Commonwealth Games: ವ್ಹೀಲ್‌ಚೇರ್‌ನಲ್ಲೇ ವಿಶ್ವ ಗೆಲ್ಲಲು ಹೊರಟ ಹಳ್ಳಿಯ ಹುಡುಗಿ, ಪ್ಯಾರಾ ಕಾಮನ್‍ವೆಲ್ತ್ ಗೇಮ್ಸ್‌ಗೆ ಆಯ್ಕೆಯಾದ ಬೆಳಗಾವಿಯ ಲಕ್ಷ್ಮಿ! | ಬೆಳಗಾವಿ ನ್ಯೂಸ್ (Belagavi News) | ACTPnews

ಪ್ಯಾರಾ ಕಾಮನ್ವೆಲ್ತ್ ಗೇಮ್ಸ್ 2026


Last Updated:

ಪೋಲಿಯೊ ಬಾಧಿತ ಲಕ್ಷ್ಮೀ ರಾಯಣ್ಣವರ ಬೆಳಗಾವಿಯಿಂದ ಪ್ಯಾರಾ ಕಾಮನ್‍ವೆಲ್ತ್ ಗೇಮ್ಸ್ 2026 ಗ್ಲಾಸ್ಕೋಗೆ ಆಯ್ಕೆಯಾದ ಏಕೈಕ ಕರ್ನಾಟಕದ ಮಹಿಳಾ ವ್ಹೀಲ್‍ಚೇರ್ ಬಾಸ್ಕೆಟ್‍ಬಾಲ್ ಆಟಗಾರ್ತಿ.

ಪ್ಯಾರಾ ಕಾಮನ್ವೆಲ್ತ್ ಗೇಮ್ಸ್ 2026
ಪ್ಯಾರಾ ಕಾಮನ್ವೆಲ್ತ್ ಗೇಮ್ಸ್ 2026

ಬೆಳಗಾವಿ: ಸಾಧನೆಗೆ ಅಂಗವೈಕಲ್ಯ ಅಡ್ಡಿಯಲ್ಲ ಎಂಬುದನ್ನು ಬೆಳಗಾವಿಯ (Belagavi) ಯುವತಿಯೊಬ್ಬಳು ಸಾಬೀತುಪಡಿಸಿದ್ದಾಳೆ. ಹುಟ್ಟಿನಿಂದಲೇ ಪೋಲಿಯೊ (Polio) ಬಾಧಿತಳಾಗಿದ್ದರೂ, ಎದೆಗುಂದದ ಲಕ್ಷ್ಮೀ ರಾಯಣ್ಣವರ ಇಂದು ಭಾರತದ (India) ಹೆಮ್ಮೆಯ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾರೆ. ಸ್ಕಾಟ್ಲೆಂಡ್‍ನ ಗ್ಲಾಸ್ಕೋದಲ್ಲಿ ನಡೆಯಲಿರುವ 2026ರ ಪ್ಯಾರಾ ಕಾಮನ್‍ವೆಲ್ತ್ ಗೇಮ್ಸ್‍ಗೆ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಈಕೆ ಪಾತ್ರರಾಗಿದ್ದಾರೆ.

ಕಚ್ಚಾ ರಸ್ತೆಯೇ ಕ್ರೀಡಾಂಗಣವಾಯಿತು

ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಆಲದಕಟ್ಟಿ ಕೆ.ಎಂ. ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದ ಲಕ್ಷ್ಮೀ, ಕಠಿಣ ಪರಿಸ್ಥಿತಿಗಳ ನಡುವೆಯೂ ಕ್ರೀಡಾ ಕನಸನ್ನು ಜೀವಂತವಾಗಿರಿಸಿಕೊಂಡಿದ್ದರು. ಹಳ್ಳಿಯಲ್ಲಿ ಬಾಸ್ಕೆಟ್‍ಬಾಲ್ ಮೈದಾನವಿಲ್ಲದ ಕಾರಣ, ಅನೇಕ ದಿನಗಳ ಕಾಲ ಕಚ್ಚಾ ರಸ್ತೆಯಲ್ಲೇ ಅವರು ಅಭ್ಯಾಸ ನಡೆಸಿದ್ದಾರೆ. ಅವರ ಈ ಹಠ ಮತ್ತು ಕಠಿಣ ಪರಿಶ್ರಮವೇ ಅವರನ್ನು ಇಂದು ಗ್ಲಾಸ್ಕೋ ಅಂಕಣಕ್ಕೆ ಕರೆದೊಯ್ದಿದೆ.
ಸಂಬಳದ ಕೆಲಸ ಬಿಟ್ಟು ಕ್ರೀಡೆಗೆ ಮೀಸಲು

