Last Updated:
Niveditha Gowda: ಬಿಗ್ಬಾಸ್ ಸ್ಪರ್ಧಿ ನಿವೇದಿತಾ ಗೌಡ ಪ್ರೀತಿ ಅರ್ಥಾನೆ ಗೊತ್ತಿಲ್ಲ ಅಂತ ಟ್ರೋಲ್ ಮಾಡೋರಿಗೆ ಸಖತ್ ತಿರುಗೇಟು ಕೊಟ್ಟಿದ್ದಾರೆ. ಅವರು ಹೇಳಿದ್ದೇನು?
ಬಿಗ್ಬಾಸ್ ಮಾಜಿ ಸ್ಪರ್ಧಿ ನಿವೇದಿತಾ ಗೌಡ (Niveditha Gowda) ಹಾಗೂ ಚಂದನ್ ಶೆಟ್ಟಿ (Chandan Shetty) ಡಿವೋರ್ಸ್ (Divorce) ಭಾರೀ ಸುದ್ದಿಯಾಗಿತ್ತು. ಪರಸ್ಪರ ಪ್ರೀತಿಸಿ (Love) ಮದುವೆಯಾದ ನಂತರ ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ಇಬ್ಬರೂ ಪರಸ್ಪರ ಸಮ್ಮತಿಯಿಂದ ವಿಚ್ಛೇದನೆ ಪಡೆದುಕೊಂಡಿದ್ದರು.
ಡಿವೋರ್ಸ್ ನಂತರ ಸೋಷಿಯಲ್ ಮಿಡಿಯಾಲ್ಲಿ ಸಾಕಷ್ಟು ಟ್ರೋಲ್ ಆದವು. ನಿವೇದಿತಾ ಗೌಡಗೆ ಪ್ರೀತಿ ಅಂದರೇನಂತ ಗೊತ್ತಿಲ್ಲ, ಪ್ರೀತಿಯ ಬೆಲೆ ಗೊತ್ತಿಲ್ಲ ಅಂತ ಟ್ರೋಲ್ ಮಾಡಲಾಗುತ್ತಿತ್ತು. ಇವೆಲ್ಲದಕ್ಕೆ ನಿವೇದಿತಾ ಗೌಡ ಹೇಳಿದ್ದೇನು? ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ಅವರು ಹೇಳಿದ್ದಿಷ್ಟು.
ಡಿವೋರ್ಸ್ ಆಗ್ಬೇಕು ಅಂತ ಮದುವೆಯಾಗಲ್ಲ. ಚೆನ್ನಾಗಿರ್ತೀವಿ ಅಂತಾನೇ ಮದಯವೆಯಾಗ್ತಾರೆ, ನಮಗೆ ಅಷ್ಟು ಕಂಪಾಬಿಲಿಟಿ ಇರಲಿಲ್ಲ. ಸೋಷಿಯಲ್ ಮಿಡಿಯಾ ಕೂಡಾ ದೊಡ್ಡ ಪಾತ್ರ ವಹಿಸಿದೆ. ಈ ತುಂಬಾ ವಿಡಿಯೋ ನಮ್ಮ ಬಗ್ಗೆ ಆಗುತ್ತಿತ್ತು. ನೀವು ಮದುವೆಯಾದರೆ ಚೆನ್ನಾಗಿರುತ್ತೆ ಅಂತ ಹೋದಲೆಲ್ಲ ಹೇಳುತ್ತಿದ್ದರು. ಏನನ್ನೂ ಫೋರ್ಸ್ ಮಾಡಬಾರದು ಎಂದಿದ್ದಾರೆ.
ನಮ್ಮ ಪರ್ಸನಲ್ ಮ್ಯಾಟರ್ ಅದು. ಏನಕ್ಕೆ ಡಿವೋರ್ಸ್ ಆಯ್ತು ಅಂತ ಹೇಳೋಕೆ ಇಷ್ಟಪಡಲ್ಲ. ತುಂಬಾ ಊಹನೆ, ಮಾತುಗಳು, ಚರ್ಚೆಗಳೆಲ್ಲ ಶುರುವಾದವು. ಆದರೆ ಇದು ತುಂಬಾ ಹೆಚ್ಚಾಯ್ತು. ಯಾರ್ಯಾರೋ ಬಂದು ಏನೇನೋ ಮಾತನಾಡುವಾಗ ಪ್ರೆಸ್ಮೀಟ್ ಮಾಡಬೇಕು ಅನಿಸಿತು. ಇದಕ್ಕೆ ಒಂದು ಫುಲ್ಸ್ಟಾಪ್ ಕೊಡಬೇಕು ಅನಿಸಿತು. ನಾನು ಪ್ರೆಸ್ಮೀಟ್ ಮಾಡಬೇಕಂತಲೇ ಇಲ್ಲ. ಸುಮ್ಮನೆ ಸುಳ್ಳು ಹೇಳುತ್ತಾ, ರೂಮರ್ಸ್ ಮಾಡುತ್ತಾ ಇರುವುದು ತಪ್ಪು ಎಂದಿದ್ದಾರೆ.
ನಮಗೆ ಪರಸ್ಪರ ಗೌರವ ಇದೆ. ಬೇರೆಯವರ ಪರ್ಸನಲ್ ಲೈಫ್ ಬಗ್ಗೆ ಜಾಸ್ತಿ ಮಾತಾಡಲ್ಲ ಎಂದಿದ್ದಾರೆ.
ನಾನು ಎಲ್ಲೂ ಮಾತನಾಡಿಲ್ಲ. ಯಾಕೆಂದರೆ ಅದು ಅನಗತ್ಯ. ನನಗೆ ತುಂಬಾ ಹತ್ತಿರ ಇರೋರಿಗೆ ನನ್ನ ಬಗ್ಗೆ ಹೇಳಬೇಕು. ಅದನ್ನು ಬಿಟ್ಟು ಬೇರೆಯವರಿಗೆ ಎಲ್ಲವನ್ನೂ ಹೇಳೋ ಅಗತ್ಯ ಇಲ್ಲ. ಜನರಿಗೆ ಏನು ಬೇಕೋ ಅದನ್ನೇ ನಂಬುತ್ತಾರೆ. ಹಾಗಾಗಿ ಅದರ ಮೇಲೆ ಮತ್ತೆ ಸಮಯ ಕಳೆಯೋಕೆ ಇಷ್ಟವಿಲ್ಲ ಎಂದಿದ್ದಾರೆ.
ನಾನು ಪಾಸ್ಟ್ ಬಗ್ಗೆ ಯೋಚಿಸಲ್ಲ. ನನ್ನ ಮದುವೆ ಸಮಯದಲ್ಲಿ ನಾನು ತುಂಬಾ ಚಿಕ್ಕವಳಾಗಿದ್ದೆ. ಅವರ ಕುಟುಂಬದವರು ಚಿಲ್ ಆಗಿದ್ದರು ಎಂದಿದ್ದಾರೆ.
Bangalore,Karnataka
Jun 13, 2026 12:47 PM IST













