Last Updated:
Cannabis: ರೈಡ್ ಮಾಡಿದ ಪೊಲೀಸರಿಗೆ ಈತನ ಮನೆಯಲ್ಲಿ 70 ಗಾಂಜಾ ಗಿಡ ಸಿಕ್ಕಿದೆ. ಯಾಕೋ ಇದನ್ನು ಬೆಳಸಿದ್ದಿ ಎಂದಾಗ ಚಟ್ನಿ ಮಾಡೋಕೆ ಎಂದಿದ್ದಾನೆ 26ರ ಈ ಯುವಕ.
ಕೆಲವೊಮ್ಮೆ ಜನರು ಯಾವ್ಯಾವುದೋ ಕಾರಣಕ್ಕೆ ಏನೇನೋ ಕೆಲಸ ಮಾಡುತ್ತಾರೆ. ಏನೇ ಮಾಡಿದರೂ ಅದು ಕಾನೂನು ಉಲ್ಲಂಘಿಸದಿದ್ದರೆ, ಇತರರಿಗೆ ತೊಂದರೆಯಾಗದಿದ್ದರೆ ಪರವಾಗಿಲ್ಲ ಎನ್ನೋಣ. ಆದರೆ 26 ವರ್ಷದ ಈ ಯಂಗ್ ಮ್ಯಾನೇಜರ್ (Manager) ಮಾಡಿದ ಕೆಲಸ ಏನ್ ಗೊತ್ತಾ? ಕೇಳಿದ್ರೆ ನೀವು ಶಾಕ್ (Shock) ಆಗ್ತೀರಿ. ಇವನ ರಿಯಲ್ ಸ್ಟೋರಿ ಯಾವ ರೀಲ್ ಸ್ಟೋರಿಗೂ ಕಡಿಮೆ ಇಲ್ಲ.
ತಿರುವನಂತಪುರದ ಫೇಮಸ್ ಐಟಿ ಕಂಪೆನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ 26 ವರ್ಷದ ಯುವಕ ತನ್ನ 1 ಬಿಎಚ್ಕೆ ಅಪಾರ್ಟ್ಮೆಂಟ್ನ ಬೆಡ್ರೂಂನಲ್ಲಿ 70 ಗಾಂಜಾ ಗಿಡ ಬೆಳೆಸಿದ್ದಾನೆ.
ಬೆಡ್ರೂಂನಲ್ಲಿ ಒಂದು ಗಿಡ ಬೆಳೆಸೋದೆ ಕಷ್ಟ, ಅಂಥದ್ದರಲ್ಲಿ ಈತ ಬರೋಬ್ಬರಿ 70 ಗಾಂಜಾ ಗಿಡಗಳನ್ನು ಬೆಳೆಸಿದ್ದಾನೆ. ವಿಶಾಲ್ ಎನ್ನುವಂತಹ ಯುವಕನನ್ನು ಅರೆಸ್ಟ್ ಮಾಡಲಾಗಿದ್ದು, ಶ್ರೀಕಾರ್ಯಂ ಪೊಲೀಸರು ವಿಶಾಲ್ ಮನೆಯಲ್ಲಿ 70 ಗಾಂಜಾ ಗಿಡ ಇರುವುದು ಪತ್ತೆ ಹಚ್ಚಿದ್ದಾರೆ.
ಅಲತರದ 1 ಬಿಎಚ್ಕೆ ಅಪಾರ್ಟ್ಮೆಂಟ್ನಿಂದ ವಿಶಾಲ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಂದಹಾಗೆ ಇವನು ಕೇರಳದವನಲ್ಲ. ಹರಿಯಾಣದವನು. ಕಳೆದೊಂದು ವರ್ಷದಿಂದ ಈತ ಕೇರಳದಲ್ಲಿ ವಾಸವಾಗಿದ್ದು ತನ್ನ ವೈಯಕ್ತಿಕ ಅಗತ್ಯಕ್ಕಾಗಿ ಗಾಂಜಾ ಬೆಳೆಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಎಸಿ ಬೆಡ್ರೂಮ್ ಒಳಗೆ ಗಾಂಜಾ ಗಿಡಗಳು ಕಾಣಿಸಿಕೊಂಡಿವೆ. ವಿಶಾಲ್ ವಾರ್ಷಿಕವಾಗಿ ಸುಮಾರು 20 ಲಕ್ಷ ಸಂಪಾದನೆ ಮಾಡುತ್ತಾರೆ. ಒಬ್ಬರೇ ವಾಸವಾಗಿದ್ದರು. ಅವನ ಮನೆಯಲ್ಲಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಂತೆ ಅವನು ಫುಲ್ ಡಲ್ ಆಗಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಆತ ಬೆಳಗ್ಗಿನಿಂದಲೂ ಏನೂ ತಿಂದಿರಲಿಲ್ಲ. ಕುಡಿದಿರಲಿಲ್ಲ. ಪೊಲೀಸರು ಸ್ವಲ್ಪ ಏನಾದರೂ ತಿಂದುಕೊಳ್ಳಿ ಎಂದಾಗ ಆತ ಫ್ರಿಡ್ಜ್ನಿಂದ 1 ಲೀಟರ್ ಹಾಲಿನ ಬಾಟಲಿ ತೆಗೆದು ಅದನ್ನು ಒಂದೇ ಏಟಿಕೆ ಖಾಲಿ ಮಾಡಿದ್ದ. ಅದನ್ನು ಕುಡಿದ ನಂತರ ಅವನಿಗೆ ಸ್ವಲ್ಪ ಎನರ್ಜಿ ಬಂದ ಹಾಗಿತ್ತು. ನಮಗೆಲ್ಲರಿಗೂ ಅಚ್ಚರಿಯಾಯಿತು. ಯಾಕೆಂದರೆ ಅಷ್ಟೊತ್ತು ಅವನು ತುಂಬಾ ಸಪ್ಪಗೆ, ಡಲ್ ಆಗಿ ಇದ್ದ ಎಂದಿದ್ದಾರೆ ಪೊಲೀಸರು.
Bangalore,Karnataka
Jun 03, 2026 10:23 AM IST













