Last Updated:
ರಾಮಾಯಣ ಚಿತ್ರದ ಡೈರೆಕ್ಟರ್ ನಿತೇಶ್ ತಿವಾರಿ ಒಂದಷ್ಟು ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ಇಡೀ ರಾಮಾಯಣ ಚಿತ್ರದಲ್ಲಿ ಅದೆಷ್ಟು ವಿಶೇಷತೆಗಳು ಇವೆ ಅನ್ನೋದನ್ನು ಹೇಳಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ಡೈರೆಕ್ಟರ್ ನಿತೇಶ್ ತಿವಾರಿ (Nitesh Tiwari) ಒಂದು ಒಳ್ಳೆ ಮಾತು ಹೇಳಿದ್ದಾರೆ. ರಾಮಾಯಣವನ್ನ (Ramayana) ನಾವು ಆಯ್ಕೆ ಮಾಡೋದಲ್ಲ. ರಾಮಾಯಣವೇ ನಮ್ಮನ್ನ ಆಯ್ಕೆ ಮಾಡಿಕೊಳ್ಳುತ್ತದೆ. ಹಾಗೆ ಈ ರಾಮಾಯಣದ ಕತೆ ನನ್ನ ಆಯ್ಕೆ ಮಾಡಿಕೊಂಡಿದೆ. ಇದು ನಿಜಕ್ಕೂ ನನ್ನ ಅದೃಷ್ಟವೇ ಆಗಿದೆ. ಈ ಚಿತ್ರದ ಪಯಣ ಚಿಕ್ಕದೇನೂ ಇಲ್ಲ. ಸುದೀರ್ಘವಾಗಿಯೇ ಇದೆ. ಈ ಒಂದು ಪಯಣದಲ್ಲಿ ರಾಮನ (Rama) ಕುರಿತು ಸಾಕಷ್ಟು ತಿಳಿದುಕೊಂಡಿದ್ದೇನೆ. ರಾಮಾಯಣ ಕಾಲ್ಪನಿಕ ಕತೆ ಅಲ್ಲ. ಇದು ಈ ಹಿಂದೆ ಘಟಿಸಿತ್ತು. ಅದನ್ನೆ ನಾನು ನನ್ನ ರೀತಿಯಲ್ಲಿ ಬರೆಯುತ್ತಿದ್ದೇನೆ ಅಂತ ವಾಲ್ಮಿಕಿ (Valmiki) ಹೇಳಿದ್ದಾರೆ. ಇದೇ ರಾಮಾಯಣವನ್ನ ನಾವು ಇನ್ನಷ್ಟು ಪರಿಣಾಮಕಾರಿ ಆಗಿಯೇ ತೋರಿಸುತ್ತಿದ್ದೇವೆ ಅಂತಲೇ ಈ ರಾಮಾಯಣ ಚಿತ್ರದ ಡೈರೆಕ್ಟರ್ ನಿತೇಶ್ ತಿವಾರಿ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
10 ವರ್ಷದಿಂದಲೂ ಕೆಲಸ
ಅದರ ಕಲ್ಪನೆಯ ಒಂದು ಸಣ್ಣ ತುಣಕು ನಿಮಗೆ ಈಗಾಗಲೇ ಚಿತ್ರದ ಟ್ರೈಲರ್ ಅಲ್ಲಿಯೇ ಸಿಕ್ಕಿದೆ. ಹಾಗೆ ಈ ಒಂದು ರಾಮಾಯಣದಲ್ಲಿ ಈ ರೀತಿಯ ಸುಮಾರು ವಿಚಾರಗಳು ಇವೆ.
ರಾಮಾಯಣ ವಾಲೀ ಹಾಗೂ ಸುಗ್ರೀವ ಹೇಗೆ ಕಾಣಿಸುತ್ತಾರೆ. ಇದರ ಕಲ್ಪನೆ ಕೂಡ ಒಂದಷ್ಟು ಇದೆ. ಆದರೆ, ಈ ರಾಮಾಯಣದಲ್ಲಿ ಅವರನ್ನ ತುಂಬಾನೆ ವಿಭಿನ್ನವಾಗಿಯೇ ತೋರಿಸಿದ್ದೇವೆ.
