City Lights: ಸಿಟಿ ಲೈಟ್ಸ್‌ಗೆ 25 ದಿನಗಳ ಸಂಭ್ರಮ; ಈಗ ಎಷ್ಟು ಥಿಯೇಟರ್‌ಗಳಲ್ಲಿ ಪ್ರದರ್ಶನ? | | ACTPnews

100 ಪ್ಲಸ್ ಥಿಯೇಟರ್ ಅಲ್ಲಿ ರನ್ನಿಂಗ್;2ನೇ ವಾರಕ್ಕೆ ಕಾಲಿಟ್ಟ ಸಿಟಿ ಲೈಟ್ಸ್ ಸಿನಿಮಾ!(ಚಿತ್ರ ಕೃಪೆ: ಮೊನಿಷಾ ವಿಜಯ್ ಕುಮಾರ್ ಇನ್​ಸ್ಟಾಗ್ರಾಮ್)


Last Updated:

ಸಿಟಿ ಲೈಟ್ಸ್ ಚಿತ್ರ ಇನ್ನು ಥಿಯೇಟರ್ ಅಲ್ಲಿದೆ. ಇನ್ನು ಎರಡು ದಿನ ಕಳೆದರೆ ಆಯಿತು. ಈ ಚಿತ್ರ 25 ದಿನ ಪೂರೈಸುತ್ತದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಸಿಟಿ ಲೈಟ್ಸ್ 25 ದಿನ ಪೂರೈಸ್ತಾ ಇದೆ; ಈಗ ಎಷ್ಟು ಥಿಯೇಟರ್ ಅಲ್ಲಿ ಓಡ್ತಿದೆ ಗೊತ್ತಾ.?(ಚಿತ್ರ ಕೃಪೆ: ಮೊನಿಷಾ ವಿಜಯ್ ಕುಮಾರ್ ಇನ್​ಸ್ಟಾಗ್ರಾಮ್)
ಸಿಟಿ ಲೈಟ್ಸ್ 25 ದಿನ ಪೂರೈಸ್ತಾ ಇದೆ; ಈಗ ಎಷ್ಟು ಥಿಯೇಟರ್ ಅಲ್ಲಿ ಓಡ್ತಿದೆ ಗೊತ್ತಾ.?(ಚಿತ್ರ ಕೃಪೆ: ಮೊನಿಷಾ ವಿಜಯ್ ಕುಮಾರ್ ಇನ್​ಸ್ಟಾಗ್ರಾಮ್)

ದುನಿಯಾ ವಿಜಯ್ (Duniya Vijay) ಅವರ ಸಿಟಿ ಲೈಟ್ಸ್ (City Lights) ಇನ್ನೂ ಥಿಯೇಟರ್ ಅಲ್ಲಿದೆ. ಸೆಪ್ಟೆಂಬರ್-18 ರಂದು ಇದು ತೆರೆ ಕಂಡಿತ್ತು. ಈ ಲೆಕ್ಕದಂತೆ ಇನ್ನು ಎರಡ್ಮೂರು ದಿನಗಳು ಕಳೆದರೆ ಆಯಿತು. ಈ ಚಿತ್ರ 25 ದಿನ ಪೂರೈಸುತ್ತದೆ. ಪ್ರೇಮದ ಊರಲಿ (Premada Oorali) ಸಿನಿಮಾ ಎಲ್ಲೆಡೆ ಇದೆ. ಶೋಗಳು ಜಾಸ್ತಿ ಆಗಿವೆ. ಆದರೂ ಸಿಟಿ ಲೈಟ್ಸ್ (City Lights) ತನ್ನ ಖದರ್ ಉಳಿಸಿಕೊಂಡಿದೆ. ರಾಜ್ಯದ ಸುಮಾರು 30 ಥಿಯೇಟರ್ ಅಲ್ಲಿ ಇದು ಪ್ರದರ್ಶನ ಕಾಣುತ್ತಿದೆ. ಇಲ್ಲಿ ಇದು 25 ದಿನ ಪೂರೈಸುತ್ತಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.

ಸಿಟಿ ಲೈಟ್ಸ್ ಓಡ್ತಾ ಇದೆ…

ಸಿಟಿ ಲೈಟ್ಸ್ ಚಿತ್ರ ಇನ್ನೂ ಓಡ್ತಿದೆ. ಈ ಭಾನುವಾರಕ್ಕೆ (ಅಕ್ಟೋಬರ್-11) 25 ದಿನ ಪೂರೈಸುತ್ತದೆ. ಈ ಒಂದು ಖುಷಿಯನ್ನ ಸಿನಿಮಾ ತಂಡವೇ ಹೇಳಿಕೊಂಡಿದೆ.
Duniya Vijay City Lights Film 25 Days Complete Soon

