RWF Recruitment: ರೈಲ್ವೆ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ, ಬೆಂಗಳೂರಿನ RWF ನಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅಪ್ಲೈ ಮಾಡಿ! | ಉದ್ಯೋಗ ಸುದ್ದಿ | ACTPnews

ಬಂಪರ್ ಉದ್ಯೋಗಾವಕಾಶ


Last Updated:

ಬೆಂಗಳೂರಿನ ರೈಲ್ ವೀಲ್ ಫ್ಯಾಕ್ಟರಿ (RWF) 10 ಕ್ರೀಡಾಪಟು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಟೆಕ್ನೀಷಿಯನ್ ಗ್ರೇಡ್-III ಮತ್ತು ಜೂನಿಯರ್ ಕ್ಲರ್ಕ್/ಅಕೌಂಟ್ಸ್ ಕ್ಲರ್ಕ್ ಹುದ್ದೆಗಳಿವೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 24, 2026.

ಬಂಪರ್ ಉದ್ಯೋಗಾವಕಾಶ
ಬಂಪರ್ ಉದ್ಯೋಗಾವಕಾಶ

ಬೆಂಗಳೂರು: ಕೇಂದ್ರ ಸರ್ಕಾರದ (Central Govt) ಅಡಿಯಲ್ಲಿ ಬೆಂಗಳೂರಿನಲ್ಲಿ (Bengaluru) ಕೆಲಸ ಮಾಡಲು ಆಸಕ್ತಿ ಇರುವ ಕ್ರೀಡಾಪಟುಗಳಿಗೆ (Athletes) ಇದೋ ಬಂತು ಸುವರ್ಣಾವಕಾಶ. ರೈಲ್ ವೀಲ್ ಫ್ಯಾಕ್ಟರಿ (RWF) ಯಲ್ಲಿ ಖಾಲಿ ಇರುವ 10 ಕ್ರೀಡಾಪಟು ಹುದ್ದೆಗಳನ್ನು (Jobs) ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಆಫ್‍ಲೈನ್ ಮೂಲಕ ಅರ್ಜಿಗಳನ್ನು (Application) ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ ಹಾಗೂ ವಿದ್ಯಾರ್ಹತೆ

ರೈಲ್ ವೀಲ್ ಫ್ಯಾಕ್ಟರಿಯ ಈ ನೇಮಕಾತಿಯಲ್ಲಿ ಟೆಕ್ನೀಷಿಯನ್ ಗ್ರೇಡ್-III ಹಾಗೂ ಜೂನಿಯರ್ ಕ್ಲರ್ಕ್/ಅಕೌಂಟ್ಸ್ ಕ್ಲರ್ಕ್ ಹುದ್ದೆಗಳು ಲಭ್ಯವಿವೆ.

ಟೆಕ್ನೀಷಿಯನ್ ಹುದ್ದೆಗೆ: ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಹಾಗೂ ಐಟಿಐ ಪೂರ್ಣಗೊಳಿಸಿರಬೇಕು.

ಕ್ಲರ್ಕ್ ಹುದ್ದೆಗೆ: 12ನೇ ತರಗತಿ ಪಾಸ್ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

ವಯೋಮಿತಿ ವಿವರ

01 ಜನವರಿ 2027ರ ಒಳಗೆ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 25 ವರ್ಷ ವಯೋಮಿತಿಯನ್ನು ಹೊಂದಿರಬೇಕು. ಸರ್ಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ ಕೂಡ ಅನ್ವಯವಾಗಲಿದೆ.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 25 ಜುಲೈ 2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24 ಆಗಸ್ಟ್ 2026

ಕ್ಷೇತ್ರ ಪರೀಕ್ಷೆಗಳ ದಿನಾಂಕ: 06 ರಿಂದ 08 ಅಕ್ಟೋಬರ್ 2026

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತರು RWF ನ ಅಧಿಕೃತ ವೆಬ್‍ಸೈಟ್ rwf.indianrailways.gov.in ನಿಂದ ಅರ್ಜಿ ನಮೂನೆಯನ್ನು ಡೌನ್‍ಲೋಡ್ ಮಾಡಿಕೊಳ್ಳಬೇಕು. ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸ್ವಯಂ-ದೃಢೀಕರಿಸಿ, ನಿಗದಿತ ವಿಳಾಸಕ್ಕೆ 24ನೇ ಆಗಸ್ಟ್ 2026ರೊಳಗೆ ತಲುಪುವಂತೆ ಅಂಚೆ ಮೂಲಕ ಕಳುಹಿಸಬೇಕು. ಕ್ರೀಡೆಯಲ್ಲಿ ಸಾಧನೆ ಮಾಡಿರುವ ಯುವಕರಿಗೆ ಇದು ಅತ್ಯುತ್ತಮ ಅವಕಾಶವಾಗಿದ್ದು, ಕೊನೆಯ ದಿನಾಂಕ ಕಾಯದೆ ಇಂದೇ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಿ.

ಇದನ್ನೂ ಓದಿ: Recruitment: ಆಯಿಲ್ ಇಂಡಿಯಾದಲ್ಲಿ ಬೃಹತ್ ಉದ್ಯೋಗಾವಕಾಶ, ಈ ಹುದ್ದೆಗೆ ನೇರ ಸಂದರ್ಶನ!

ದೇಶದ ಹೆಮ್ಮೆಯ ಮಹಾರತ್ನ ಕಂಪನಿಗಳಲ್ಲಿ ಒಂದಾದ ಆಯಿಲ್ ಇಂಡಿಯಾ ಲಿಮಿಟೆಡ್ (Oil India Limited) ಸಂಸ್ಥೆಯಲ್ಲಿ ಉದ್ಯೋಗ (Job) ಹುಡುಕುತ್ತಿರುವ ಯುವ ಜನತೆಗೆ ಸುವರ್ಣ ಅವಕಾಶವೊಂದು ಎದುರಾಗಿದೆ. ಅಸ್ಸಾಂನ (Assam) ದುಲಿಯಾಜನ್‌ನಲ್ಲಿರುವ ಆಯಿಲ್ ಇಂಡಿಯಾ ಆಸ್ಪತ್ರೆಯಲ್ಲಿ ಖಾಲಿ ಇರುವ ಪ್ಯಾರಾಮೆಡಿಕಲ್ ಲ್ಯಾಬೊರೇಟರಿ ಟೆಕ್ನಿಷಿಯನ್ (Paramedical Laboratory Technician) ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಯಾವುದೇ ದೀರ್ಘವಾದ ಆನ್‌ಲೈನ್ ಅರ್ಜಿ ಪ್ರಕ್ರಿಯೆಯಿಲ್ಲದೆ, ನೇರವಾಗಿ ಸಂದರ್ಶನದಲ್ಲಿ ಭಾಗವಹಿಸಿ ಸರ್ಕಾರಿ ಸ್ವಾಮ್ಯದ ಈ ಕಂಪನಿಯಲ್ಲಿ ನೌಕರಿ ಗಿಟ್ಟಿಸಿಕೊಳ್ಳಲು ಇದೊಂದು ಸುಸಮಯವಾಗಿದೆ.

ಕನ್ನಡ ಸುದ್ದಿ/ ನ್ಯೂಸ್/Jobs/

RWF Recruitment: ರೈಲ್ವೆ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ, ಬೆಂಗಳೂರಿನ RWF ನಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅಪ್ಲೈ ಮಾಡಿ!



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed