Last Updated:
Ankit Baliyan: ಅಂಕಿತ್ ಬಲಿಯಾ ಕೊಲೆಯಾಗೋ ಮುನ್ನ ಮರ್ಡರ್ ಸಾಂಗ್ ಹಾಡಿದ್ದ ವಿಡಿಯೋ ವೈರಲ್, ಸಾವಿಗೂ ಮುನ್ನ ಕೊನೆಯ ಪೋಸ್ಟ್ ಈಗ ವೈರಲ್.
ಖ್ಯಾತ ಹರಿಯಾನ್ವಿ ಗಾಯಕ ಅಂಕಿತ್ ಬಲಿಯಾನ್ (Ankit Baliyan) 35 ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾರೆ. ಆಘಾತಕಾರಿ ಘಟನೆಯಲ್ಲಿ ಅವರು ಸಾವನ್ನಪ್ಪಿದ್ದು, ಸಾವಿನ ನಂತರ ಅವರ ಕೊನೆಯ ಇನ್ಸ್ಟಾಗ್ರಾಮ್ ರೀಲ್ (Instagram Reel) ಗಮನ ಸೆಳೆದಿದೆ. ಆಗಸ್ಟ್ 26 ರಂದು ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ (Shamli District) ಅವರನ್ನು ಗುಂಡಿಕ್ಕಿ ಕೊಲ್ಲುವ ಗಂಟೆಗಳ ಮೊದಲು, ಗಾಯಕ ಅಂಕಿತ್ ಹಾಡಿನ ಒಂದೆರಡು ಸಾಲುಗಳನ್ನು ಹಾಡುತ್ತಿರುವ ವೀಡಿಯೊವನ್ನು ಶೇರ್ ಮಾಡಿದ್ದರು.