ರಾಜಕೀಯ ಶಾಸ್ತ್ರದಲ್ಲಿ ಎಂ.ಎ. ಮತ್ತು ಬಿ.ಎಡ್ ಪದವಿ ಪಡೆದಿದ್ದ ಲಕ್ಷ್ಮಿ, ಅತಿಥಿ ಶಿಕ್ಷಕಿಯಾಗಿಯೂ ಸೇವೆ ಸಲ್ಲಿಸಿದ್ದರು. ಆದರೆ, ಬಾಸ್ಕೆಟ್‍ಬಾಲ್ ಮೇಲಿನ ವ್ಯಾಮೋಹದಿಂದ ಉದ್ಯೋಗವನ್ನೇ ತೊರೆದು, ದಿನಕ್ಕೆ 8 ಗಂಟೆಗಳ ಕಾಲ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬರೋಬ್ಬರಿ 25ಕ್ಕೂ ಹೆಚ್ಚು ಪದಕಗಳನ್ನು ಗೆದ್ದು ಬೀಗಿದ್ದಾರೆ.
ಕುಟುಂಬದ ತ್ಯಾಗ, ಲಕ್ಷ್ಮಿ ಅವರ ಹಠ

ರೈತ ಕುಟುಂಬದವರಾಗಿದ್ದರೂ, ಮಗಳ ಕ್ರೀಡಾ ಕನಸಿಗಾಗಿ ಪೋಷಕರು ಯಾವುದೇ ಕೊರತೆಯಾಗದಂತೆ ಬೆಂಬಲ ನೀಡಿದ್ದಾರೆ. ಗ್ವಾಲಿಯರ್, ಕೊಯಮತ್ತೂರಿನಂತಹ ದೂರದ ಸ್ಥಳಗಳಿಗೆ ತರಬೇತಿಗೆ ಕಳುಹಿಸಿ, ಅಗತ್ಯವಿರುವ ದುಬಾರಿ ವೀಲ್‍ಚೇರ್ ಮತ್ತು ಕ್ರೀಡಾ ಸಾಮಗ್ರಿಗಳನ್ನು ಒದಗಿಸಲು ಕುಟುಂಬ ಹರಸಾಹಸ ಪಟ್ಟಿದೆ.

ವಿಶ್ವ ಮಟ್ಟದಲ್ಲಿ ಭಾರತದ ಧ್ವಜ ಹಾರಿಸಲು ಸಜ್ಜು

ಇಂದು ಭಾರತೀಯ ಮಹಿಳಾ ವ್ಹೀಲ್‌ಚೇರ್‌ ಬಾಸ್ಕೆಟ್‍ಬಾಲ್ ತಂಡದ ಜೆರ್ಸಿ ತೊಟ್ಟು, ವಿಶ್ವದ ವೇದಿಕೆಯಲ್ಲಿ ಅಬ್ಬರಿಸಲು ಲಕ್ಷ್ಮೀ ಸಜ್ಜಾಗಿದ್ದಾರೆ. ಸಮಾಜದ ಟೀಕೆಗಳನ್ನೂ ಮೀರಿ ಬೆಳೆದ ಈ ಯುವತಿಯ ಪಯಣ, ಕನಸು ಕಾಣುವ ಪ್ರತಿಯೊಬ್ಬರಿಗೂ ದೊಡ್ಡ ಸ್ಫೂರ್ತಿ. ಪ್ಯಾರಾ ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಪದಕ ಗೆಲ್ಲುವುದೇ ಈಗ ಲಕ್ಷ್ಮೀ ಅವರ ಗುರಿ. ಲಕ್ಷ್ಮೀ ಅವರ ಈ ಸಾಧನೆಗೆ ಇಡೀ ದೇಶವೇ ಹಾರೈಸುತ್ತಿದೆ.

ಕನ್ನಡ ಸುದ್ದಿ/ ನ್ಯೂಸ್/ಬೆಳಗಾವಿ/

Commonwealth Games: ವ್ಹೀಲ್‌ಚೇರ್‌ನಲ್ಲೇ ವಿಶ್ವ ಗೆಲ್ಲಲು ಹೊರಟ ಹಳ್ಳಿಯ ಹುಡುಗಿ, ಪ್ಯಾರಾ ಕಾಮನ್‍ವೆಲ್ತ್ ಗೇಮ್ಸ್‌ಗೆ ಆಯ್ಕೆಯಾದ ಬೆಳಗಾವಿಯ ಲಕ್ಷ್ಮಿ!



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed