Balaramana Dinagalu Movie: ವಿನೋದ್‌ ಪ್ರಭಾಕರ್‌ ಅಭಿನಯದ ‘ಬಲರಾಮನ ದಿನಗಳು’ ರಿಲೀಸ್‌ ಡೇಟ್‌ ಫಿಕ್ಸ್‌ | | ACTPnews

ಅಂದು ಆ ದಿನಗಳು, ಇಂದು ಬಲರಾಮನ ದಿನಗಳು; ಆದರೆ ಇದು 2 ನೇ ಭಾಗ ಅಲ್ವೇ ಅಲ್ಲ!


Last Updated:

ಆ ದಿನಗಳು ಬಂದು 19 ವರ್ಷ ಆಗಿದೆ. ಇಷ್ಟು ವರ್ಷ ಆದ್ಮೇಲೆ ಡೈರೆಕ್ಟರ್ ಕೆ.ಎಂ.ಚೈತನ್ಯ ಬಲರಾಮನ ದಿನಗಳು ಚಿತ್ರ ಮಾಡಿದ್ದಾರೆ. ಇದರ ಬಗ್ಗೆನೂ ಒಂದು ನಿರೀಕ್ಷೆ ಇದೆ. ಈ ಚಿತ್ರದ ಸದ್ಯದ ಹೊಸ ಮಾಹಿತಿ ಇಲ್ಲಿದೆ ಓದಿ.

ಅಂದು ಆ ದಿನಗಳು, ಇಂದು ಬಲರಾಮನ ದಿನಗಳು; ಆದರೆ ಇದು 2 ನೇ ಭಾಗ ಅಲ್ವೇ ಅಲ್ಲ!
ಅಂದು ಆ ದಿನಗಳು, ಇಂದು ಬಲರಾಮನ ದಿನಗಳು; ಆದರೆ ಇದು 2 ನೇ ಭಾಗ ಅಲ್ವೇ ಅಲ್ಲ!

ಆ ದಿನಗಳು ಚಿತ್ರ (Aa Dinagalu Movie) ಬೆಂಗಳೂರಿನ ಭೂಗತ ಲೋಕದ ಸತ್ಯಗಳನ್ನ ಕಟ್ಟಿಕೊಟ್ಟಿತ್ತು. ಡೈರೆಕ್ಟರ್ ಕೆ.ಎಂ.ಚೈತನ್ಯ (K. M. Chaitanya) ಈ ಚಿತ್ರವನ್ನ ತುಂಬಾನೆ ಚೆನ್ನಾಗಿ ಮಾಡಿದ್ದರು. ಅಂತಹ ಈ ಚಿತ್ರ ಬಂದು 19 ವರ್ಷ ಆಗಿದೆ. ಇಷ್ಟು ವರ್ಷದ ಬಳಿಕ ಡೈರೆಕ್ಟರ್ ಕೆ.ಎಂ.ಚೈತನ್ಯ (K. M. Chaitanya) ಮತ್ತೊಂದು ಕತೆ ಹೇಳುತ್ತಿದ್ದಾರೆ. ಇದು ಕೂಡ ಆ ದಿನಗಳ ಕತೆನೇ ಆಗಿದೆ. ಆದರೆ, ಇದು ಆ ದಿನಗಳ ಪಾರ್ಟ್- 2 ಅಲ್ಲ ಬಿಡಿ. ಇಲ್ಲಿ ಬಲರಾಮನ ಕತೆ ಹೇಳ್ತಿದ್ದಾರೆ. ಇದರ ರಿಲೀಸ್ ಡೇಟ್ (Release Date) ಅನೌನ್ಸ್ ಆಗಿದೆ. ಇತರ ಮಾಹಿತಿನೂ ಅಧಿಕೃತವಾಗಿಯೇ ಬಂದಿವೆ. ಇದರ ಕಂಪ್ಲಿಟ್ ವಿವರ ಇಲ್ಲಿದೆ ಓದಿ.

ಬಲರಾಮನ ದಿನಗಳು..

ಬಲರಾಮನ ದಿನಗಳು ಚಿತ್ರದಲ್ಲಿ ವಿನೋದ್ ಪ್ರಭಾಕರ್ ಇದ್ದಾರೆ. ಇವರು ಇಲ್ಲಿ ಬಲರಾಮನ ಪಾತ್ರ ಮಾಡಿದ್ದಾರೆ. ಈ ಬಲರಾಮ ಹೇಗೆ ಬೆಂಗಳೂರು ಭೂಗತಲೋಕ್ಕೆ ಕಾಲಿಟ್ಟ ಅನ್ನೋದ್ರಿಂದ ಈ ಕತೆ ಶುರು ಆಗುತ್ತದೆ. ಇದು ಈಗ ಬಿಟ್ಟಿರೋ ಟೀಸರ್ ಅಲ್ಲೂ ತಿಳಿಯುತ್ತದೆ.
Vinod Prabhakar Priya Anand Balaramana Dinagalu Movie Latest Updates

