Shocking News: ಇನ್ಮೇಲೆ ಬೆಂಗಳೂರು ಓಡಾಟ ತುಟ್ಟಿ; 39% ಹೆಚ್ಚಾಗಲಿದೆಯೇ ಆಟೋ ಪ್ರಯಾಣದ ದರ? ರಾಜಧಾನಿಗೆ ʼಗ್ಯಾಸ್‌ʼ ಟ್ರಬಲ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಆಟೋ ಪ್ರಯಾಣ


Last Updated:

ಬೆಂಗಳೂರು ಆಟೋ ಚಾಲಕರು ಎಲ್‌ಪಿಜಿ ದರ 95 ರೂಪಾಯಿಗೆ ಏರಿಕೆಯಿಂದ ಕನಿಷ್ಠ ಮೀಟರ್ ದರವನ್ನು 36ರಿಂದ 50ಕ್ಕೆ, ಪ್ರತಿ ಕಿಲೋಮೀಟರ್ ದರವನ್ನು 18ರಿಂದ 25ಕ್ಕೆ ಹೆಚ್ಚಿಸಲು ಮನವಿ, ಸಾರ್ವಜನಿಕ ಪ್ರತಿಕ್ರಿಯೆ ಮಿಶ್ರವಾಗಿದೆ

ಆಟೋ ಪ್ರಯಾಣ
ಆಟೋ ಪ್ರಯಾಣ

ಬೆಂಗಳೂರು: ರಾಜಧಾನಿ ಬೆಂಗಳೂರು ಅನ್ನೋದು ದುಬಾರಿ (Expensive) ಆಗಿ ತುಂಬಾ ಕಾಲ ಆಯ್ತು, ಆದ್ರೆ ಈಗಲೂ ಕೂಡ ತಾಪತ್ರಯದ ವಿಷಯ ಏನೆಂದರೆ ಆಟೋ ಓಡಾಟ; ಅದ್ಯಾವ ಪಾಟಿ ಚೌಕಾಶಿ (Bargain) ಮಾಡಿ ನಾವು ಆಟೋ ಚಾಲಕರ ಜೊತೆ ರಚ್ಚೆ ಹಿಡಿದು ಕಮ್ಮಿ ಮಾಡಸ್ತೀವಿ ಅನ್ನೋದು ನಿತ್ಯದ ವಿಚಾರ, ಆದರೆ ಇದು ಸ್ವಲ್ಪ ಸುಸ್ತಾಗೋ ವಿಷಯ! ಹೌದು, ಬೆಂಗಳೂರು ಸುತ್ತೋಕೆ ಆಟೋ ಹತ್ತಿದ್ರೆ ಜೇಬು ಖಾಲಿ ಖಾಲಿ ಆಗೋದು ಖಂಡಿತ ಅನ್ನೋ ದಿನಮಾನ ಹತ್ತಿರವಾಗಿದೆ.

ಆಟೋ ಚಾಲಕರ ಮನವಿ ಏನು?

ಯುದ್ಧದ ಕಾರಣದಿಂದ ಸಿಲಿಂಡರ್‌ ಬೆಲೆ ತುಂಬಾ ಹೆಚ್ಚಳವಾಗಿದ್ದು ಈ ಗ್ಯಾಸ್‌ ಬಿಸಿ ಚುರುಕಾಗಿಯೇ ಆಟೋ ಡ್ರೈವರ್‌ಗಳ ಕೈ ಸುಟ್ಟಿದ್ದು 95 ರೂಪಾಯಿಗೆ ಏರಿದೆ, ಅದಕ್ಕೆ ಆಟೋ ಚಾಲಕರ ಸಂಘ ಜಿಲ್ಲಾಧಿಕಾರಿಗಳಿಗೆ ಏನೆಂದು ಮನವಿ ಮಾಡಿದೆ ಗೊತ್ತಾ? ಆಟೋ ಚಾಲಕರು ಪ್ರತೀ ಕಿಲೋಮೀಟರ್‌ ಮೇಲೆ 25 ರೂಪಾಯಿ ಹೆಚ್ಚಳ ಹಾಗೂ ಕನಿಷ್ಠ ಪ್ರಯಾಣದರವನ್ನು 36 ರಿಂದ 50 ಕ್ಕೆ ಹೆಚ್ಚಿಸಲು ಬೇಡಿಕೆ ಸಲ್ಲಿಸಿದೆ.

ಮೊದಲಿದ್ದ ಬೆಲೆ ಎಷ್ಟು?

ಈಗಾಗಲೇ ಕನಿಷ್ಠ ಮೀಟರ್‌ ದರ 36 ರೂ. ನಿಗದಿಯಾಗಿದ್ದು, ಪ್ರತಿ ಹೆಚ್ಚುವರಿ ಕಿಲೋಮೀಟರ್‌ಗೆ 18 ರೂ. ನಿಗದಿಪಡಿಸಲಾಗಿದೆ. ಎಲ್‌ಪಿಜಿ ದರ ಏರಿಕೆ ಹೊರೆ ತಪ್ಪಿಸಲು ಕನಿಷ್ಠ ದರವನ್ನು 50 ರೂ., ಪ್ರತಿ ಕಿಲೋಮೀಟರ್‌ಗೆ ಹೆಚ್ಚುವರಿ ದರವನ್ನು 25 ರೂ. ಹೆಚ್ಚಿಸುವಂತೆ ಆಟೋ ಚಾಲಕರ ಸಂಘಟನೆಗಳು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿವೆ.

ಇರಾನ್‌ ಯುದ್ಧ, ಆಟೋ ಚಾಲಕರ ಬದುಕಿಗೆ ಕೊಳ್ಳಿ!

ಮಧ್ಯಪ್ರಾಚ್ಯ ದೇಶಗಳ ಯುದ್ಧ ಭಾರತದ ಆಟೋ ಚಾಲಕರ ಬದುಕಿಗೇ ಬೆಂಕಿ ಹಚ್ಚಿದೆ! ಯುದ್ಧ ಆರಂಭಕ್ಕೂ ಮೊದಲು ಪ್ರತಿ ಲೀಟರ್‌ಗೆ ₹56 ಇದ್ದ ಆಟೋ ಎಲ್‌ಪಿಜಿ ದರ ಈಗ ₹90 ರಿಂದ ₹95ಕ್ಕೆ ಆಕಾಶ ಮುಟ್ಟಿದೆ. ಇದರಿಂದ ಈಗಾಗಲೇ ತತ್ತರಿಸಿರುವ ಆಟೋ ಚಾಲಕರ ಜೀವನ ದುಸ್ತರವಾಗಿದ್ದು, ಎಲ್‌ಪಿಜಿ ಅಭಾವದ ಸಂದರ್ಭದಲ್ಲಿ ಕೆಲದಿನ ಕೆಲಸವನ್ನೇ ನಿಲ್ಲಿಸಬೇಕಾದ ಅಸಹಾಯಕ ಸ್ಥಿತಿ ಎದುರಾಗಿತ್ತು ಎಂದು ಚಾಲಕರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
ಬೇರೆ ಆಯ್ಕೆಯಿಲ್ಲ ಅಂತಿದೆ ಯೂನಿಯನ್!

ಈ ದರ ಏರಿಕೆಯ ಹೊಡೆತ ಎಷ್ಟು ತೀವ್ರ ಎಂದರೆ ಎಲ್‌ಪಿಜಿ ಕೊರತೆಯ ಸಂದರ್ಭದಲ್ಲಿ ಚಾಲಕರು ಗಂಟೆಗಟ್ಟಲೇ ಕ್ಯೂನಲ್ಲಿ ಕಾಯಬೇಕಾದ ಸ್ಥಿತಿ ತಲೆದೋರಿತ್ತು. ಈಗ ಸರಬರಾಜು ಸ್ವಲ್ಪ ಸುಧಾರಿಸಿದರೂ ದರ ಏರಿಕೆಯಿಂದ ಸಂಪಾದನೆಗೆ ದೊಡ್ಡ ಹೊಡೆತ ಬಿದ್ದಿದೆ. ಈ ಹೊರೆ ಸರಿದೂಗಿಸಲು ಕನಿಷ್ಠ ಮೀಟರ್ ದರ ಪರಿಷ್ಕರಿಸಬೇಕು ಎಂದು ಸಂಘಟನೆಗಳು ಜೋರಾಗಿ ಆಗ್ರಹಿಸಿವೆ. ಅಖಿಲ ಭಾರತ ವಾಹನ ಚಾಲಕರ ಟ್ರೇಡ್ ಯೂನಿಯನ್ ಅಧ್ಯಕ್ಷ ಗಂಡಸಿ ಸದಾನಂದಸ್ವಾಮಿ ಸ್ಪಷ್ಟವಾಗಿ “ಗ್ರಾಹಕರಿಗೆ ಹೊರೆಯಾಗುತ್ತದೆ ಎಂಬ ಅರಿವಿದೆ, ಆದರೆ ಮೀಟರ್ ದರ ಹೆಚ್ಚಳ ಮಾಡದೆ ಚಾಲಕರಿಗೆ ಬೇರೆ ಆಯ್ಕೆಗಳಿಲ್ಲ.” ಎನ್ನುತ್ತಾರೆ.

ಸಾರ್ವಜನಿಕರ ಪ್ರತಿಕ್ರಿಯೆ ಏನು?

ಇದನ್ನೂ ಓದಿ: Feel The Jail Experience: ಬನ್ನಿ ಜೈಲಿಗೆ ಹೋಗಿ ಬರೋಣಾ! ಜೈಲೂಟ ತಿನ್ನಿ, ಸೆಲ್​ನಲ್ಲಿ ಮಲಗಿ; ದಿನಕ್ಕೆ ಜಸ್ಟ್​​ ₹500 ಅಷ್ಟೇ!

ಸಾರ್ವಜನಿಕರ ಪ್ರತಿಕ್ರಿಯೆ ಮಾತ್ರ ಮಿಶ್ರವಾಗಿದೆ. ಒಂದು ಕಡೆ ದರ ಏರಿಕೆಯ ಹೊರೆ ಸ್ವಲ್ಪ ಇಳಿಸಿಕೊಳ್ಳಲು ಸ್ವಲ್ಪಮಟ್ಟಿಗೆ ದರ ಹೆಚ್ಚಳ ಸರಿ ಎಂದು ಕೆಲವರು ಒಪ್ಪಿಕೊಳ್ಳುತ್ತಾರೆ. ಮತ್ತೊಂದು ಕಡೆ, ಆ್ಯಪ್ ಆಧಾರಿತ ಸೇವೆಗಳಲ್ಲಿ ಈಗಾಗಲೇ ಹೆಚ್ಚಿನ ದರ ಇರುವುದು, ಜೊತೆಗೆ ಬಹುತೇಕ ಆಟೋ ಚಾಲಕರು ಮೀಟರ್ ದರಕ್ಕಿಂತ ಹೆಚ್ಚಿನ ಹಣ ಈಗಾಗಲೇ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಮತ್ತೊಂದು ದರ ಏರಿಕೆ ಸರಿಯಲ್ಲ ಎಂದು ಕೆಲವರು ತೀಕ್ಷ್ಣವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports