Last Updated:
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ 400 ಮಿಲಿಯನ್ ಪ್ರಯಾಣಿಕರ ಇತಿಹಾಸ, 2025-26ರಲ್ಲಿ 44.47 ಮಿಲಿಯನ್, ಅಂತರರಾಷ್ಟ್ರೀಯ 23.9 ಶೇಕಡಾ, ದಕ್ಷಿಣ ಭಾರತದ ನಂಬರ್ 1 ಕೇಂದ್ರ.
ಬೆಂಗಳೂರು: ಐಟಿ ನಗರಿ ಬೆಂಗಳೂರಿನ (Bengaluru) ಹೆಮ್ಮೆಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (KIA) ಜಾಗತಿಕ ವಾಯುಯಾನ ವಲಯದಲ್ಲಿ ಹಿಂದೆಂದೂ ಕಾಣದ ಇತಿಹಾಸವೊಂದನ್ನು (History) ಸೃಷ್ಟಿಸಿದೆ. ಹೌದು, ತನ್ನ ಕಾರ್ಯಾಚರಣೆ ಆರಂಭಿಸಿದ ದಿನದಿಂದ ಇಂದಿನವರೆಗೆ ಬರೋಬ್ಬರಿ 400 ಮಿಲಿಯನ್ (400 Million ) (40 ಕೋಟಿ) ಪ್ರಯಾಣಿಕರನ್ನು ನಿಭಾಯಿಸುವ ಮೂಲಕ ವಿಮಾನ ನಿಲ್ದಾಣವು ಅಸಾಧಾರಣ ಮೈಲಿಗಲ್ಲನ್ನು ದಾಟಿದೆ.
ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಿಂದ ವಿದೇಶಕ್ಕೆ ಹಾರುವವರ ಸಂಖ್ಯೆ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಅಂತರರಾಷ್ಟ್ರೀಯ ಪ್ರಯಾಣಿಕರ ದಟ್ಟಣೆಯಲ್ಲಿ ಶೇಕಡಾ 23.9 ರಷ್ಟು ಭಾರಿ ಏರಿಕೆ ಕಂಡುಬಂದಿದ್ದು, ಒಟ್ಟು 7.23 ಮಿಲಿಯನ್ ವಿದೇಶಿ ಪ್ರಯಾಣಿಕರು ಇಲ್ಲಿಂದ ಪ್ರಯಾಣಿಸಿದ್ದಾರೆ. ಇನ್ನು ದೇಶೀಯ ಪ್ರಯಾಣಿಕರ ಸಂಖ್ಯೆಯೂ ಶೇ. 3.3 ರಷ್ಟು ಹೆಚ್ಚಾಗಿ 37.24 ಮಿಲಿಯನ್ ತಲುಪಿದೆ.
ಒಟ್ಟಾರೆ ವಿಮಾನ ನಿಲ್ದಾಣದ ವಾರ್ಷಿಕ ಬೆಳವಣಿಗೆ ಶೇಕಡಾ 6.2 ರಷ್ಟು ಹೆಚ್ಚಾಗಿದ್ದು, ಇದು ಬೆಂಗಳೂರಿನ ವಿಸ್ತರಿಸುತ್ತಿರುವ ಬಲಿಷ್ಠ ಸಂಪರ್ಕವನ್ನು ಸಾಬೀತುಪಡಿಸಿದೆ. ಸದ್ಯಕ್ಕೆ ನಮ್ಮ ಕೆಂಪೇಗೌಡ ಏರ್‌ಪೋರ್ಟ್ 78 ಕ್ಕೂ ಹೆಚ್ಚು ದೇಶೀಯ ನಗರಗಳಿಗೆ ಹಾಗೂ 34 ಅಂತರರಾಷ್ಟ್ರೀಯ ಪ್ರಮುಖ ತಾಣಗಳಿಗೆ ನೇರ ವಿಮಾನ ಸಂಪರ್ಕವನ್ನು ಒದಗಿಸುತ್ತಿದೆ. ಈ ಮೂಲಕ ದಕ್ಷಿಣ ಭಾರತದ ನಂಬರ್ 1 ಪ್ರಮುಖ ವಾಯುಯಾನ ಕೇಂದ್ರವಾಗಿ ಬೆಂಗಳೂರು ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಈ ದಾಖಲೆ ಎಲ್ಲಿಗೆ ಹೋಗಿ ನಿಲ್ಲುತ್ತೆ ಅನ್ನೋದೇ ಈಗ ತಜ್ಞರ ಕುತೂಹಲ.
Bangalore [Bangalore],Bangalore,Karnataka