ದೊಡ್ಡಮಟ್ಟದಲ್ಲಿ ರಿಲೀಸ್

ಆದರೆ, ಈ ಬಲರಾಮನ ಕತೆ ಬೇರೆ ಇದೆ. ಈ ಹಿಂದಿನ ಆ ದಿನಗಳು ಚಿತ್ರದಲ್ಲಿ ಬೇರೆ ಬೇರೆ ಕ್ಯಾರೆಕ್ಟರ್‌ಗಳಿದ್ದವು. ಇಲ್ಲೂ ಆ ಪಾತ್ರಗಳನ್ನ ನಿರ್ವಹಿಸಿದ ಕಲಾವಿದರು ಇದ್ದಾರೆ. ಆದರೆ, ಈ ಕತೆಗೂ ಈ ಹಿಂದಿನ ಆ ದಿನಗಳು ಕತೆಗೂ ಲಿಂಕ್ ಇಲ್ಲ. ಇದು ಪಾರ್ಟ್-2 ಕೂಡ ಅಲ್ಲ ನೋಡಿ

ಜೂನ್-26 ಕ್ಕೆ ರಿಲೀಸ್

ಬಲರಾಮನ ದಿನಗಳು ಚಿತ್ರದಲ್ಲಿ ಅತುಲ್ ಕುಲಕರ್ಣಿ ಇದ್ದಾರೆ. ಶರತ್ ಲೋಹಿತಾಶ್ವ ನಟಿಸಿದ್ದಾರೆ. ಬಾಲಿವುಡ್ ನಟ ಆಶೀಶ್ ವಿದ್ಯಾರ್ಥಿ ಇದ್ದಾರೆ. ಬಿಗ್ ಬಾಸ್ ಖ್ಯಾತಿಯ ನಟ ವಿನಯ್ ಗೌಡ ಸಹ ನಟಿಸಿದ್ದಾರೆ.

ಹಾಗೆ ವಿನಯ್ ಗೌಡ ಬಿಟ್ಟರೆ, ಇತರ ಕಲಾವಿದು ಈ ಹಿಂದಿನ ಆ ದಿನಗಳು ಚಿತ್ರದಲ್ಲಿ ನಟಿಸಿದ್ದರು. ಹಾಗೆ ಈ ಬಲರಾಮನ ದಿನಗಳು ರಿಲೀಸ್ ವಿಚಾರಕ್ಕೆ ಬಂದ್ರೆ, ಈಗಾಗಲೇ ಹೇಳಿದಂತೆ ಈ ಚಿತ್ರ ಇದೇ ಜೂನ್-26 ಕ್ಕೆ ರಿಲೀಸ್ ಆಗುತ್ತಿದೆ.

ದೊಡ್ಡಮಟ್ಟದಲ್ಲಿ ರಿಲೀಸ್

ಬಲರಾಮನ ದಿನಗಳು ಚಿತ್ರ ದೊಡ್ಡಮಟ್ಟದಲ್ಲಿಯೇ ರಿಲೀಸ್ ಆಗುತ್ತಿದೆ. ಕೆ.ವಿ.ಎನ್.ಸಂಸ್ಥೆ ಈ ಚಿತ್ರವನ್ನ ವಿತರಣೆ ಮಾಡುತ್ತಿದೆ.

ಈ ಚಿತ್ರದ ಇನ್ನೊಂದು ವಿಚಾರ ಹೇಳೋದಾದರೆ, ಈ ಸಿನಿಮಾದ ನಾಯಕ ವಿನೋದ್ ಪ್ರಭಾಕರ್ ಅವರಿಗೆ ಇಲ್ಲಿ ಪ್ರಿಯಾ ಆನಂದ್ ಜೋಡಿ ಆಗಿದ್ದಾರೆ.

Vinod Prabhakar Priya Anand Balaramana Dinagalu Movie Latest Updates

ಜೂನ್-26 ಕ್ಕೆ ರಿಲೀಸ್
ಮ್ಯೂಸಿಕ್ ಯಾರದ್ದು ಗೊತ್ತಾ

ಈ ಬಲರಾಮನ ದಿನಗಳು ಚಿತ್ರಕ್ಕೆ ಹೆಸರಾಂತ ಸಂಗೀತ ನಿರ್ದೇಶಕರೇ ಸಂಗೀತ ಮಾಡಿದ್ದಾರೆ. ದಕ್ಷಿಣ ಭಾರತದ ಖ್ಯಾತ ಸಂಗೀತ‌ ನಿರ್ದೇಶಕ ಸಂತೋಷ್ ನಾರಾಯಣ್ ಈ ಸಿನಿಮಾ ಮ್ಯೂಸಿಕ್ ಮಾಡಿದ್ದಾರೆ.

ಆ ದಿನಗಳು ರಿಲೀಸ್ ಆಗಿ…

ಈ ಹಿಂದಿನ ಆ ದಿನಗಳು ಚಿತ್ರ ಬಂದು 19 ವರ್ಷ ಆಗಿದೆ. ಅಕ್ಟೋಬರ್-19, 2007 ರಂದು ಈ ಚಿತ್ರ ತೆರೆ ಕಂಡಿತ್ತು. ಈ ಚಿತ್ರಕ್ಕೆ ಒಳ್ಳೆ ಅಭಿಪ್ರಾಯವೂ ಬಂದಿತ್ತು.

ಡೈರೆಕ್ಟರ್ ಕೆ.ಎಂ.ಚೈತನ್ಯ ಅವರು ಆ ದಿನಗಳ ಕತೆಯನ್ನ ತುಂಬಾನೆ ಚೆನ್ನಾಗಿಯೇ ಹೇಳಿದ್ದರು.19 ವರ್ಷದ ಬಳಿಕ ಈಗ ಬಲರಾಮನ ದಿನಗಳು ಹೇಳುತ್ತಿದ್ದಾರೆ. ಈ ಚಿತ್ರವೂ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed