Dileep Raj: ದಿಲೀಪ್ ರಾಜ್ ಹೆಂಡತಿ ಕಣ್ಣೀರು! ಗಂಡನ ಫೋಟೋದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಶ್ರೀವಿದ್ಯಾ | | ACTPnews

ದಿಲೀಪ್ ರಾಜ್


Last Updated:

Dileep Raj: ಇತ್ತೀಚಿಗೆ ಹೃದಯಾಘಾತದಿಂದ ಮೃತಪಟ್ಟ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ನಿರ್ಮಾಪಕ, ನಿರ್ದೇಶಕ ದಿಲೀಪ್ ರಾಜ್ (Dilip Raj) ಅವರಿಗೆ ಜೀ ಕನ್ನಡ ವಾಹಿನಿ ‘ದಿಲೀಪ ನುಡಿ ನಮನ’ದ ಮೂಲಕ ಗೌರವ ನಮನ ಸಲ್ಲಿಸಿದ್ದಾರೆ.

ದಿಲೀಪ್ ರಾಜ್
ದಿಲೀಪ್ ರಾಜ್

ಇತ್ತೀಚಿಗೆ ಹೃದಯಾಘಾತದಿಂದ ಮೃತಪಟ್ಟ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ನಿರ್ಮಾಪಕ, ನಿರ್ದೇಶಕ ದಿಲೀಪ್ ರಾಜ್ (Dilip Raj) ಅವರಿಗೆ ಜೀ ಕನ್ನಡ ವಾಹಿನಿ ‘ದಿಲೀಪ ನುಡಿ ನಮನ’ದ ಮೂಲಕ ಗೌರವ ನಮನ ಸಲ್ಲಿಸಿದ್ದಾರೆ. ಕನ್ನಡ ಮನರಂಜನಾ ಕ್ಷೇತ್ರದಲ್ಲಿ ಬಹುಮುಖ ಪ್ರತಿಭೆಯಿಂದ ಗುರುತಿಸಿಕೊಂಡಿದ್ದ ದಿಲೀಪ್ ರಾಜ್, ಹಲವು ವರ್ಷಗಳಿಂದ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಯಶಸ್ವಿಯಾಗಿ ತಮ್ಮದೇ ಸ್ಥಾನವನ್ನು ನಿರ್ಮಿಸಿಕೊಂಡಿದ್ದರು.

ಕನ್ನಡ ಮನರಂಜನಾ ಕ್ಷೇತ್ರದಲ್ಲಿ ಬಹುಮುಖ ಪ್ರತಿಭೆಯಿಂದ ಗುರುತಿಸಿಕೊಂಡಿದ್ದ ದಿಲೀಪ್ ರಾಜ್, ಹಲವು ವರ್ಷಗಳಿಂದ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಯಶಸ್ವಿಯಾಗಿ ತಮ್ಮದೇ ಸ್ಥಾನವನ್ನು ನಿರ್ಮಿಸಿಕೊಂಡಿದ್ದರು.

ನಟನಾಗಿ, ನಿರೂಪಕರಾಗಿ ಹಾಗೂ ನಿರ್ಮಾಪಕರಾಗಿ ವಿಭಿನ್ನ ಜವಾಬ್ದಾರಿಗಳನ್ನು ನಿಭಾಯಿಸಿರುವ ಅವರು ಕನ್ನಡ ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದ್ದರು . ಇತ್ತೀಚೆಗೆ ಜೀ ಕನ್ನಡ ವಾಹಿನಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ದಿಲೀಪ್ ರಾಜ್ ಅವರ ವೃತ್ತಿಜೀವನ ಮತ್ತು ವ್ಯಕ್ತಿತ್ವವನ್ನು ನೆನಪಿಸಿಕೊಂಡ ಅನೇಕ ಕಲಾವಿದರು ಭಾವುಕರಾಗಿದ್ದಾರೆ.

ಜೀ ಕನ್ನಡ ವಾಹಿನಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ದಿಲೀಪ್ ರಾಜ್ ಅವರ ಪತ್ನಿ ಶ್ರೀವಿದ್ಯಾ ಸೇರಿದಂತೆ ಹಲವು ಧಾರಾವಾಹಿ ಕಲಾವಿದರು ಭಾಗವಹಿಸಿದ್ದರು. ಪಾರು, ಬ್ರಹ್ಮಗಂಟು ಹಾಗೂ ಕೃಷ್ಣರುಕ್ಕು ಧಾರಾವಾಹಿಗಳ ಕಲಾವಿದರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ದಿಲೀಪ್ ರಾಜ್ ಅವರೊಂದಿಗೆ ಹೊಂದಿರುವ ಆತ್ಮೀಯ ಬಾಂಧವ್ಯವನ್ನು ಹಂಚಿಕೊಂಡರು.

ಇದನ್ನೂ ಓದಿ: Actress: 1 ರೂಪಾಯಿಂದ ಸಿನಿ ಜೀವನ ಆರಂಭಿಸಿ ಮಿಂಚಿ ಮರೆಯಾದ ಖ್ಯಾತ ನಟಿ! ಯಾರಿವರು ಗೊತ್ತಾ?

ಈ ಸಂದರ್ಭದಲ್ಲಿ ನಟ ಸಿದ್ದು ಮೂಲಿಮನೆ, ಶರತ್ ಕುಮಾರ್ ಹಾಗೂ ಮೋಕ್ಷಿತಾ ಪೈ ಮಾತನಾಡಿ, ತಮ್ಮ ವೃತ್ತಿಜೀವನದಲ್ಲಿ ದಿಲೀಪ್ ರಾಜ್ ನೀಡಿದ ಬೆಂಬಲ ಮತ್ತು ಸಹಾಯವನ್ನು ಸ್ಮರಿಸಿದರು. ಜೊತೆಗೆ ತಮ್ಮ ಪ್ರೀತಿಯ ಪತಿಯನ್ನು ಕಳೆದುಕೊಂಡ ಶ್ರೀ ವಿದ್ಯಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ತನ್ನ ಪತಿ ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ ಮರುಕ ವ್ಯಕ್ತಪಡಿಸಿದ್ದಾರೆ.

ಜೊತೆಗೆ ರಿಯಾಲಿಟಿ ಶೋಗಳ ಮೂಲಕ ಜನಪ್ರಿಯತೆ ಪಡೆದ ಜಗಪ್ಪ, ಸುಶ್ಮಿತಾ, ಹುಲಿ ಕಾರ್ತಿಕ್, ರಾಘವೇಂದ್ರ ಹಾಗೂ ಮಂಜು ಪಾವಗಡ ಸೇರಿದಂತೆ ಹಲವು ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಿ ದಿಲೀಪ್ ರಾಜ್ ಅವರನ್ನು ನೆನೆದು ಭಾವುಕರಾಗಿದ್ದಾರೆ.

ದಿಲೀಪ್ ರಾಜ್ ಅವರ ಕಲಾ ಜೀವನ ಕಿರುತೆರೆಯಿಂದಲೇ ಆರಂಭವಾಯಿತು. ಕಂಬದ ಮನೆ ಧಾರಾವಾಹಿಯ ಮೂಲಕ ಅವರು ಕಿರುತೆರೆಗೆ ಕಾಲಿಟ್ಟರು. ನಂತರ ಜನನಿ, ಅರ್ಧ ಸತ್ಯ, ರಂಗೋಲಿ, ಕುಂಕುಮ ಭಾಗ್ಯ, ಮಾಂಗಲ್ಯ ಹಾಗೂ ಪ್ರೀತಿಗಾಗಿ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿ ಮನೆಮಾತಾದರು.

ಕಿರುತೆರೆಯಲ್ಲಿ ಯಶಸ್ಸು ಕಂಡ ಬಳಿಕ ದಿಲೀಪ್ ರಾಜ್ ಸಿನಿಮಾ ಕ್ಷೇತ್ರದತ್ತ ಮುಖ ಮಾಡಿದರು. 2005ರಲ್ಲಿ ಬಿಡುಗಡೆಯಾದ ಭಾಯ್ ಫ್ರೆಂಡ್ ಚಿತ್ರದ ಮೂಲಕ ಅವರು ಚಿತ್ರರಂಗ ಪ್ರವೇಶಿಸಿದರು. ನಂತರ 2007ರಲ್ಲಿ ಬಿಡುಗಡೆಯಾದ ಮಿಲನ ಸಿನಿಮಾದಲ್ಲಿ ಖಳನಾಯಕನ ಪಾತ್ರ ನಿರ್ವಹಿಸಿ ಪ್ರೇಕ್ಷಕರ ಗಮನ ಸೆಳೆದರು.

ಇದಾದ ಬಳಿಕ 7 ಓ ಕ್ಲಾಕ್, ಕ್ಷಣ ಕ್ಷಣ ಸೇರಿದಂತೆ ಹಲವು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡರು. ಇತ್ತೀಚಿನ ವರ್ಷಗಳಲ್ಲಿ ಲವ್ ಮಾಕ್ಟೇಲ್ 3 ಚಿತ್ರದ ಮೂಲಕವೂ ತಮ್ಮ ಅಭಿನಯ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

ಒಟ್ಟಾರೆಯಾಗಿ ನಟ ದಿಲೀಪ್ ರಾಜ್ ಅವರ ಸಾಧನೆಗಳು ಮುಂದಿನ ದಿನಗಳಲ್ಲಿಯೂ ಅಭಿಮಾನಿಗಳಿಗೆ ಸ್ಪೂರ್ತಿಯಾಗಿಯೇ ಉಳಿಯಲಿವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed