಯಾಂಟಿಕ್ ಹಾಡು (Romantic Song) ಇದೆ. ವರಾಹ ರೂಪಂ ಹಾಡು ಕೂಡ ಇದೆ. ಆದರೆ, ಈ ಸಿನಿಮಾದಲ್ಲಿ ಒಂದು ಹಾಡನ್ನ ಬಳಕೆ ಮಾಡಲು ಆಗಲೇ ಇಲ್ಲ. ಚಿತ್ರದ ಒಂದು ವಿಶೇಷ ಸನ್ನಿವೇಶಕ್ಕಾಗಿಯೇ ಈ ಒಂದು ಗೀತೆಯನ್ನ ಕಂಪೋಜ್ (Song Compose) ಮಾಡಿದ್ದರು. ಆದರೆ, ಚಿತ್ರದಲ್ಲಿ ಈ ಹಾಡಿನ BGM ಮಾತ್ರ ಬಳಕೆ ಆಗಿದೆ. ಅದ್ಯಾವ ಹಾಡು ಮತ್ತು ಚಿತ್ರದಲ್ಲಿ ಒಟ್ಟು ಅದೆಷ್ಟು ಹಾಡುಗಳು ಇದ್ದವು ಅನ್ನೋದನ್ನ ಅಜನೀಶ್ ಲೋಕನಾಥ್ (Ajaneesh Lokanath) ಮತ್ತೆ ಹೇಳಿಕೊಂಡಿದ್ದಾರೆ. ಇವರ ಮಾತುಗಳಲ್ಲಿ ಕಾಂತಾರ ಚಿತ್ರದ ಸುತ್ತ ಇರೋ ಇಂಟ್ರಸ್ಟಿಂಗ್ ವಿಚಾರ ರಿವೀಲ್ ಆಗಿವೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ಕಾಂತಾರ ಆ ಹಾಡಿನ ಸೀಕ್ರೆಟ್

ಕಾಂತಾರ ಚಿತ್ರದಲ್ಲಿರೋ ಅಷ್ಟು ಹಾಡು ಚೆನ್ನಾಗಿವೆ. ಪ್ರತಿ ಒಂದು ಹಾಡಿನಲ್ಲೂ ವಿಶೇಷತೆ ಇದೆ. ವರಾಹ ರೂಪಂ ಹಾಡು ಇಂದಿಗೂ ಭಕ್ತಿ ಭಾವವನ್ನ ಮೂಡಿಸಿತ್ತದೆ. ಅಷ್ಟೊಂದು ಪ್ರಭಾವವನ್ನ ಈ ಹಾಡು ಈಗಲೂ ಬಿರುತ್ತದೆ.

ajaneesh lokanath share unknown facts of kantara movie songs

ಕಾಂತಾರ ಚಿತ್ರದ ಆ ಒಂದು ಹಾಡು ಕಪೋಸ್ ಆಗಿತ್ತು; ಆದರೆ, ಬಳಕೆ ಆಗಲೇ ಇಲ್ಲ!

ಇನ್ನು ಸಿಂಗಾರ ಸಿರಿಯೇ ಹಾಡಿನ ಮೋಡಿ ಬೇರೆ ಇದೆ. ಈಗ ಕೇಳಿದರೂ ಈ ಗೀತೆ ಇಷ್ಟವಾಗುತ್ತದೆ. ಮತ್ತೆ ತಾಜಾ ಫೀಲ್ ಕೊಡುತ್ತದೆ. ಆ ರೀತಿನೇ ಈ ಹಾಡಿದೆ.

ಕರ್ಮದ ಕಲ್ಲನು…

ಕರ್ಮದ ಕಲ್ಲನು ಹಾಡಿನ ಮೋಡಿನೇ ಬೇರೆ ಇದೆ. ಇದನ್ನ ಕೇಳ್ತಾ ಹೋದಂತೆ ಒಂದು ವಿಶೇಷ ಭಾವನೆ ಮೂಡುತ್ತದೆ. ಇಂತಹ ಹಾಡುಗಳನ್ನ ಕೊಟ್ಟ ಅಜನೀಶ್ ಲೋಕನಾಥ್ ಒಟ್ಟು 5 ಹಾಡುಗಳನ್ನ ಈ ಕಾಂತಾರ ಚಿತ್ರಕ್ಕಾಗಿಯೇ ಮಾಡಿದ್ದರು.

ಆದರೆ, ನಾಲ್ಕು ಹಾಡುಗಳು ಮಾತ್ರ ಬಳಕೆ ಆಗಿವೆ. ಐದನೇ ಹಾಡು ಚಿತ್ರದಲ್ಲಿ ಬಳಕೆ ಆಗಿಲ್ಲ. ಬದಲಾಗಿ ಆ ಹಾಡಿನ BGM ಮಾತ್ರ ಉಪಯೋಗಿಸಲಾಗಿದೆ ಅಂತ ಅಜನೀಶ್ ಲೋಕನಾಥ್ ಹೇಳಿಕೊಂಡಿದ್ದಾರೆ.

ಆ 5 ನೇ ಹಾಡು ಯಾವುದು

ಚಿತ್ರದಲ್ಲಿ ಒಂದು ಸನ್ನಿವೇಶ ಬರುತ್ತದೆ. ನಾಯಕ ಶಿವ ಮತ್ತು ನಾಯಕಿ ಲೀಲಾ ಅವರು ಭೇಟಿ ಆಗುತ್ತಾರೆ. ಮರದ ಮೇಲೆ ಕಟ್ಟಿರೋ ಗುಡಿಸಲಿಗೆ ಇಬ್ಬರು ಜೊತೆಯಾಗಿಯೇ ಹೋಗ್ತಾರೆ. ಎಮೋಷನಲಿ ಕನೆಕ್ಟ್ ಕೂಡ ಆಗುತ್ತಾರೆ.

ajaneesh lokanath share unknown facts of kantara movie songs

ಆ 5 ನೇ ಹಾಡು ಯಾವುದು

ಈ ಒಂದು ಸಮಯಕ್ಕಾಗಿಯೇ ಒಂದು ಹಾಡನ್ನ ಅಜನೀಶ್ ಲೋಕನಾಥ್ ಕಂಪೋಸ್ ಮಾಡಿದ್ದರು. ಇದು ಒಂದು ಲವ್ ಸಾಂಗ್ ಆಗಿತ್ತು. ಆದರೆ, ಇದನ್ನ ಅಲ್ಲಿ ಬಳಕೆ ಮಾಡಲಿಲ್ಲ. ಬದಲಾಗಿ BGM ಆಗಿ ಮಾತ್ರ ಉಪಯೋಗಿಸಿದರು.

ಇದರು ಬಿಟ್ಟರೆ ಇತರ ಎಲ್ಲ ಹಾಡುಗಳು ಬಳಕೆ ಮಾಡಿದ್ದಾರೆ ಅಂತಲೇ ಅಜನೀಶ್ ಹೇಳಿಕೊಂಡಿದ್ದಾರೆ. ಆರ್‌ಜೆ ಮಯೂರ ಅವರ ಗೋಲ್ಡ್ ಕ್ಲಾಸ್ ವಿತ್ ಮಯೂರ ಸೆಲೆಬ್ರಿಟಿ ಟಾಕ್ ಶೋದಲ್ಲಿಯೇ ಅಜನೀಶ್ ಲೋಕನಾಥ್ ತಮ್ಮ ಕಾಂತಾರ ಚಿತ್ರದ ಈ ಎಲ್ಲ ವಿಚಾರಗಳನ್ನ ಹಂಚಿಕೊಂಡಿದ್ದಾರೆ.

ವರಾಹ ರೂಪಂ ವಿವಾದ

ವರಾಹ ರೂಪಂ ಹಾಡಿನ ವಿವಾದ ಏನೂ ಇಲ್ವೇ ಇಲ್ಲ. ಸಂಗೀತದ ಸ್ವರಗಳು ಅಂತ ಬಂದಾಗ ಅದನ್ನ ಬಿಟ್ಟು ಮಾಡೋಕೆ ಆಗೋದೇ ಇಲ್ಲ. ಸಂಗೀತ ಅಂತ ಬಂದಾಗ ಇದು ದೃಷ್ಟಿಕೋಣ ಅಷ್ಟೆ. ಒಬ್ಬೊಬ್ಬರಿಗೆ ಇದು ಒಂದು ರೀತಿ ಕಾಣಿಸುತ್ತದೆ.

ಆದರೆ, ಡೀಲ್ ಮಾಡಿಕೊಳ್ಳುವುದು ಅಂತ ಏನೂ ಇಲ್ಲ ಅಂತಲೇ ಅಜನೀಶ್ ಲೋಕನಾಥ್ ಹೇಳಿಕೊಂಡಿದ್ದಾರೆ. ಇನ್ನು ಕೋರ್ಟು ಕಚೇರಿ ವಿಚಾರಕ್ಕೆ ಬಂದ್ರೆ, ನವರಸಂ ಹಾಡಿನಿಂದಲೇ ವರಾಹ ರೂಪಂ ಹಾಡನ್ನ ನಕಲು ಮಾಡಿದ್ದಾರೆ ಅಂತಲೇ ತೈಕ್ಕುಡಂ ಬ್ರಿಡ್ಜ್ ತಂಡ ಕೋರ್ಟ್ ಮೆಟ್ಟಿಲೇರಿತ್ತು.

ಆದರೆ, ಕೊನೆಗೆ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಹಾಗೂ ತೈಕ್ಕುಡಂ ಬ್ರಿಡ್ಜ್ ಕೋರ್ಟ್ ಹೊರಗೆ ರಾಜಿ ಮಾಡಿಕೊಂಡವು. ಅಲ್ಲಿಗೆ ಈ ವಿವಾದಕ್ಕೆ ತೆರೆ ಬಿತ್ತು ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed