Last Updated:
ಈ ಪ್ರಕರಣದ ಸಹ-ಆರೋಪಿಯಾಗಿರುವ ಅಭಿಷೇಕ್ ಸ್ನೇಹಿತ ಇನ್ನೂ ತಲೆಮರೆಸಿಕೊಂಡಿದ್ದಾನೆ. ಅಭಿಷೇಕ್ ಮತ್ತು ಸ್ನೇಹಿತ ಇಬ್ಬರೂ ಸೇರಿ ಸಂತ್ರಸ್ತೆಯ ಖಾಸಗಿ ಫೋಟೋಗಳನ್ನು ಹರಿಬಿಡುವ ಬೆದರಿಕೆ ಹಾಕಿರುವುದರಿಂದ ಪೊಲೀಸರು ಆತನ ಬಂಧನವಾಗುವವರೆಗೂ ಅಭಿಷೇಕ್ಗೆ ಜಾಮೀನು ನೀಡಬಾರದೆಂದು ವಾದಿಸಿದ್ದಾರೆ.
ಕೋಲ್ಕತ್ತಾ: ಪಶ್ಚಿಮ ಬಂಗಾಳ ಮತ್ತು ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವ ಕ್ರಿಕೆಟಿಗ ಅಭಿಷೇಕ್ ಪೊರೆಲ್ ವಿರುದ್ಧದ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಕೊಲ್ಕತ್ತಾ ಹೈಕೋರ್ಟ್ ಸೆಪ್ಟೆಂಬರ್ 14ಕ್ಕೆ ಮುಂದೂಡಿದೆ. ಪ್ರಕರಣದ ಸಹ-ಆರೋಪಿಯಾಗಿರುವ ಪೊರೆಲ್ ಸ್ನೇಹಿತ ಇನ್ನೂ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಮತ್ತು ಹೆಚ್ಚಿನ ತನಿಖೆಗಾಗಿ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಪೊಲೀಸರು ಸಮಯ ಕೇಳಿದ ಹಿನ್ನೆಲೆಯಲ್ಲಿ ಕೋರ್ಟ್ ಪ್ರಕರಣವನ್ನ ಮುಂದಿನ ತಿಂಗಳಿಗೆ ಮುಂದೂಡಿದೆ. ಅಲ್ಲಿಯವರೆಗೆ ಅಭಿಷೇಕ್ ಪೊರೆಲ್ ನ್ಯಾಯಾಂಗ ಬಂಧನಕ್ಕೆ ಒಳಗಾಗುವ ಸಾಧ್ಯತೆ ಇದೆ.














