Last Updated:
ಅಂಡಮಾನ್ ದ್ವೀಪಗಳ ಪೂರ್ವ ತೀರಗಳಿಗೆ 15 ಕಿಲೋ ಮೀಟರ್ ದೂರದಲ್ಲಿರುವ ಶ್ರೀ ವಿಜಯಪುರಂ-03 ಬಳಿ ನ್ಯಾಚುರಲ್ ಗ್ಯಾಸ್ ಪತ್ತೆಯಾಗಿರೋದಾಗಿ ಪೆಟ್ರೋಲಿಯಂ ಹರ್ದೀಪ್ ಸಿಂಗ್ ಪುರಿ ಘೋಷಣೆ ಮಾಡಿದ್ದಾರೆ.
ಭಾರತ ಪೂರ್ವ ಕರಾವಳಿಯ ದ್ವೀಪಗಳಲ್ಲಿ (Andaman Sea) ಭಾರೀ ಪ್ರಮಾಣದ ನಿಕ್ಷೇಪಗಳು ಪತ್ತೆಯಾಗಿದೆ. ಅಂಡಮಾನ್ ಪೂರ್ವ ತೀರದ 15 ಕಿಲೋ ಮೀಟರ್ ದೂರದ ಶ್ರೀ ವಿಜಯಪುರಂ-03 ಬಳಿ (Sri Vijayapuram-3) ಗ್ಯಾಸ್ ನಿಕ್ಷೇಪಗಳು ಪತ್ತೆಯಾಗಿರೋದಾಗಿ ಕೇಂದ್ರ ಘೋಷಣೆ ಮಾಡಿದೆ. ಆಯಿಲ್ ಇಂಡಿಯಾ ಲಿಮಿಟೆಡ್ ಉತ್ಖನನದಲ್ಲಿ ಸಮುದ್ರ ಆಳದ 355 ಮೀಟರ್ ಕೆಳಭಾಗದಲ್ಲಿ ನಿಕ್ಷೇಪ ಪತ್ತೆಯಾಗಿರೋದಾಗಿ (Natural Gas) ಗುರುತಿಸಿದ್ದಾರೆ. ಭಾರತದ ಕರಾವಳಿ ಪರಿಶೋಧನಾ ಪ್ರಯತ್ನಗಳು ಒಂದು ಪ್ರಮುಖ ಪ್ರಗತಿಯಾಗಿದೆ ಎಂದು ಎಕ್ಸ್ ನಲ್ಲಿ ಪೆಟ್ರೋಲಿಯಂ ಸಚಿವ (Hardeep Singh Puri) ವಿಡಿಯೋ ಶೇರ್ ಮಾಡಿದ್ದಾರೆ.
ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆಯ ದಿನ ದೇಶೀಯ ಇಂಧನ ನಿಕ್ಷೇಪಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲು ಪ್ರಧಾನಿ ಮೋದಿ ಘೋಷಣೆ ಮಾಡಿದ್ದರು. ಇದರೊಂದಿಗೆ ಸಮುದ್ರ ಮಂಥನ್ ಮಿಷನ್ ಆರಂಭವಾಗಿತ್ತು. ಈ ಯೋಜನೆ ಭಾಗವಾಗಿ ಹೈಡ್ರೋಕಾರ್ಬನ್ ನಿಕ್ಷೇಪಗಳನ್ನು ಸಂಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲು ತೀರ ಪ್ರದೇಶಗಳ ಮುಖಜ ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಅನ್ವೇಷಣೆಗಳು ನಡೆಸಲು ಪ್ರಣಾಳಿಕೆ ಮಾಡಿಕೊಂಡಿದ್ದೇವು. ಅಂಡಮಾನ್ ಬೇಸ್ ನಲ್ಲಿ ಮೂರು ಅನ್ವೇಷಣ ಭಾವಿಗಳಲ್ಲಿ ಹೈಡ್ರೋಕಾರ್ಬಾನ್ ಇರೋದು ಖಚಿತವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
Congratulations @OilIndiaLimited !
An ocean of energy opportunities reinforced in the Andaman Sea!
Very happy to report the presence of natural gas in Sri Vijayapuram-3 an exploratory well drilled by Oil India Ltd. 15 km off the east coast of the Andaman Islands at a water… pic.twitter.com/j6QvWqZkFx
— Hardeep Singh Puri (@HardeepSPuri) June 5, 2026
ಈ ಆವಿಷ್ಕಾರ ಅಂಡಮಾನ್ ಪ್ರದೇಶಗಳಲ್ಲಿ ನಡೆಯುತ್ತಿರುವ ಅನ್ವೇಷಣೆಗಳಿಗೆ ಸಿಕ್ಕ ಅತೀ ದೊಡ್ಡ ಗೆಲುವು, ಇದು ಭಾರತದ ಇಂಧನ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಸಚಿವರು ಬರೆದುಕೊಂಡಿದ್ದಾರೆ.