ಸಿಟಿ ಲೈಟ್ಸ್ 25 ದಿನ ಪೂರೈಸ್ತಾ ಇದೆ
(ಚಿತ್ರ ಕೃಪೆ: ಮೊನಿಷಾ ವಿಜಯ್ ಕುಮಾರ್ ಇನ್​ಸ್ಟಾಗ್ರಾಮ್)

ಕನ್ನಡದಲ್ಲಿ ಇತ್ತೀಚಿಗೆ 50 ದಿನ ಪೂರೈಸಿದ ಚಿತ್ರ ಒಂದು ಇದೆ. ಅದು ಅಯೋಗ್ಯ-2 ಸಿನಿಮಾನೇ ಆಗಿದೆ. ಈ ಸಿನಿಮಾ ಆದ್ಮೇಲೆ ಈಗ ಸಿಟಿ ಲೈಟ್ಸ್ 25 ದಿನ ಪೂರ್ಣಗೊಳಿಸುತ್ತಿದೆ.

ಸಿಟಿ ಲೈಟ್ಸ್ ಸಿನಿಮಾ

ಈ ಚಿತ್ರದಲ್ಲಿ ಬೆಂಗಳೂರಿನ ಮೆಜೆಸ್ಟಿಕ್ ಕತೆ ಹೇಳಿದ್ದರು. ಹಾಗೆ ವೇಶ್ಯಾವಾಟಿಕೆಯ ದಂಧೆಯ ಕರಾವಳಿ ಮುಖವನ್ನು ಬಿಚ್ಚಿಟ್ಟಿದ್ದರು.

ನವ ನಟ ಪುನೀತ್ ಕುಮಾರ್ ಈ ಚಿತ್ರದಲ್ಲಿ ವಿಲನ್ ರೋಲ್ ಮಾಡಿದ್ದಾರೆ. ಇವರ ಅಭಿನಯಕ್ಕೂ ಉತ್ತಮ ಪ್ರತಿಕ್ರಿಯೆ ಬಂದಿವೆ.

Duniya Vijay City Lights Film 25 Days Complete Soon

ಸೆಪ್ಟೆಂಬರ್-18 ರಿಲೀಸ್
(ಚಿತ್ರ ಕೃಪೆ: ಮೊನಿಷಾ ವಿಜಯ್ ಕುಮಾರ್ ಇನ್​ಸ್ಟಾಗ್ರಾಮ್)
ದುನಿಯಾ ವಿಜಯ್ ಡೈರೆಕ್ಷನ್

ದುನಿಯಾ ವಿಜಯ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಜನ ಈ ಚಿತ್ರವನ್ನ ಸ್ವೀಕರಿಸಿದ್ದಾರೆ. ಹಾಗಾಗಿಯೆ ದುನಿಯಾ ವಿಜಯ್ ಅವರನ್ನ ಹ್ಯಾಟ್ರಿಕ್ ಹಿಟ್ ಡೈರೆಕ್ಟರ್ ಅಂತಲೂ ಬಣ್ಣಿಸಬಹುದು.

ಈ ಚಿತ್ರಕ್ಕೂ ಮುಂಚೆ ಭೀಮ ಮತ್ತು ಸಲಗ ಸಿನಿಮಾ ಮಾಡಿದ್ದರು. ಈ ಸಿನಿಮಾಗಳು ಹಿಟ್ ಆಗಿದ್ದವು. ಸಿಟಿ ಲೈಟ್ಸ್ ಸಹ ಜನರ ಹೃದಯ ಗೆದ್ದಿದೆ.

ಚರಣ್ ರಾಜ್ ಮ್ಯೂಸಿಕ್

ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಈ ಹಿಂದಿನ ಭೀಮ ಹಾಗೂ ಸಲಗ ರೀತಿನೇ ಇಲ್ಲೂ ಒಳ್ಳೆ ಹಾಡುಗಳೇ ಇವೆ. ಈ ಹಾಡುಗಳನ್ನು ಜನ ಮೆಚ್ಚಿಕೊಂಡಿದ್ದಾರೆ.

ಹಾಗೆ ಸಿಟಿ ಲೈಟ್ಸ್ ಸಿನಿಮಾ ತನ್ನ ಓಟವನ್ನ ಮುಂದುರೆಸಿದೆ. 30 ಥಿಯೇಟರ್ ಅಲ್ಲಿ ಈ ಚಿತ್ರ ಪ್ರದರ್ಶನ ಆಗುತ್ತಿದೆ. 25 ದಿನವನ್ನು ಇದು ಪೂರೈಸುತ್ತಿದೆ.

ಪ್ರೇಮದ ಊರಲಿ, ಬೇಲ್ ಚಿತ್ರಕ್ಕೂ ಮುಂಚೆ ಈ ಸಿಟಿ ಲೈಟ್ಸ್ ಚಿತ್ರ ಜನರನ್ನ ರಂಜಿಸಿದೆ. ಗೆಲುವಿನ ನಗೆ ಬೀರಿದೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports