Last Updated:
ಪೋಲಿಯೊ ಬಾಧಿತ ಲಕ್ಷ್ಮೀ ರಾಯಣ್ಣವರ ಬೆಳಗಾವಿಯಿಂದ ಪ್ಯಾರಾ ಕಾಮನ್ವೆಲ್ತ್ ಗೇಮ್ಸ್ 2026 ಗ್ಲಾಸ್ಕೋಗೆ ಆಯ್ಕೆಯಾದ ಏಕೈಕ ಕರ್ನಾಟಕದ ಮಹಿಳಾ ವ್ಹೀಲ್ಚೇರ್ ಬಾಸ್ಕೆಟ್‍ಬಾಲ್ ಆಟಗಾರ್ತಿ.
ಬೆಳಗಾವಿ: ಸಾಧನೆಗೆ ಅಂಗವೈಕಲ್ಯ ಅಡ್ಡಿಯಲ್ಲ ಎಂಬುದನ್ನು ಬೆಳಗಾವಿಯ (Belagavi) ಯುವತಿಯೊಬ್ಬಳು ಸಾಬೀತುಪಡಿಸಿದ್ದಾಳೆ. ಹುಟ್ಟಿನಿಂದಲೇ ಪೋಲಿಯೊ (Polio) ಬಾಧಿತಳಾಗಿದ್ದರೂ, ಎದೆಗುಂದದ ಲಕ್ಷ್ಮೀ ರಾಯಣ್ಣವರ ಇಂದು ಭಾರತದ (India) ಹೆಮ್ಮೆಯ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾರೆ. ಸ್ಕಾಟ್ಲೆಂಡ್‍ನ ಗ್ಲಾಸ್ಕೋದಲ್ಲಿ ನಡೆಯಲಿರುವ 2026ರ ಪ್ಯಾರಾ ಕಾಮನ್‍ವೆಲ್ತ್ ಗೇಮ್ಸ್‍ಗೆ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಈಕೆ ಪಾತ್ರರಾಗಿದ್ದಾರೆ.
ರೈತ ಕುಟುಂಬದವರಾಗಿದ್ದರೂ, ಮಗಳ ಕ್ರೀಡಾ ಕನಸಿಗಾಗಿ ಪೋಷಕರು ಯಾವುದೇ ಕೊರತೆಯಾಗದಂತೆ ಬೆಂಬಲ ನೀಡಿದ್ದಾರೆ. ಗ್ವಾಲಿಯರ್, ಕೊಯಮತ್ತೂರಿನಂತಹ ದೂರದ ಸ್ಥಳಗಳಿಗೆ ತರಬೇತಿಗೆ ಕಳುಹಿಸಿ, ಅಗತ್ಯವಿರುವ ದುಬಾರಿ ವೀಲ್‍ಚೇರ್ ಮತ್ತು ಕ್ರೀಡಾ ಸಾಮಗ್ರಿಗಳನ್ನು ಒದಗಿಸಲು ಕುಟುಂಬ ಹರಸಾಹಸ ಪಟ್ಟಿದೆ.
ಇಂದು ಭಾರತೀಯ ಮಹಿಳಾ ವ್ಹೀಲ್ಚೇರ್ ಬಾಸ್ಕೆಟ್‍ಬಾಲ್ ತಂಡದ ಜೆರ್ಸಿ ತೊಟ್ಟು, ವಿಶ್ವದ ವೇದಿಕೆಯಲ್ಲಿ ಅಬ್ಬರಿಸಲು ಲಕ್ಷ್ಮೀ ಸಜ್ಜಾಗಿದ್ದಾರೆ. ಸಮಾಜದ ಟೀಕೆಗಳನ್ನೂ ಮೀರಿ ಬೆಳೆದ ಈ ಯುವತಿಯ ಪಯಣ, ಕನಸು ಕಾಣುವ ಪ್ರತಿಯೊಬ್ಬರಿಗೂ ದೊಡ್ಡ ಸ್ಫೂರ್ತಿ. ಪ್ಯಾರಾ ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಪದಕ ಗೆಲ್ಲುವುದೇ ಈಗ ಲಕ್ಷ್ಮೀ ಅವರ ಗುರಿ. ಲಕ್ಷ್ಮೀ ಅವರ ಈ ಸಾಧನೆಗೆ ಇಡೀ ದೇಶವೇ ಹಾರೈಸುತ್ತಿದೆ.
Belgaum,Belgaum,Karnataka
Commonwealth Games: ವ್ಹೀಲ್‌ಚೇರ್‌ನಲ್ಲೇ ವಿಶ್ವ ಗೆಲ್ಲಲು ಹೊರಟ ಹಳ್ಳಿಯ ಹುಡುಗಿ, ಪ್ಯಾರಾ ಕಾಮನ್‍ವೆಲ್ತ್ ಗೇಮ್ಸ್‌ಗೆ ಆಯ್ಕೆಯಾದ ಬೆಳಗಾವಿಯ ಲಕ್ಷ್ಮಿ!













