Last Updated:
ಮೆಗಾ ಸ್ಟಾರ್ ಚಿರಂಜೀವಿ ಒಂದು ಮೆಗಾ ಮಾತು ಹೇಳಿದ್ದಾರೆ. ಇದನ್ನ ಕೇಳಿದ ಶಿವಣ್ಣನ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಚಿರಂಜೀವಿ ಮಾತನಾಡಿರೋ ವಿಡಿಯೋ ತುಣುಕನ್ನ ಎಲ್ಲೆಡೆ ಹಂಚಿಕೊಂಡು ಸಂತೋಷ ಪಡುತ್ತಿದ್ದಾರೆ. ಅಸಲಿಗೆ ಚಿರಂಜೀವಿ ಹೇಳಿದ್ದೇನು ಅನ್ನೋದು ಇಲ್ಲಿದೆ ಓದಿ.
ಮೆಗಾ ಸ್ಟಾರ್ ಚಿರಂಜೀವಿ (Chiranjeevi) ಒಂದು ಮಾತು ಹೇಳಿದ್ದಾರೆ. ಇವರ ಮಾತುಗಳ ವಿಡಿಯೋವನ್ನ ಶಿವಣ್ಣನ ಫ್ಯಾನ್ಸ್ ನೋಡಿ ಖುಷಿಪಟ್ಟಿದ್ದಾರೆ. ಅದನ್ನ ಶೇರ್ ಕೂಡ ಮಾಡಿಕೊಳ್ಳುತ್ತಿದ್ದಾರೆ. ಮೆಗಾ ಸ್ಟಾರ್ (Mega Star) ಆ ರೀತಿಯ ಮಾತನ್ನೆ ಶಿವಣ್ಣನ (Shivanna) ಬಗ್ಗೆ ಹೇಳಿದ್ದಾರೆ. ಪೆದ್ದಿ ಚಿತ್ರದ ಡೈರೆಕ್ಟರ್ ಬುಚಿ ಬಾಬು ಸನಾ (Buchi Babu Sana) ಕೇಳಿದ ಪ್ರಶ್ನೆಗೆ ಚಿರಂಜೀವಿ ಉತ್ತರ ಕೊಟ್ಟಿದ್ದಾರೆ. ಹಾಗೆ ಕೊಟ್ಟ ಉತ್ತರದಲ್ಲಿ ಪ್ರೀತಿನೂ ಇದೆ. ಗೌರವನೂ ಇದೆ. ಅಷ್ಟೆ ಯಾಕೆ ಹೆಮ್ಮೆನೂ ಇದೆ. ಇಷ್ಟೆಲ್ಲ ಇರೋ ಮೆಗಾ ಸ್ಟಾರ್ ಮಾತಿನ ಸಂಪೂರ್ಣ ವಿವರ ಇಲ್ಲಿದೆ ಓದಿ.
ಪೆದ್ದಿ ಡೈರೆಕ್ಟರ್ ಕೇಳಿದ ಪ್ರಶ್ನೆಗೆ
ಅಂತಹ ಶಿವರಾಜ್ ಕುಮಾರ್ ಅವರು ಚಿರಂಜೀವಿ ಅವರ ಪುತ್ರ ರಾಮ್ ಚರಣ್ ಚಿತ್ರ ಒಪ್ಪಿರೋದು ಇವರಿಗೆ ತುಂಬಾನೆ ಖುಷಿ ಕೊಟ್ಟಿದೆ. ಅದನ್ನ ತಮ್ಮದೇ ರೀತಿಯಲ್ಲಿಯೇ ಮೆಗಾ ಸ್ಟಾರ್ ಚಿರಂಜೀವಿ ಹೇಳಿಕೊಂಡಿದ್ದಾರೆ.
ಪೆದ್ದಿ ಚಿತ್ರದ ಡೈರೆಕ್ಟರ್ ಬುಚಿ ಬಾಬು ಸನಾ ಒಂದು ಪ್ರಶ್ನೆ ಕೇಳ್ತಾರೆ. ಅದು ಶಿವರಾಜ್ ಕುಮಾರ್ ಅವರಿಗೆ ಸಂಬಂಧಿಸಿರೋದೇ ಆಗಿದೆ. ಇದಕ್ಕೆ ಉತ್ತರ ಕೊಟ್ಟ ಮೆಗಾ ಸ್ಟಾರ್ ಚಿರಂಜೀವಿ ಅವರು ಒಳ್ಳೆ ಮಾತನ್ನೆ ಹೇಳಿದ್ದಾರೆ.
ನಮ್ಮ ಚಿತ್ರದಲ್ಲಿ ಶಿವರಾಜ್ ಕುಮಾರ್ ಅಭಿನಯಿಸಿದ್ದಾರೆ. ಇದು ನಿಜಕ್ಕೂ ದೊಡ್ಡ ವಿಷಯವೇ ಆಗಿದೆ. ಅವರು ಈ ಚಿತ್ರದಲ್ಲಿ ನಟಿಸೋಕೆ ಒಪ್ಪಿದಾಗಲೇ ನಮಗೆ ಗೆಲುವು ಸಿಕ್ಕೇ ಬಿಡ್ತು ಅಂತಲೇ ಹೇಳಿದ್ದಾರೆ.
ಇದು ಅದೆಂತಹ ಮಾತು ಅಲ್ವೇ? ಇದನ್ನ ತುಂಬಾನೆ ಮೆಚ್ಚಿಕೊಂಡ ಶಿವಣ್ಣನ ಫ್ಯಾನ್ಸ್, ಈ ಸಂದರ್ಶನ ರೀತಿಯ ಮಾತುಕತೆಯ ವಿಡಿಯೋ ತುಣುಕನ್ನ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಮೆಗಾ ಸ್ಟಾರ್ ಚಿರಂಜೀವಿ ಅವರು ಶಿವಣ್ಣನ ಬಗ್ಗೆ ಹೆಮ್ಮೆಯಿಂದಲೇ ಮಾತನಾಡಿದ್ದಾರೆ. ಶಿವಣ್ಣ, ಶಿವರಾಜ್ ಕುಮಾರ್ ಅಂತೆಲ್ಲ ಶಿವಣ್ಣನನ್ನ ಮೆಗಾ ಸ್ಟಾರ್ ಚಿರಂಜೀವಿ ಕರೆಯುತ್ತಾರೆ.
ಮೆಗಾ ಸ್ಟಾರ್ ಮೆಗಾ ಮಾತು
ಬುಚಿ ಬಾತು ಸನಾ ಅವರ ಸಂದರ್ಶನ ರೀತಿಯ ಮಾತುಕತೆಯಲ್ಲಿ ಈ ಹೆಸರನ್ನ ಮೆಗಾ ಸ್ಟಾರ್ ಚಿರಂಜೀವಿ ಕರೆದಿರೋದು ಇದೆ. ಆ ರೀತಿ ಬಾಂಡಿಂಗ್ ಇರೋ ಮೆಗಾ ಸ್ಟಾರ್ ಚಿರಂಜೀವಿ ಮನಸಾರೆ ಶಿವಣ್ಣನನ್ನ ಕೊಂಡಾಡಿದ್ದಾರೆ.
ಪೆದ್ದಿ ಚಿತ್ರದಲ್ಲಿ ಶಿವಣ್ಣ ಅದ್ಭುತ ರೋಲ್ ಮಾಡಿದ್ದಾರೆ. ಗೌರ್ ನಾಯ್ಡು ಅನ್ನುವ ಈ ಪಾತ್ರದಲ್ಲಿ ಶಿವಣ್ಣ ಎಲ್ಲರ ಹೃದಯ ಗೆದ್ದಿದ್ದಾರೆ.
ಪೆದ್ದಿ ಚಿತ್ರ ಜೂನ್-4 ರಂದು ರಿಲೀಸ್ ಆಗಿದೆ. ಎಲ್ಲೆಡೆ ಈ ಚಿತ್ರ ತೆರೆ ಕಂಡಿದೆ. ಹಾಗೆ ಒಳ್ಳೆ ರೆಸ್ಪಾನ್ಸ್ ಕೂಡ ಪಡೆದುಕೊಂಡಿದೆ. ಎ.ಆರ್.ರೆಹಮಾನ್ ಸಂಗೀತದ ಹಾಡುಗಳು ಮೋಡಿ ಮಾಡಿವೆ. ರತ್ನವೇಲು ಕ್ಯಾಮರಾವರ್ಕ್ ಎಲ್ಲರ ಗಮನ ಸೆಳೆದಿದೆ.
ಪೆದ್ದಿ ಚಿತ್ರ ಒಂದು ಕ್ರೀಡಾಧರಿಸಿದ ಚಿತ್ರವೇ ಆಗಿದೆ. ಡೈರೆಕ್ಟರ್ ಬುಚಿ ಬಾಬು ಸನಾ ಇಲ್ಲಿ ಒಳ್ಳೆ ಕತೆಯನ್ನೆ ಹೇಳಿದ್ದಾರೆ. ಆದರೆ, ಪೆದ್ದಿ ಚಿತ್ರದ ನಾಯಕ ಇಲ್ಲಿ ಸಿಕ್ಸರ್ ಹೊಡೆದಿದ್ದಾರೆ. ಡೈರೆಕ್ಟರ್ ಬುಚಿ ಬಾಬು ಸನಾ ರನ್ ಔಟ್ ಆಗಿದ್ದಾರೆ ಅನ್ನುವ ಕಾಮೆಂಟ್‌ಗಳೂ ಕೇಳಿ ಬಂದಿವೆ ಅಂತ ಹೇಳಬಹುದು.
Bangalore [Bangalore],Bangalore,Karnataka
Jun 13, 2026 11:03 PM IST













