Actors: ವೇಶ್ಯಾವಾಟಿಕೆಯಿಂದ ನೂರಾರು ಮಹಿಳೆಯರ ರಕ್ಷಿಸಿದ ಬಾಲಿವುಡ್ ಸ್ಟಾರ್! ಶಾರುಖ್, ಸಲ್ಮಾನ್ ಖಾನ್ ಅಲ್ಲ | | ACTPnews

Actors: ವೇಶ್ಯಾವಾಟಿಕೆಯಿಂದ ನೂರಾರು ಮಹಿಳೆಯರ ರಕ್ಷಿಸಿದ ಬಾಲಿವುಡ್ ಸ್ಟಾರ್! ಶಾರುಖ್, ಸಲ್ಮಾನ್ ಖಾನ್ ಅಲ್ಲ |


ಹೌದು, ಮಾಂಸ ದಂಧೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ 128 ಮಹಿಳೆಯರನ್ನು ಬಾಲಿವುಡ್​ನ ಸ್ಟಾರ್ ನಟ ರಕ್ಷಿಸಿದ್ದಾರೆ. ಅಷ್ಟೇ ಅಲ್ಲದೆ ಅವರನ್ನು ವಾಪಸ್ ಮನೆಗೆ ಸೇರಿಸಲು ಫ್ಲೈಟ್ ಟಿಕೆಟ್ ಬುಕ್ ಮಾಡಿಕೊಟ್ಟಿದ್ದಾರೆ. ಆ ನಟ ಯಾರು? ಶಾರುಖ್ ಅಥವಾ ಸಲ್ಮಾನ್ ಖಾನ್ ಅಲ್ಲ.

ಬಾಲಿವುಡ್ ಆಕ್ಷನ್ ಹೀರೋ ಸುನೀಲ್ ಶೆಟ್ಟಿ ಬೆಳ್ಳಿ ಪರದೆಯ ಮೇಲೆ ಹಲವರ ರಕ್ಷಣೆಗೆ ಬಂದಿರುವುದನ್ನು ನೀವು ನೋಡಿರಬಹುದು. ಆದರೆ ಅವರ ನಿಜವಾದ ಮಾನವೀಯತೆಯ ಕಥೆ ಗೊತ್ತಾ? ಮಾಂಸ ದಂಧೆ ಕಳ್ಳಸಾಗಣೆಯಿಂದ ಬಚಾವಾದ 128 ಜನರಿಗೆ ಈ ನಟ ರಿಯಲ್ ಲೈಫ್ ಹೀರೋ ಆದರು.

ಈ ಘಟನೆ 30 ವರ್ಷಗಳ ಹಿಂದೆ 1996 ರಲ್ಲಿ ನಡೆಯಿತು. ಕಾರ್ಯಾಚರಣೆಯಲ್ಲಿ ರಕ್ಷಿಸಲ್ಪಟ್ಟ ಮಹಿಳೆಯರಲ್ಲಿ ಒಬ್ಬರಾದ ಚರಿಮಯಾ ತಮಾಂಗ್, ಸುನೀಲ್ ಶೆಟ್ಟಿ ಅವರ ನೆರವಿನ ಬಗ್ಗೆ ಹೇಳೋದು ತನ್ನ ಕರ್ತವ್ಯ ಎಂದು ಭಾವಿಸುವವರೆಗೂ ಅದು ರಹಸ್ಯವಾಗಿಯೇ ಇತ್ತು.

“ಕಾರ್ಯಾಚರಣೆಯನ್ನು ಹೇಗೆ ಮಾಡಬೇಕೆಂದು ಸರ್ಕಾರ ಗೊಂದಲಕ್ಕೊಳಗಾದಾಗ, ನಮಗೆ ಬೆಂಬಲ ನೀಡಿದವರು ಭಾರತದ ನಟ ಸುನೀಲ್ ಶೆಟ್ಟಿ” ಎಂದು ಅವರು ವೈಸ್ ಇಂಡಿಯಾ ಸಾಕ್ಷ್ಯಚಿತ್ರ – ದಿ ಫರ್ಗಾಟನ್ ಒನ್ಸ್: ಹ್ಯೂಮನ್ ಟ್ರಾಫಿಕಿಂಗ್ ಇನ್ ನೇಪಾಳದಲ್ಲಿ ಬಹಿರಂಗಪಡಿಸಿದ್ದಾರೆ.

30 ವರ್ಷಗಳ ಹಿಂದೆ ಏನಾಯಿತು?

1996 ರ ಫೆಬ್ರವರಿ 5 ರಂದು, ಮುಂಬೈ ಪೊಲೀಸರು ಕಾಮಟಿಪುರ ರೆಡ್ ಲೈಟ್ ಏರಿಯಾದಲ್ಲಿ ದಾಳಿ ನಡೆಸಿ 14 ರಿಂದ 30 ವರ್ಷದೊಳಗಿನ 456 ಜನರನ್ನು ಲೈಂಗಿಕವಾಗಿ ಕಳ್ಳಸಾಗಣೆ ಮಾಡುವುದರಿಂದ ರಕ್ಷಿಸಿದರು. ರಕ್ಷಿಸಲ್ಪಟ್ಟ 456 ಮಹಿಳೆಯರಲ್ಲಿ 128 ಜನರು ನೇಪಾಳದವರಾಗಿದ್ದರು. ಈ ಮಹಿಳೆಯರಲ್ಲಿ ಹೆಚ್ಚಿನವರ ಬಳಿ ಪೌರತ್ವಕ್ಕೆ ಏನೂ ದಾಖಲೆ ಇಲ್ಲದ ಕಾರಣ, ನೇಪಾಳ ಸರ್ಕಾರವೂ ಅವರನ್ನು ವಾಪಸ್ ಕರೆದುಕೊಂಡು ಹೋಗುವ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು.

ಇಂತಹ ಸಮಯದಲ್ಲಿ, ಎಲ್ಲರೂ ಮಹಿಳೆಯರನ್ನು ಸುರಕ್ಷಿತವಾಗಿ ಕಠ್ಮಂಡುವಿಗೆ ಕಳುಹಿಸುವ ಮಾರ್ಗವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾಗ, ನಟ ಸುನೀಶ್ ಶೆಟ್ಟಿ ಅವರಿಗೆ ಈ ಸುದ್ದಿ ತಿಳಿಯಿತು.

ಅವರು ವಿಮಾನ ವ್ಯವಸ್ಥೆ ಮಾಡಲು ಸಹಾಯ ಮಾಡಿದರು. ಎಲ್ಲಾ 128 ಮಹಿಳೆಯರು ಸುರಕ್ಷಿತವಾಗಿ ಮನೆಗೆ ತಲುಪುವಂತೆ ನೋಡಿಕೊಳ್ಳಲು ಅವರ ಟಿಕೆಟ್‌ಗಳಿಗೆ ಹಣ ಪಾವತಿಸಿದರು. ಈ ಕಾರ್ಯಾಚರಣೆಗೆ ನಟ ಮುಂಬೈ ಪೊಲೀಸರು ಮತ್ತು ತಮ್ಮ ಅತ್ತೆ, ‘ಸೇವ್ ದಿ ಚಿಲ್ಡ್ರನ್’ ಎನ್‌ಜಿಒ ಸ್ಥಾಪಕಿ ವಿಪುಲ ಕದ್ರಿ ಕೃತಜ್ಞತೆ ಸಲ್ಲಿಸಿದರು.

ಮಾಧ್ಯಮಗಳಿಂದ ಈ ಸುದ್ದಿ ದೂರವಿಡಲು ಅವರು ದೃಢನಿರ್ಧಾರ ಮಾಡಿಬಿಟ್ಟಿದ್ದರು. ಇತ್ತೀಚಿನ ರೇಡಿಯೋ ಸರ್ಗಮ್ ಸಂದರ್ಶನದಲ್ಲಿ ಅವರು ಈ ಪ್ರಶ್ನೆಗೆ ಉತ್ತರಿಸಿ, “ನಾವು ನಮ್ಮನ್ನು ವೈಭವೀಕರಿಸಿಕೊಳ್ಳಲು ಬಯಸಲಿಲ್ಲ ಎಂದಿದ್ದಾರೆ.

ಘಟನೆ ಮತ್ತೆ ಬೆಳಕಿಗೆ ಬಂದ ನಂತರ, ಅನೇಕ ಸೆಲೆಬ್ರಿಟಿಗಳು ಟ್ವಿಟರ್‌ನಲ್ಲಿ ನಟನನ್ನು ಅವರ ಕೆಲಸಕ್ಕಾಗಿ ಅಭಿನಂದಿಸಿದರು.

ಚಾರಿಮಯ ತಮಂಗ್, ನೇಪಾಳ ಮೂಲದ, 1996 ರ ಘಟನೆಯಲ್ಲಿ ಪಾರಾದ ಮಹಿಳೆಯರ ಪುನರ್ವಸತಿ ಪರವಾಗಿ ಕೆಲಸ ಮಾಡುವ ಶಕ್ತಿ ಸಮುಹಾ ಎಂಬ ಸರ್ಕಾರೇತರ ಸಂಸ್ಥೆಯ ಸ್ಥಾಪಕ ಸದಸ್ಯರಾಗಿದ್ದಾರೆ. ದಕ್ಷಿಣ ಏಷ್ಯಾದಲ್ಲಿ ಮಾಂಸ ದಂಧೆ ಪ್ರಕರಣಗಳಲ್ಲಿ ನೇಪಾಳ ಅಗ್ರಸ್ಥಾನದಲ್ಲಿರುವುದರಿಂದ, ಶಕ್ತಿ ಸಮುಹಾದಂತಹ ಸರ್ಕಾರೇತರ ಸಂಸ್ಥೆಗಳು ಪ್ರತಿದಿನ ಬದಲಾವಣೆ ತರಲು ಪ್ರಯತ್ನಿಸುತ್ತಿವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed