ಗಜಪಡೆ ರಕ್ಷಣೆಗೆ ವಂತಾರಾ ಬೃಹತ್ ಹೆಜ್ಜೆ! ಭಾರತ ದಾಟಿ ಜಗತ್ತಿನಾದ್ಯಂತ ವಿಸ್ತರಿಸಿದ ಅನಂತ್ ಅಂಬಾನಿಯವರ ಆನೆಗಳ ಸಂರಕ್ಷಣಾ ಕಾರ್ಯ | ಲೈಫ್‌ಸ್ಟೈಲ್ | ACTPnews

ವಂತಾರದಲ್ಲಿ ಸಂರಕ್ಷಿತ ಆನೆಗಳ  ಜೊತೆ ಅನಂತ್ ಅಂಬಾನಿ


Last Updated:

ಸ್ತುತ 260ಕ್ಕೂ ಹೆಚ್ಚು ಏಷ್ಯನ್ ಆನೆಗಳಿಗೆ ಆಶ್ರಯ ತಾಣವಾಗಿರುವ ವಂತಾರಾ, ಆನೆಗಳ ಕಲ್ಯಾಣ ಮತ್ತು ಆರೈಕೆಯಲ್ಲಿ ಜಗತ್ತಿನ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ವಂತಾರಾದ ಯಶೋಗಾಥೆಯಲ್ಲಿ ಆನೆಗಳಿಗೆ ವಿಶೇಷ ಸ್ಥಾನವಿದೆ.

ವಂತಾರದಲ್ಲಿ ಸಂರಕ್ಷಿತ ಆನೆಗಳ  ಜೊತೆ ಅನಂತ್ ಅಂಬಾನಿ
ವಂತಾರದಲ್ಲಿ ಸಂರಕ್ಷಿತ ಆನೆಗಳ ಜೊತೆ ಅನಂತ್ ಅಂಬಾನಿ

ಜಾಮ್‌ನಗರ (ಗುಜರಾತ್): ಅನಂತ್ ಅಂಬಾನಿ ಅವರಿಂದ ಸ್ಥಾಪಿಸಲ್ಪಟ್ಟ ‘ವಂತಾರಾ’ ಸಂಸ್ಥೆಯು ಇಂದು ವಿಶ್ವ ಆನೆಗಳ ದಿನವನ್ನು (World Elephant Day) ಅರ್ಥಪೂರ್ಣವಾಗಿ ಆಚರಿಸಿದೆ. ಭಾರತ ಹಾಗೂ ಜಗತ್ತಿನಾದ್ಯಂತ ಆನೆಗಳ ಸಂರಕ್ಷಣೆ ಮತ್ತು ಕಲ್ಯಾಣವನ್ನು ಬಲಪಡಿಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸಿರುವ ಸಂಸ್ಥೆಯು, ಗಜರಾಜನ ಯೋಗಕ್ಷೇಮ, ಸಂರಕ್ಷಣಾ ಶಿಕ್ಷಣ ಮತ್ತು ಅಂತರರಾಷ್ಟ್ರೀಯ ಸಹಯೋಗದ ಕ್ಷೇತ್ರಗಳಲ್ಲಿ ತಾನು ಮಾಡುತ್ತಿರುವ ನಿರಂತರ ಕಾರ್ಯಗಳನ್ನು ಈ ಸಂದರ್ಭದಲ್ಲಿ ಎತ್ತಿ ತೋರಿಸಿದೆ. ಪ್ರಸ್ತುತ 260ಕ್ಕೂ ಹೆಚ್ಚು ಏಷ್ಯನ್ ಆನೆಗಳಿಗೆ ಆಶ್ರಯ ತಾಣವಾಗಿರುವ ವಂತಾರಾ, ಆನೆಗಳ ಕಲ್ಯಾಣ ಮತ್ತು ಆರೈಕೆಯಲ್ಲಿ ಜಗತ್ತಿನ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ವಂತಾರಾದ ಯಶೋಗಾಥೆಯಲ್ಲಿ ಆನೆಗಳಿಗೆ ವಿಶೇಷ ಸ್ಥಾನವಿದೆ. ಸಂಕಷ್ಟದಿಂದ ರಕ್ಷಿಸಲ್ಪಟ್ಟ ಪ್ರಾಣಿಗಳಿಗೆ ವಿಶೇಷ ಕಾಳಜಿ ಮತ್ತು ಗೌರವಯುತ ಜೀವನವನ್ನು ಒದಗಿಸುವ ಸಂಸ್ಥೆಯ ವಿಶಾಲ ಸಂಕಲ್ಪಕ್ಕೆ ಇದು ಸಾಕ್ಷಿಯಾಗಿದೆ. ಅನಂತ್ ಅಂಬಾನಿ ಅವರು ಮೊದಲ ಬಾರಿಗೆ ರಕ್ಷಿಸಿದ ‘ಗೌರಿ’ ಎಂಬ ಆನೆಯೇ, ಇಂದು ಬೃಹತ್ ಮಟ್ಟದಲ್ಲಿ ಬೆಳೆದು ನಿಂತಿರುವ ‘ವಂತಾರಾ’ ಸಾಮ್ರಾಜ್ಯದ ಆರಂಭಿಕ ಹೆಜ್ಜೆಯಾಗಿತ್ತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed