Last Updated:
ಬಿಗ್ ಬಾಸ್ ವಿನ್ನರ್ ಅಮೌಂಟ್ 50 ಲಕ್ಷ ಮಾತ್ರ ಯಾಕೆ ಇರುತ್ತದೆ. ಸೀಸನ್-13 ಶುರು ಆಗತ್ತಿದೆ. ಈಗಲಾಗದರೂ ಹೆಚ್ಚಾಗಬಾರದೇ ಅನ್ನುವ ಪ್ರಶ್ನೆನೂ ಇದೆ. ಇದಕ್ಕೆ ಕಿಚ್ಚ ಸುದೀಪ್ ಉತ್ತರ ಕೊಟ್ಟಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ.
ಬಿಗ್ ಬಾಸ್ ಸೀಸನ್-13 (Bigg Boss-Season-13) ಶುರು ಆಗುತ್ತಿದೆ. ಸೆಪ್ಟೆಂಬರ್-6 ರಿಂದಲೇ ಆರಂಭ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪ್ರೆಸ್ ಮೀಟ್ ಇತ್ತು. ಇಲ್ಲಿ ಸುಮಾರು ಪ್ರಶ್ನೆಗಳೂ ಬಂದವು. ಎಲ್ಲದಕ್ಕೂ ಕಿಚ್ಚ ಸುದೀಪ್ (Kichcha Sudeepa) ಉತ್ತರ ಕೊಟ್ಟರು. ಬಿಗ್ ಬಾಸ್ ನಿರ್ದೇಶಕ (Bigg Boss Director) ಪ್ರಕಾಶ್ ಕೂಡ ಆನ್ಸರ್ ಮಾಡಿದ್ದಾರೆ. ಪತ್ರಕರ್ತರ ಒಂದು ಪ್ರಶ್ನೆ ಇಲ್ಲಿ ಇಂಟ್ರಸ್ಟಿಂಗ್ ಅನಿಸ್ತು. ಬಿಗ್ ಬಾಸ್ (Bigg Boss) ಸೀಸನ್ ಇಲ್ಲಿವರೆಗೂ ಬಂದಿದೆ. 12 ಸೀಸನ್ ಆಗಿವೆ. 13ನೇ ಸೀಸನ್ ಶುರು ಆಗುತ್ತಿದೆ. ಆದರೆ, ವಿನ್ನರ್‌ಗೆ ಕೇವಲ 50 ಲಕ್ಷ ಮಾತ್ರ ಸಿಗುತ್ತಿದೆ. ಇದರಲ್ಲಿ ಬದಲಾವಣೆ ಇಲ್ವೇ? ಇದು ಜಾಸ್ತಿ ಆಗೋದಿಲ್ವೇ? ಈ ಪ್ರಶ್ನೆಗೂ ಇಲ್ಲಿ ಉತ್ತರ ಸಿಕ್ಕಿದೆ. ಅದರ ವಿವರ ಇಲ್ಲಿದೆ.