ರಾಮಾಯಣ ಚಿತ್ರದ ಪಯಣ ಸುಮ್ನೆ ಏನೂ ಅಲ್ಲ. ಇದರ ಪಯಣ ಸುದೀರ್ಘವಾಗಿಯೇ ಇದೆ. ರಾಮಾಯಣವನ್ನ ನಾವು ಆಯ್ಕೆ ಮಾಡೋದಲ್ಲ. ರಾಮಾಯಣವೇ ನಮ್ಮನ್ನ ಆಯ್ಕೆ ಮಾಡಿಕೊಳ್ಳುತ್ತದೆ.
ಹಾಗೆ ಈ ವಿಚಾರದಲ್ಲಿ ನಾನು ಅದೃಷ್ಟವಂತನೇ ಆಗಿದ್ದೇನೆ. ರಾಮಾಯಣ ಕಾಲ್ಪನಿಕ ಕತೆ ಅಲ್ವೇ ಅಲ್ಲ. ಇದು ಘಟಿಸಿತ್ತು ಅಂತ ವಾಲ್ಮೀಕಿ ಬರೆದಿದ್ದಾರೆ. ಈ ರಾಮಾಯಾಣವನ್ನ ನಾನು ಬರೆದಿದ್ದೇನೆ. ಆದರೆ, ಇದು ಈ ಹಿಂದೆ ನಡೆದಿತ್ತು ಅನ್ನೋದನ್ನು ಹೇಳಿದ್ದಾರೆ ಅನ್ನೋದುನ್ನ ನಿತೇಶ್ ತಿವಾರಿ ಇಲ್ಲಿ ಹೇಳಿಕೊಂಡಿದ್ದಾರೆ.
ರಾಮ-ಸೀತೆಯನ್ನ ಕಂಡೆ
ನಮ್ಮ ಚಿತ್ರದ ರಣಬೀರ್ ಕಪೂರ್ ಅವರ ಕಣ್ಣಲ್ಲಿ ಆ ಪ್ರಾಮಾಣಿಕತೆ ಕಂಡಿದ್ದೇನೆ. ಸಾಯಿ ಪಲ್ಲವಿಯಲ್ಲೂ ಅದನ್ನೆ ಕಂಡಿದ್ದೇನೆ. ಇವರನ್ನ ನಾನು ರಾಮ ಮತ್ತು ಸೀತೆಯಾಗಿಯೇ ನೋಡುತ್ತೇನೆ.
ರಾಮಾಯಣ ಚಿತ್ರಕ್ಕಾಗಿಯೇ ನಿರ್ಮಾಪಕ ನಿಮಿತ್ ಮಲ್ಹೋತ್ರಾ ಹಾಗೂ ನಿತೇಶ್ ತಿವಾರಿ ಅವರು ಕಳೆದ 10 ವರ್ಷದಿಂದಲೂ ಕೆಲಸ ಮಾಡುತ್ತಿದ್ದಾರೆ.
ಆದರೆ, ನನಗೆ ಇದು ಕೇವಲ 3 ವರ್ಷದ ಪಯಣ ಅಂತ ಸಾಯಿ ಪಲ್ಲವಿ ಹೇಳಿದ್ದಾರೆ. ಹಿಂದಿ ಭಾಷೆಯಲ್ಲಿಯೇ ಮಾತನಾಡೋಕೆ ಪ್ರಯತ್ನ ಮಾಡಿದ ಸಾಯಿ ಪಲ್ಲವಿ, ಪ್ರತಿ ದಿನವೂ ತಾಯಿ ಸೀತೆಯನ್ನ ಸ್ಮರಿಸುತ್ತಲೇ ಇದ್ದೆ. ಹಾಗೆ ಪರಿಶುದ್ಧ ಮನಸ್ಸಿನಿಂದಲೇ ಈ ಪಾತ್ರ ಮಾಡಿದ್ದೇನೆ ಅಂತಲೂ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka














