Ajai Rao: ಪಾರ್ಟ್ನರ್ ಸಿನಿಮಾದ ಹಾಡು ರಿಲೀಸ್, ಹೀರೋಯಿನ್ ಬಗ್ಗೆ ಅಜಯ್ ರಾವ್ ಏನಂದ್ರು? | | ACTPnews

Ajai Rao Brinda Acharya Shiva Tejas Partner Kannada movie latest updates


ಬೃಂದಾ ಸಿನಿಮಾ ಪ್ರೀತಿ

ಬೃಂದಾ ಆಚಾರ್ಯ ಸಿನಿಮಾ ಪ್ರೀತಿ ಸುಮ್ನೆ ಅಲ್ಲ. ಇದು ದೊಡ್ಡಮಟ್ಟದಲ್ಲಿಯೇ ಇದೆ. ಸಿನಿಮಾದಲ್ಲಿ ಏನಾದರು ಮಾಡ್ಬೇಕು. ಸಿನಿಮಾರಂಗಕ್ಕೆ ಏನಾದರು ಕೊಡ್ಬೇಕು.

ಈ ರೀತಿನೇ ಯೋಚನೆ ಮಾಡುವ ಬೃಂದಾ ಆಚಾರ್ಯ ಸದಾ ಸಿನಿಮಾ ಧ್ಯಾನಿಸುತ್ತಾರೆ. ಇವರ ಈ ಸಿನಿಮಾ ಪ್ರೀತಿ ಕಂಡು ಬೆರಗಾಗಿದ್ದೇನೆ. ಇವರ ಅಪ್ಪಟ ಅಭಿಮಾನಿ ಆಗಿದ್ದೇನೆ ಅಂತ ಅಜಯ್ ರಾವ್ ಹೇಳಿದ್ದಾರೆ.

ಕೃಷ್ಣ ಅಜಯ್ ರಾವ್ ಹಿಂಗ್ಯಾಕ್ ಹೇಳಿದ್ರು?

(ಚಿತ್ರ ಕೃಪೆ: ಅಜಯ್ ರಾವ್ ಇನ್​ಸ್ಟಾಗ್ರಾಮ್)

ಬೃಂದಾ ಆಚಾರ್ಯ

ಕೃಷ್ಣ ಅಜಯ್ ರಾವ್ ಅವರ ಮನದ ಮಾತುಗಳನ್ನ ಬೃಂದಾ ಆಚಾರ್ಯ ಕೇಳ್ತಾನೇ ಇದ್ದರು. ಅಷ್ಟೆ ಧನ್ಯತಾ ಭಾವದಲ್ಲಿಯೇ ಕುಳಿತಿದ್ದರು. ಕೃಷ್ಣ ಅಜಯ್ ರಾವ್ ಮಾತುಗಳಿಗೆ ಧನ್ಯವಾದ ಕೂಡ ಹೇಳಿದರು.

ಪಾರ್ಟ್ನರ್ ಸಿನಿಮಾ

ಈ ಚಿತ್ರವನ್ನ ಶಿವತೇಜಸ್ ಡೈರೆಕ್ಷನ್ ಮಾಡಿದ್ದಾರೆ. ಈ ಹಿಂದೆ ಇವರು ಮಳೆ ಚಿತ್ರ ಮಾಡಿದ್ದರು. ಧೈರ್ಯಂ, ದಿಲ್ ಪಸಂದ್ ಚಿತ್ರವನ್ನ ಮಾಡಿದ್ದಾರೆ.

ಈ ಚಿತ್ರದಲ್ಲಿ Gen Z ಗಳ ಪ್ರೀತಿ , ಪ್ರೇಮ, ಸಂಬಂಧಗಳ ನಂಬಿಕೆಯನ್ನ ಇವರು ಹೇಳ್ತಾ ಇದ್ದಾರೆ. ಆದರೆ, ಇದರಲ್ಲಿ ರೋಮ್ಯಾಂಟಿಕ್ ಕಥೆನೂ ಇದೆ

Ajai Rao Brinda Acharya Shiva Tejas Partner Kannada movie latest updates

“ನಾನು ನಾಯಕಿ ಬೃಂದಾ ಆಚಾರ್ಯ ಫ್ಯಾನ್‌”

(ಚಿತ್ರ ಕೃಪೆ: ಅಜಯ್ ರಾವ್ ಇನ್​ಸ್ಟಾಗ್ರಾಮ್)

ಅಮೋರಾ ಹಾಡು ವೈರಲ್

ಈ ಚಿತ್ರದ ಅಮೋರಾ ಹಾಡು ವೈರಲ್ ಆಗಿದೆ. ಈ ಒಂದು ಹಾಡಿನಲ್ಲಿ ಬೃಂದಾ ಆಚಾರ್ಯ ಹಾಗೂ ಅಜಯ್ ರಾವ್ ಸಖತ್ ಆಗಿಯೇ ಡ್ಯಾನ್ಸ್ ಮಾಡಿದ್ದಾರೆ. ಇದು ಎಲ್ಲರ ದಿಲ್ ಕದ್ದು ಬಿಟ್ಟಿದೆ.

ಈ ಹಾಡಿನ ಬಳಿಕ ಈಗ ಲವಲವಿಕೆ ಹಾಡು ರಿಲೀಸ್ ಆಗಿದೆ. ಇದು ಕೂಡ ಇಂಟ್ರಸ್ಟಿಂಗ್ ಆಗಿದೆ. ಇನ್ನೂ ಒಂದು ವಿಷಯ ಅಂದ್ರೆ, ಈ ಹಾಡಿಗೆ ಕೃಷ್ಣ ಅಜಯ್ ರಾವ್ ಹಾಗೂ ಬೃಂದಾ ಆಚಾರ್ಯ ಸ್ಟೇಜ್ ಮೇಲೆ ಡ್ಯಾನ್ಸ್ ಕೂಡ ಮಾಡಿದ್ದಾರೆ.

ಪಾರ್ಟ್ನರ್ ಚಿತ್ರ ಯಾವಾಗ

ಪಾರ್ಟ್ನರ್ ಚಿತ್ರದ ರಿಲೀಸ್ ಡೇಟ್ ಇನ್ನು ಅನೌನ್ಸ್ ಆಗಿಲ್ಲ. ಆದರೆ, ಸಿನಿಮಾ ಪ್ರಮೋಷನ್ ನಡೀತಾನೆ ಇದೆ. ಮೊದಲು ಚಿತ್ರದ ಟೈಟಲ್ ರಿಲೀಸ್ ಮಾಡಿದರು.

ಈ ಟೈಟಲ್ ಎಲ್ಲರ ಗಮನ ಸೆಳೆದಿದೆ. ಇದಾದ್ಮೇಲೆ ಸಿನಿಮಾದ ಅಮೋರಾ ಸಾಂಗ್ ರಿಲೀಸ್ ಆಯಿತು. ಇದು ಜನರ ದಿಲ್ ಕದ್ದೇ ಬಿಡ್ತು. ಇದೀಗ ಲವಲವಿಕೆ ಹಾಡು ಮೋಡಿ ಮಾಡುವ ಹಾಗೇನೆ ಇದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *