Last Updated:
ಬಿರಿಯಾನಿ ಪ್ರಸ್ತಾವನೆಗೆ ಮುಖ್ಯಮಂತ್ರಿಗಳು ಹಸಿರು ನಿಶಾನೆ ತೋರಿದರೆ, ಭಾರತದಲ್ಲೇ ಶಾಲಾ ಮಕ್ಕಳಿಗೆ ಚಿಕನ್ ಬಿರಿಯಾನಿ ಉಣಬಡಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ತಮಿಳುನಾಡು ಪಾತ್ರವಾಗಲಿದೆ.
ತಮಿಳುನಾಡು: ಸಿಎಂ ವಿಜಯ್ (CM Vijay) ನೇತೃತ್ವದ ತಮಿಳುನಾಡು (Tamil Nadu) ಸರ್ಕಾರ ತಮಿಳುನಾಡಿನ ಸರ್ಕಾರಿ ಶಾಲೆ (Government School) ಮಕ್ಕಳಿಗೆ ಗುಡ್‌ನ್ಯೂಸ್ ಕೊಡಲು ಮುಂದಾಗಿದೆ. ವಾರಕ್ಕೊಮ್ಮೆ ಮಧ್ಯಾಹ್ನದ ಬಿಸಿಯೂಟಕ್ಕೆ (Mid-Day Meal) ಚಿಕನ್ ಬಿರಿಯಾನಿ ನೀಡಲು ಚಿಂತನೆ ನಡೆಸಿದೆ. ತಮಿಳುನಾಡು ಶಾಲಾ ಶಿಕ್ಷಣ ಇಲಾಖೆಯ ಈ ನೂತನ ಯೋಜನೆ ಸದ್ಯ ದೇಶಾದ್ಯಂತ ಸದ್ದು ಮಾಡುತ್ತಿದೆ.
ಸಾಮಾನ್ಯವಾಗಿ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟವನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳು ಅಪೌಷ್ಟಿಕತೆಯಿಂದ ಬಳಲಬಾರದು ಎಂದು ಪೌಷ್ಟಿಕ ಆಹಾರಗಳನ್ನು ನೀಡಲಾಗುತ್ತದೆ. ಇದರಲ್ಲಿ ಮೊಟ್ಟೆ, ಬಾಳೆಹಣ್ಣು ಸೇರಿದಂತೆ ಉತ್ತಮವಾದ ಆಹಾರವನ್ನು ನೀಡಲಾಗುತ್ತದೆ. ಆದರೆ, ಮಕ್ಕಳಿಗೆ ಬಿಸಿಯೂಟ ನೀಡುವ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಿರುವ ಸಿಎಂ ವಿಜಯ್ ನೇತೃತ್ವದ ತಮಿಳುನಾಡು ಸರ್ಕಾರ, ತಮ್ಮ ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಮುಂದಾಗಿದೆ.
ಈ ಪ್ರಸ್ತಾವನೆಯು ಇನ್ನೂ ಪ್ರಾಥಮಿಕ ಹಂತದಲ್ಲಿದೆ ಮತ್ತು ಯಾವುದೇ ಅಂತಿಮ ನಿರ್ಧಾರವನ್ನು ಕೈಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚು ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ಸೇರಿಸುವ ಮೂಲಕ ‘ಪೆರುಂತಲೈವರ್ ಕಾಮರಾಜರ್ ಉಪಹಾರ ಯೋಜನೆ’ಯ ಅಡಿಯಲ್ಲಿ ಬಿಸಿಯೂಟದ ಮೆನುವನ್ನು ನವೀಕರಿಸಲು ಸರ್ಕಾರವು ಪ್ರಯತ್ನಿಸುತ್ತಿದೆ ಎಂದು
ಈ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದ್ದೇ ಆದಲ್ಲಿ, ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವುದರಿಂದ ಇದು ಇತ್ತೀಚಿನ ವರ್ಷಗಳಲ್ಲಿ ರಾಜ್ಯದ ಪ್ರಮುಖ ಪೌಷ್ಟಿಕಾಂಶ ಯೋಜನೆಯಲ್ಲಿನ ಅತಿ ದೊಡ್ಡ ಮೆನು ಬದಲಾವಣೆಗಳಲ್ಲಿ ಒಂದಾಗಲಿದೆ. ಅಲ್ಲದೆ, ಮಕ್ಕಳ ಪೌಷ್ಟಿಕಾಂಶ, ಶಾಲೆಗೆ ಹಾಜರಾತಿ ಮತ್ತು ಕಲಿಕಾ ಫಲಿತಾಂಶಗಳನ್ನು ಸುಧಾರಿಸಲು ಶಾಲಾ ಊಟವನ್ನು ಬಳಸಿಕೊಳ್ಳುವ ತಮಿಳುನಾಡಿನ ಪರಂಪರೆಯನ್ನು ಇದು ಮುಂದುವರಿಸಲಿದೆ.
ಒಟ್ಟಾರೆಯಾಗಿ, ಈ ಬಿರಿಯಾನಿ ಪ್ರಸ್ತಾವನೆಗೆ ಮುಖ್ಯಮಂತ್ರಿಗಳು ಹಸಿರು ನಿಶಾನೆ ತೋರಿದರೆ, ಭಾರತದಲ್ಲೇ ಶಾಲಾ ಮಕ್ಕಳಿಗೆ ಚಿಕನ್ ಬಿರಿಯಾನಿ ಉಣಬಡಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ತಮಿಳುನಾಡು ಪಾತ್ರವಾಗಲಿದೆ.














