Last Updated:
Congress Woman Leaders: ಕಾಂಗ್ರೆಸ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಇಬ್ಬರು ಮಹಿಳಾ ನಾಯಕಿಯರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಒಬ್ಬಳಿಗೆ ಮತ್ತೊಬ್ಬಳು ಕಪಾಳಮೋಕ್ಷ ಮಾಡಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ!
ನವದೆಹಲಿ: ನಿನ್ನೆ ದೆಹಲಿಯ (Delhi) ಫರಿದಾಬಾದ್‌ನಲ್ಲಿ (Faridabad) ಕಾಂಗ್ರೆಸ್ (Congress) ಸಮರ ಸಾರಿತ್ತು. ಮುಖ್ಯ ಚುನಾವಣಾ ಆಯುಕ್ತ (CEC – Chief Election Commissioner) ಜ್ಞಾನೇಶ್ ಕುಮಾರ್ (Gyanesh Kumar) ವಿರುದ್ಧ ನಡೆದ ಇಂಡಿಯಾ (I.N.D.I.A.) ಬ್ಲಾಕ್ ಪ್ರತಿಭಟನಾ ರ್ಯಾಲಿಯಲ್ಲಿ ಭಾರೀ ಜೋರಾಗಿತ್ತು. ಈ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರೇ ಪೊಲೀಸರನ್ನು ತಳ್ಳಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಇಬ್ಬರು ಮಹಿಳಾ ನಾಯಕಿಯರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಒಬ್ಬಳಿಗೆ ಮತ್ತೊಬ್ಬಳು ಕಪಾಳಮೋಕ್ಷ ಮಾಡಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕಾಂಗ್ರೆಸ್ ಪ್ರತಿಭಟನೆಯಲ್ಲಿ ಇಬ್ಬರು ಮಹಿಳಾ ಕಾಂಗ್ರೆಸ್ ನಾಯಕಿಯರು ಪರಸ್ಪರ ಕಪಾಳಮೋಕ್ಷ ಮಾಡಿಕೊಂಡಿದ್ದಾರೆ. “ಮತ ಕಳ್ಳತನ” ಆರೋಪದ ಮೇಲೆ ಕಾಂಗ್ರೆಸ್ ದೆಹಲಿ-ಎನ್‌ಸಿಆರ್‌ನಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಸಿಇಸಿ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸುತ್ತಿತ್ತು. ಫರಿದಾಬಾದ್‌ನಲ್ಲಿ ವಿರೋಧ ಪಕ್ಷದ ಮೈತ್ರಿಕೂಟದ ಅಂತಹ ಒಂದು ಪ್ರತಿಭಟನಾ ರ್ಯಾಲಿ ನಡೆಯುತ್ತಿದ್ದಾಗ, ಇಬ್ಬರು ಮಹಿಳಾ ಕಾಂಗ್ರೆಸ್ ನಾಯಕಿಯರು ಪರಸ್ಪರ ಕಿತ್ತಾಡಿಕೊಂಡಿದ್ದಾರೆ.
ಕಾಂಗ್ರೆಸ್ ನಾಯಕರಿರಾದ ಪರಾಗ್ ಶರ್ಮಾ ಮತ್ತು ಗಜ್ನಾ ಲಂಬಾ ಎಂಬಿಬ್ಬರು ಜಗಳವಾಡಿಕೊಂಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಬಲ್ಲಬ್‌ಗಢದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪರಾಗ್ ಶರ್ಮಾ ಕಾಂಗ್ರೆಸ್ ಬ್ಯಾನರ್ ಹಿಡಿದುಕೊಂಡು ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸುತ್ತಿದೆ. ಗಜ್ನಾ ಲಂಬಾ ಅವರ ಪಕ್ಕದಲ್ಲಿ ನಡೆಯುತ್ತಿದ್ದರು. ಗಜ್ನಾ ಲಂಬಾ ಅವರು ಪರಾಗ್ ಶರ್ಮಾ ಅವರ ಮುಂದೆ ಸಾಗಲು ಪ್ರಯತ್ನಿಸಿದಾಗ ವಾಗ್ವಾದ ನಡೆದಿದ್ದು, ಮಾತಿನ ಚಕಮಕಿ ನಡೆದಿದೆ ಎಂದು ವರದಿಯಾಗಿದೆ.
ಈ ವೇಳೆ ಪರಾಗ್ ಶರ್ಮಾ ಅವರು ಗಜ್ನಾ ಲಂಬಾಗೆ ಕಪಾಳಮೋಕ್ಷ ಮಾಡಿದರು. ಅದಕ್ಕೆ ಸುಮ್ಮನಿರದ ಗಜ್ನಾ ಲಂಬಾ, ಪರಾಗ್ ಶರ್ಮಾ ಬೆನ್ನಿಗೆ ಹೊಡೆದಿದ್ದಾರೆ. ಇಬ್ಬರೂ ನಾಯಕಿಯರೂ ಪರಸ್ಪರ ಹೊಡೆದಾಡಿಕೊಳ್ಳಲು ಪ್ರಾರಂಭಿಸಿದಾಗ, ಪಕ್ಷದ ಜಿಲ್ಲಾಧ್ಯಕ್ಷ ಬಲ್ಜಿತ್ ಕೌಶಿಕ್ ಸೇರಿದಂತೆ ಸ್ಥಳದಲ್ಲಿದ್ದ ಕಾಂಗ್ರೆಸ್ ನಾಯಕರು ಮಧ್ಯ ಪ್ರವೇಶಿಸಿ, ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸಿದ್ರು. ನಂತರ ಇಬ್ಬರೂ ಮಹಿಳಾ ಮುಖಂಡರು ಪೊಲೀಸ್ ಠಾಣೆಗೆ ತೆರಳಿ ಪರಸ್ಪರ ದೂರು, ಪ್ರತಿದೂರು ದಾಖಲಿಸಿದ್ದಾರಂತೆ.
फरीदाबादः पहले खुद को निपटाएंगे कांग्रेसी? वोट चोरी के विरोध में धरना प्रदर्शन के दौरान भिड़ गई दो महिला नेता. एक दूसरे को जड़े थप्पड़. https://t.co/rW7bJ7FsMo
— Vinod Katwal (@Katwal_Vinod) October 8, 2026
ಇದನ್ನು ದೃಢಪಡಿಸಿದ ಸ್ಟೇಷನ್ ಹೌಸ್ ಆಫೀಸರ್ (SHO) ವಿಷ್ಣು ಮಿತ್ತರ್ ಎಂಬುವರು, ಫೋಟೋ ತೆಗೆಯುವ ವಿಚಾರದಲ್ಲಿ ಇಬ್ಬರು ನಾಯಕಿಯರ ನಡುವೆ ವಿವಾದ ಭುಗಿಲೆದ್ದಿತು ಎಂದು ಹೇಳಿದ್ದಾರೆ. ಇಬ್ಬರು ಮಹಿಳಾ ರಾಜಕಾರಣಿಗಳಿಂದ ಪ್ರತ್ಯೇಕ ದೂರುಗಳು ಬಂದಿವೆ. ಒಬ್ಬರು ಗಜ್ನಾ ಲಂಬಾ ಮತ್ತು ಇನ್ನೊಬ್ಬರು ಪರಾಗ್ ಶರ್ಮಾ. ರ್ಯಾಲಿಯಲ್ಲಿ ಫೋಟೋ ತೆಗೆಯುವ ಬಗ್ಗೆ ಅವರ ನಡುವೆ ವಿವಾದ ಭುಗಿಲೆದ್ದಿತು, ಇದು ಪರಸ್ಪರ ಬೈಗುಳ ಮತ್ತು ದೈಹಿಕ ಹಲ್ಲೆಗೆ ಕಾರಣವಾಯಿತು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಇನ್ನು ಈ ಬಗ್ಗೆ ಗಜ್ನಾ ಲಂಬಾ ಪ್ರತಿಕ್ರಿಯೆ ನೀಡಿದ್ದಾರೆ. ಪರಿಸ್ಥಿತಿ ದೈಹಿಕ ಹಲ್ಲೆಯ ಹಂತಕ್ಕೆ ಹೇಗೆ ತಲುಪಿತು ಎಂದು ತನಗೆ ತಿಳಿದಿಲ್ಲ ಎಂದು ಲಂಬಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅದು ಏಕೆ ಸಂಭವಿಸಿತು ಅಥವಾ ಪರಾಗ್ ಶರ್ಮಾ ಯಾರು ಎಂದು ತನಗೆ ಅರ್ಥವಾಗುತ್ತಿಲ್ಲ, ಆದರೆ ಇದೆಲ್ಲವೂ “ಪಿತೂರಿಯ ಭಾಗ” ಎಂದು ಅವರು ಆರೋಪಿಸಿದ್ದಾರೆ.
ಏನಾಯಿತು ಎಂದು ನೋಡಲು ನಾನು ಹಿಂತಿರುಗಿ ನೋಡಿದೆ. ಕೇವಲ 3 ಅಥವಾ 4 ಸೆಕೆಂಡುಗಳು ಕಳೆದಿದ್ದವು – ಏಕೆಂದರೆ ನಮ್ಮ ಪ್ರತಿಭಟನೆ ಬಹುತೇಕ ಮುಗಿದಿತ್ತು. ನಾನು ಅವಳ ಬಳಿ ನಿಂತಿದ್ದೆ. ಎಲ್ಲಾ ಕಡೆಯಿಂದಲೂ ಅವಳನ್ನು ದೂರವಿಡಲಾಗುತ್ತಿರುವುದರಿಂದ ಅವಳು ಒಳಗಿನಿಂದ ಮಾನಸಿಕವಾಗಿ ತೊಂದರೆಗೀಡಾಗಿದ್ದಾಳೆ ಎಂದಿದ್ದಾರೆ. ಅವಳಿಗೆ ನನ್ನೊಂದಿಗೆ ಯಾವುದೇ ಸಮಸ್ಯೆ ಇದ್ದರೆ, ಅವಳು ನೇರವಾಗಿ ನನ್ನೊಂದಿಗೆ ಮಾತನಾಡಬೇಕಿತ್ತು ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇದು ಈ ಹಂತಕ್ಕೆ ಹೇಗೆ ತಲುಪಿತು ಎಂದು ನನಗೆ ಅರ್ಥವಾಗಲಿಲ್ಲ. ಈ ಮಹಿಳೆ ನನ್ನ ವಿರುದ್ಧ ಯಾವ ಆಕ್ಷೇಪಣೆ ಹೊಂದಿದ್ದಾಳೆಂದು ನನಗೆ ಅರ್ಥವಾಗಲಿಲ್ಲ. ನಮ್ಮ ಪ್ರತಿಭಟನೆ ಬಹುತೇಕ ಅಂತ್ಯಗೊಳ್ಳುತ್ತಿತ್ತು, ಆದ್ದರಿಂದ ಇದು ಉದ್ದೇಶಪೂರ್ವಕ ಪಿತೂರಿಯಾಗಿತ್ತು. ಯಾವ ವಿಷಯದ ಬಗ್ಗೆ, ನನಗೆ ತಿಳಿದಿಲ್ಲ” ಎಂದು ಅವರು IANS ಗೆ ತಿಳಿಸಿದ್ದಾರೆ.












