Karuppu OTT: ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿದ ‘ಕರುಪ್ಪು’ ಸಿನಿಮಾ ಇದೀಗ ಒಟಿಟಿಗೆ! ಯಾವಾಗ? ಎಲ್ಲಿ ಸ್ಟ್ರೀಮಿಂಗ್ ಗೊತ್ತಾ? | | ACTPnews

ಕರುಪ್ಪು


Last Updated:

ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಕರುಪ್ಪು ಚಿತ್ರದ OTT ಬಿಡುಗಡೆ ಕುರಿತು ಈಗಾಗಲೇ ಸಾಕಷ್ಟು ಚರ್ಚೆಗಳು ಆರಂಭವಾಗಿವೆ. ಸದ್ಯ ಲಭ್ಯವಿರುವ ಮಾಹಿತಿಯ ಪ್ರಕಾರ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಅಮೆಜಾನ್ ಪ್ರೈಂ ವಿಡಿಯೋ ಪಡೆದುಕೊಂಡಿದೆ ಎನ್ನಲಾಗುತ್ತಿದೆ.

ಕರುಪ್ಪು
ಕರುಪ್ಪು

ತಮಿಳು ಚಿತ್ರರಂಗದ ಸ್ಟಾರ್ ನಟ ಸೂರ್ಯ (Suriya) ಅಭಿನಯದ ಕರುಪ್ಪು (Karuppu) ಸಿನಿಮಾ ಬಿಡುಗಡೆಯಾದ ದಿನದಿಂದಲೇ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಗಳಿಸುತ್ತಿದೆ. ನಿರ್ದೇಶಕ ಆರ್ ಜೆ ಬಾಲಾಜಿ ಮತ್ತು ನಟ ಸೂರ್ಯ ಅವರ ಸಂಯೋಜನೆಯ ಸಾಮಾಜಿಕ ಸಂದೇಶಗಳನ್ನು ಒಳಗೊಂಡ ಕಥೆಯ ಮೂಲಕ ಸಿನಿಪ್ರಿಯರ ಗಮನ ಸೆಳೆದಿದೆ.

ವಿಶೇಷವಾಗಿ ಸೂರ್ಯ ಅವರ ಇತ್ತೀಚಿನ ಕೆಲವು ಸಿನಿಮಾಗಳಿಗಿಂತ ಭಿನ್ನವಾದ ಕಥಾಹಂದರ ಹಾಗೂ ಅದ್ಭುತ ಅಭಿನಯದಿಂದ ಕರುಪ್ಪು ಅವರಿಗೆ ಮತ್ತೊಮ್ಮೆ ಭರ್ಜರಿ ಕಮ್‌ಬ್ಯಾಕ್ ನೀಡಿದೆ ಎನ್ನುವ ಅಭಿಪ್ರಾಯಗಳು ಕೇಳಿಬರುತ್ತಿವೆ.

OTT ರಿಲೀಸ್ ಬಗ್ಗೆ ದೊಡ್ಡ ಅಪ್‌ಡೇಟ್

ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಕರುಪ್ಪು ಚಿತ್ರದ OTT ಬಿಡುಗಡೆ ಕುರಿತು ಈಗಾಗಲೇ ಸಾಕಷ್ಟು ಚರ್ಚೆಗಳು ಆರಂಭವಾಗಿವೆ. ಸದ್ಯ ಲಭ್ಯವಿರುವ ಮಾಹಿತಿಯ ಪ್ರಕಾರ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಅಮೆಜಾನ್ ಪ್ರೈಂ ವಿಡಿಯೋ ಪಡೆದುಕೊಂಡಿದೆ ಎನ್ನಲಾಗುತ್ತಿದೆ.

ಜೂನ್ 12ರಂದು OTTಗೆ ಎಂಟ್ರಿ?

ಚಿತ್ರರಂಗದ ವಲಯಗಳಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ ಕರುಪ್ಪು ಸಿನಿಮಾ ಜೂನ್ 12ರಂದು OTT ವೇದಿಕೆಗೆ ಬರಬಹುದು ಎನ್ನುವ ಮಾತುಗಳು ಕೇಳಿಬರುತ್ತಿವೆ. ಇತ್ತೀಚಿನ ದಿನಗಳಲ್ಲಿ ದೊಡ್ಡ ಸಿನಿಮಾಗಳು ಬಿಡುಗಡೆಯಾದ ಕೆಲವೇ ವಾರಗಳಲ್ಲಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಕರುಪ್ಪು ಕೂಡ ಅದೇ ಹಾದಿ ಅನುಸರಿಸುವ ಸಾಧ್ಯತೆ ಇದೆ.

ಚಿತ್ರದಲ್ಲಿ ಸೂರ್ಯ ಜೊತೆ ತ್ರಿಷಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಆರ್ ಜೆ ಬಾಲಾಜಿ, ನಟರಾಜ್, ಇಂದ್ರನ್ಸ್, ಸ್ವಾಸಿಕಾ, ಯೋಗಿ ಬಾಬು, ಮನ್ಸೂರ್ ಅಲಿ ಖಾನ್, ಜಾರ್ಜ್ ಮರಿಯನ್ ಹಾಗೂ ಆಡುಗಲಂ ನರೇನ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕರುಪ್ಪು ಚಿತ್ರದ ಕಥೆ ಏನು?

ಈ ಚಿತ್ರವು ನಟ ಸೂರ್ಯಗೆ ಮತ್ತೆ ಕಮ್ ಬ್ಯಾಕ್ ಸಿನಿಮಾ ಆಗಲಿದೆ ಎಂದು ಅನೇಕ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ‘ಕರುಪ್ಪು’ ಚಿತ್ರದ ಕಥೆಯ ಬಗ್ಗೆ ಹೇಳುವುದಾದರೆ, ಸೂರ್ಯ ಹಾಗೂ ವಕೀಲ ಬೇಬಿ ಕಣ್ಣನ್ ಪಾತ್ರವನ್ನು ನಿರ್ವಹಿಸುವ ಆರ್.ಜೆ ಬಾಲಾಜಿ ನಡುವಿನ ಹೋರಾಟವಾಗಿದೆ. ಭ್ರಷ್ಟ ಆರ್ ಜೆ ಬಾಲಾಜಿ ಕೈಯಲ್ಲಿ ಜಿಲ್ಲಾ ಕ್ರಿಮಿನಲ್ ಕೋರ್ಟ್ ಇರುತ್ತದೆ .

ಈ ವೇಳೆ ಕುರುಪ್ಪಸ್ವಾಮಿ ಅವತಾರದಲ್ಲಿರುವ ಸೂರ್ಯ ನ್ಯಾಯಾಲಯದಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ಹೋರಾಡುತ್ತಾನೆ. ನ್ಯಾಯಾಲಯದಲ್ಲಿ ನ್ಯಾಯವನ್ನು ಸ್ಥಾಪಿಸುವ ಈ ಹೋರಾಟದಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಕಥೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed