Last Updated:
Ibrahim Ali Khan: ಸೈಫ್ ಅಲಿ ಖಾನ್ ಅವರ ಮಗ ತನ್ನ ಗರ್ಲ್ಫ್ರೆಂಡ್ ಜೊತೆ ಕಾಣಿಸಿಕೊಂಡಿದ್ದು ಅವರ ಫೋಟೋ ಸದ್ಯ ವೈರಲ್ ಆಗಿದೆ. ಕ್ಯಾಮೆರಾ ಕಾಣ್ತಿದ್ದಂತೆ ಇಬ್ರಾಹಿಂ ಗರ್ಲ್ಫ್ರೆಂಡ್ನ ತಳ್ಳಿದ್ದಾರೆ.
ಇಬ್ರಾಹಿಂ ಅಲಿ ಖಾನ್ (Ibrahim Ali khan) ಮತ್ತು ಪಾಲಕ್ ತಿವಾರಿ (Palak Tiwari) ಅವರು ರಿಲೇಷನ್ಶಿಪ್ನಲ್ಲಿದ್ದಾರೆ (Relationship) ಎನ್ನಲಾಗಿದೆ. ಅವರಿಬ್ಬರ ಸಂಬಂಧದ ವದಂತಿಯಿಂದಾಗಿ ಅವರು ಸುದ್ದಿಯಲ್ಲಿದ್ದಾರೆ. ಬುಧವಾರ ಇಬ್ಬರೂ ಒಟ್ಟಿಗೆ ಕ್ಯಾಮೆರಾ ಕಣ್ಣಿಗೆ ಬಿದ್ದರು. ಅವರಿಬ್ಬರ ವಿಡಿಯೋಗಳು ಸೋಷಿಯಲ್ ಮೀಡಿಯಾದ್ಯಂತ ಈಗ ವೈರಲ್ ಆಗಿದೆ. ಆದಾಗ್ಯೂ, ಪಲಕ್ ಕಡೆ ಇಬ್ರಾಹಿಂ ಅವರ ವರ್ತನೆ ಎಲ್ಲರ ಗಮನ ಸೆಳೆಯಿತು.
ಅವರು ಬ್ಯುಲ್ಡಿಂಗ್ ಒಂದರಿಂದ ಹೊರಬರುತ್ತಿದ್ದಾಗ, ಇಬ್ರಾಹಿಂ ಪಾಪರಾಜಿಯನ್ನು ನೋಡಿ ಪಲಕ್ ಅವರನ್ನು ತಳ್ಳಿ ಆಕೆ ಅಡಗುವಂತೆ ಮಾಡಲು ಪ್ರಯತ್ನಿಸಿದ್ದಾರೆ. ಆದರೆ, ಆ ಪಾಪರಾಜಿಗಳು ಆಕೆಯನ್ನು ಕಟ್ಟಡದೊಳಗೆ ಹಿಂಬಾಲಿಸಿ ಆಕೆಯ ಫೋಟೋ ಮತ್ತು ವೀಡಿಯೊಗಳನ್ನು ಕ್ಲಿಕ್ಕಿಸಲು ಪ್ರಾರಂಭಿಸಿದರು.
ಇದರಿಂದ ಪಲಕ್ ಸ್ವಲ್ಪ ಅಸಮಾಧಾನಗೊಂಡರು. ಅದೇ ದಿನ, ಇದಕ್ಕೂ ಮೊದಲು, ಮುಂಬೈನ ಜುಹುವಿನ ಪಿವಿಆರ್‌ನಲ್ಲಿ ಪಾಪರಾಜಿಗಳು ಇಬ್ರಾಹಿಂ ಅವರನ್ನು ಮಾತ್ರ ಕ್ಲಿಕ್ ಮಾಡಿದ್ದರು. ಮತ್ತು ಅವರು ಪಾಪ್‌ಗಳಿಗೆ, “ಬಿಟ್ಟು ಬಿಡಿ ಅಣ್ಣಾ, ಮನೆಗೆ ಹೋದಿ, ಧನ್ಯವಾದಗಳು” ಎಂದು ಹೇಳಿದರು.
ಇಬ್ರಾಹಿಂ ಮತ್ತು ಪಾಲಕ್ ಅವರ ವೀಡಿಯೊಗೆ ನೆಟಿಜನ್‌ಗಳು ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕೆಲವರು ಪಾಪರಾಜಿಗಳು ಯುವ ಜೋಡಿಯ ಗೌಪ್ಯತೆಯನ್ನು ಆಕ್ರಮಿಸಿಕೊಂಡಿದ್ದಕ್ಕಾಗಿ ಟೀಕಿಸುತ್ತಿದ್ದರೆ, ಕೆಲವು ನೆಟಿಜನ್‌ಗಳು ಪಾಲಕ್ ಬಗ್ಗೆ ಇಬ್ರಾಹಿಂ ಅವರ ವರ್ತನೆಯಿಂದ ಅಸಮಾಧಾನಗೊಂಡಿದ್ದಾರೆ.
ಮಾಧ್ಯಮದ ಮುಂದೆ ಅವಳನ್ನು ಗೌರವಿಸಲು ಸಾಧ್ಯವಾಗದಿದ್ದರೆ, ಕನಿಷ್ಠ ಪಕ್ಷ ಅವನು ಅವಳನ್ನು ಹಾಗೆ ದೂರ ತಳ್ಳಬಾರದು” ಎಂದು ಒಬ್ಬ ನೆಟಿಜನ್ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಇನ್‌ಸ್ಟಾಗ್ರಾಮ್ ಬಳಕೆದಾರರು, “ಅವನು ಅವಳನ್ನು ತಳ್ಳಿದ ರೀತಿ..ಅಹಂಕಾರದಿಂದ ಕೂಡಿದೆ (sic)” ಎಂದು ಬರೆದಿದ್ದಾರೆ.
“ಅವನು ಅವಳ ಮೇಲೆ ಒತ್ತಡ ಹೇರುತ್ತಿರಲಿಲ್ಲ, ಮಾಧ್ಯಮಗಳಿಂದ ಅವಳನ್ನು ರಕ್ಷಿಸುತ್ತಿದ್ದನು, ಅವರಿಬ್ಬರು ಸಿಕ್ಕರೆ ಹಿಂದೆ ಮುಂದೆ ಸುತ್ತುತ್ತಾರೆ. ಅವರು ಜೊತೆಯಾಗಿ ಕ್ವಾಲಿಟಿ ಸಮಯವನ್ನು ಆನಂದಿಸುತ್ತಿರುವಾಗ ಅವರನ್ನು ಏಕೆ ಹಿಂಬಾಲಿಸಬೇಕು ಎಂದು ಇನ್ನೊಬ್ಬರು ಪ್ರಶ್ನಿಸಿದರು.
ಇಬ್ರಾಹಿಂ ಅವರ ‘ದಿಲೇರ್’ ಎಂಬ ಚಿತ್ರ ಸಿದ್ಧವಾಗಿದ್ದು, ಇದರಲ್ಲಿ ಶ್ರೀಲೀಲಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಏತನ್ಮಧ್ಯೆ, ಪಲಕ್ ರಾಗಿಣಿ 3 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಆದಾಗ್ಯೂ, ಚಿತ್ರದಲ್ಲಿ ಅವರ ಪಾತ್ರವರ್ಗದ ಬಗ್ಗೆ ಯಾವುದೇ ದೃಢೀಕರಣವಿಲ್ಲ.
Bangalore,Karnataka
Jun 04, 2026 10:16 PM IST













