Bengaluru Airport: ಬೆಂಗಳೂರು ವಿಮಾನ ನಿಲ್ದಾಣಕ್ಕೆ ದಕ್ಷಿಣ ಭಾರತದಲ್ಲೇ ನಂಬರ್ 1 ಪಟ್ಟ, ಪ್ರಯಾಣಿಕರ ಸಂಖ್ಯೆ ಕೇಳಿದ್ರೆ ನೀವೇ ಶಾಕ್ ಆಗ್ತೀರಾ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

400 ಮಿಲಿಯನ್ ಪ್ರಯಾಣಿಕರು


Last Updated:

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ 400 ಮಿಲಿಯನ್ ಪ್ರಯಾಣಿಕರ ಇತಿಹಾಸ, 2025-26ರಲ್ಲಿ 44.47 ಮಿಲಿಯನ್, ಅಂತರರಾಷ್ಟ್ರೀಯ 23.9 ಶೇಕಡಾ, ದಕ್ಷಿಣ ಭಾರತದ ನಂಬರ್ 1 ಕೇಂದ್ರ.

400 ಮಿಲಿಯನ್ ಪ್ರಯಾಣಿಕರು
400 ಮಿಲಿಯನ್ ಪ್ರಯಾಣಿಕರು

ಬೆಂಗಳೂರು: ಐಟಿ ನಗರಿ ಬೆಂಗಳೂರಿನ (Bengaluru) ಹೆಮ್ಮೆಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (KIA) ಜಾಗತಿಕ ವಾಯುಯಾನ ವಲಯದಲ್ಲಿ ಹಿಂದೆಂದೂ ಕಾಣದ ಇತಿಹಾಸವೊಂದನ್ನು (History) ಸೃಷ್ಟಿಸಿದೆ. ಹೌದು, ತನ್ನ ಕಾರ್ಯಾಚರಣೆ ಆರಂಭಿಸಿದ ದಿನದಿಂದ ಇಂದಿನವರೆಗೆ ಬರೋಬ್ಬರಿ 400 ಮಿಲಿಯನ್ (400 Million ) (40 ಕೋಟಿ) ಪ್ರಯಾಣಿಕರನ್ನು ನಿಭಾಯಿಸುವ ಮೂಲಕ ವಿಮಾನ ನಿಲ್ದಾಣವು ಅಸಾಧಾರಣ ಮೈಲಿಗಲ್ಲನ್ನು ದಾಟಿದೆ.

ದಿಢೀರ್ ಏರಿಕೆಯಾದ ಪ್ರಯಾಣಿಕರ ಸಂಖ್ಯೆ

ಕರ್ನಾಟಕದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‍ನ 134ನೇ ಮಂಡಳಿ ಸಭೆಯಲ್ಲಿ ಈ ಶಾಕಿಂಗ್ ಹಾಗೂ ಖುಷಿಯಾದ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಲಾಗಿದೆ. ಕೇವಲ 2025-26ರ ಒಂದೇ ಹಣಕಾಸು ವರ್ಷದಲ್ಲಿ ಈ ವಿಮಾನ ನಿಲ್ದಾಣವು ಬರೋಬ್ಬರಿ 44.47 ಮಿಲಿಯನ್ ಪ್ರಯಾಣಿಕರನ್ನು ಸುರಕ್ಷಿತವಾಗಿ ನಿರ್ವಹಿಸಿ ಹೊಸ ದಾಖಲೆ ಬರೆದಿದೆ ಎಂದು ಮಾತೃಭೂಮಿ.ಕಾಮ್ ವೆಬ್‍ಸೈಟ್ ವರದಿ ಮಾಡಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಭರ್ಜರಿ ಕ್ರೇಜ್

ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಿಂದ ವಿದೇಶಕ್ಕೆ ಹಾರುವವರ ಸಂಖ್ಯೆ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಅಂತರರಾಷ್ಟ್ರೀಯ ಪ್ರಯಾಣಿಕರ ದಟ್ಟಣೆಯಲ್ಲಿ ಶೇಕಡಾ 23.9 ರಷ್ಟು ಭಾರಿ ಏರಿಕೆ ಕಂಡುಬಂದಿದ್ದು, ಒಟ್ಟು 7.23 ಮಿಲಿಯನ್ ವಿದೇಶಿ ಪ್ರಯಾಣಿಕರು ಇಲ್ಲಿಂದ ಪ್ರಯಾಣಿಸಿದ್ದಾರೆ. ಇನ್ನು ದೇಶೀಯ ಪ್ರಯಾಣಿಕರ ಸಂಖ್ಯೆಯೂ ಶೇ. 3.3 ರಷ್ಟು ಹೆಚ್ಚಾಗಿ 37.24 ಮಿಲಿಯನ್ ತಲುಪಿದೆ.

ದಕ್ಷಿಣ ಭಾರತದ ಅಧಿಪತಿ

ಒಟ್ಟಾರೆ ವಿಮಾನ ನಿಲ್ದಾಣದ ವಾರ್ಷಿಕ ಬೆಳವಣಿಗೆ ಶೇಕಡಾ 6.2 ರಷ್ಟು ಹೆಚ್ಚಾಗಿದ್ದು, ಇದು ಬೆಂಗಳೂರಿನ ವಿಸ್ತರಿಸುತ್ತಿರುವ ಬಲಿಷ್ಠ ಸಂಪರ್ಕವನ್ನು ಸಾಬೀತುಪಡಿಸಿದೆ. ಸದ್ಯಕ್ಕೆ ನಮ್ಮ ಕೆಂಪೇಗೌಡ ಏರ್‌ಪೋರ್ಟ್ 78 ಕ್ಕೂ ಹೆಚ್ಚು ದೇಶೀಯ ನಗರಗಳಿಗೆ ಹಾಗೂ 34 ಅಂತರರಾಷ್ಟ್ರೀಯ ಪ್ರಮುಖ ತಾಣಗಳಿಗೆ ನೇರ ವಿಮಾನ ಸಂಪರ್ಕವನ್ನು ಒದಗಿಸುತ್ತಿದೆ. ಈ ಮೂಲಕ ದಕ್ಷಿಣ ಭಾರತದ ನಂಬರ್ 1 ಪ್ರಮುಖ ವಾಯುಯಾನ ಕೇಂದ್ರವಾಗಿ ಬೆಂಗಳೂರು ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಈ ದಾಖಲೆ ಎಲ್ಲಿಗೆ ಹೋಗಿ ನಿಲ್ಲುತ್ತೆ ಅನ್ನೋದೇ ಈಗ ತಜ್ಞರ ಕುತೂಹಲ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed