Last Updated:
Viral News: ಭಾನುವಾರ ಬಟ್ಟೆ ಒಗಿತಿರಾ? ಹಾಗಾದ್ರೆ, ಲಕ್ಷ ಲಕ್ಷ ದಂಡ ಕಟ್ಟೋಕೆ ರೆಡಿಯಾಗಿ! ಯಾವ ದೇಶದಲ್ಲಿದೆ ಗೊತ್ತಾ ಈ ವಿಚಿತ್ರ ನಿಯಮ?
Viral News: ಭಾನುವಾರ (Sunday) ಬಂತು ಅಂದ್ರೆ ಕೆಲಸಕ್ಕೆ ರಜೆ, ಮನೆಯಲ್ಲಿ ಬಾಕಿ ಉಳಿದ ಕೆಲಸಗಳು ಅಂದ್ರೆ ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು ಮಾಮೂಲಿ. ಆದರೆ, ನಿಮಗೆ ಗೊತ್ತಾ, ಪ್ರಪಂಚದಲ್ಲಿ ಒಂದು ರಾಷ್ಟ್ರವಿದೆ, ಆ ರಾಷ್ಟ್ರದಲ್ಲಿ ಭಾನುವಾರ ಏನಾದರೂ ಬಟ್ಟೆ ಒಗೆದರೆ (Laundry) ಭಾರಿ ದಂಡ ಇಲ್ಲಾ ದಂಡದೊಂದಿಗೆ ಜೈಲು ಫಿಕ್ಸ್! ಹಾಗಾದರೆ, ಇಂತಹ ವಿಚಿತ್ರ ನಿಯಮವಿರುವ (Viral Rules) ದೇಶ (Country) ಯಾವುದು? ಆ ದೇಶದಲ್ಲಿ ಭಾನುವಾರ ಯಾಕೆ ಬಟ್ಟೆ ಒಗೆಯಬಾರದು ಗೊತ್ತಾ? ಇಲ್ಲಿದೆ ಆ ಕುರಿತ ಅಚ್ಚರಿಯ ಮಾಹಿತಿ.
ಪ್ರವಾಸಿಗರ ಸ್ವರ್ಗವಾಗಿರುವ ಸ್ವಿಟ್ಜರ್ಲೆಂಡ್ನಲ್ಲಿ (Switzerland) ಈ ವಿಚಿತ್ರ ನಿಯಮವಿದೆ! ಹೌದು, ಸ್ವಿಟ್ಜರ್ಲೆಂಡ್ನಲ್ಲಿ ಭಾನುವಾರ ಬಟ್ಟೆ ಒಗೆಯುವುದು ಮತ್ತು ಒಣಗಲು ಹಾಕುವುದು ಕಾನೂನುಬಾಹಿರ ಮತ್ತು ದಂಡನೀಯ ಅಪರಾಧ.
ಸ್ವಿಟ್ಜರ್ಲೆಂಡ್ನಲ್ಲಿ ಭಾನುವಾರವನ್ನು ಅಧಿಕೃತ ವಿಶ್ರಾಂತಿ ದಿನವೆಂದು ಕರೆಯಲಾಗುತ್ತದೆ. ಈ ದಿನ ಸಾರ್ವಜನಿಕವಾಗಿ ಯಾವುದೇ ಶಬ್ದ ಮಾಡುವ ಕೆಲಸಗಳನ್ನು (ಉದಾಹರಣೆಗೆ ಹುಲ್ಲು ಕತ್ತರಿಸುವುದು, ಬಟ್ಟೆ ಒಗೆಯುವ ಯಂತ್ರ (ವಾಷಿಂಗ್ ಮಷಿನ್) ಓಡಿಸುವುದು) ನಿಷೇಧಿಸಲಾಗಿದೆ. ಅದರಲ್ಲೂ, ಹೆಚ್ಚಿನ ಅಪಾರ್ಟ್ಮೆಂಟ್ಗಳಲ್ಲಿ ಎಲ್ಲರೂ ಹಂಚಿಕೊಳ್ಳುವ ಲಾಂಡ್ರಿ ರೂಮ್ ಇರುತ್ತದೆ. ಅಲ್ಲಿನ ನಿಯಮಾವಳಿಗಳ ಪ್ರಕಾರ ಭಾನುವಾರ ಮತ್ತು ಸಾರ್ವಜನಿಕ ರಜಾದಿನಗಳಲ್ಲಿ ಯಂತ್ರಗಳನ್ನು ಬಳಸುವುದು ಕಟ್ಟುನಿಟ್ಟಾಗಿ ನಿಷೇಧಿತ.
ಈ ನಿಯಮವನ್ನು ಉಲ್ಲಂಘಿಸಿದರೆ ಮೊದಲು ಅಕ್ಕ ಪಕ್ಕದ ಮನೆಯವರು ದೂರು ನೀಡುತ್ತಾರೆ. ಆದ್ರೆ, ಈ ನಿಯಮವನ್ನು ಪದೇ ಪದೇ ಮುರಿದರೆ ಮುನಿಸಿಪಲ್ ಕಾಯ್ದೆಯಡಿ ಭಾರಿ ದಂಡ ವಿಧಿಸಲಾಗುತ್ತದೆ. ಇನ್ನೂ, ಈ ದಂಡ ಪಾವತಿಸಲು ವಿಫಲವಾದರೆ, ಗಂಭೀರ ಪ್ರಕರಣ ಎಂದು ಭಾವಿಸಿ ಜೈಲು ಶಿಕ್ಷೆಯನ್ನೂ ವಿಧಿಸಲು ಅವಕಾಶವಿದೆ.

ಏತನ್ಮಧ್ಯೆ, ಬಾಲ್ಕನಿ ಅಥವಾ ಮನೆಯ ಹೊರಭಾಗದಲ್ಲಿ ಭಾನುವಾರ ಬಟ್ಟೆ ಒಗೆದು ಹಗ್ಗಕ್ಕೆ ಹಾಕಿದರೆ ದೃಶ್ಯಾವಳಿಗಳಿಗೆ ಧಕ್ಕೆ ಬರುತ್ತದೆ ಎಂದು ಕೆಲವು ಕಡೆ ಅದನ್ನು ಸಹ ವಿರೋಧಿಸಲಾಗುತ್ತದೆ.
ಸ್ವಿಟ್ಜರ್ಲೆಂಡ್ನೊಂದಿಗೆ ಜರ್ಮನಿಯಲ್ಲಿಯೂ, ಭಾನುವಾರವನ್ನು ಶಾಂತಿ ಮತ್ತು ವಿಶ್ರಾಂತಿಯ ದಿನವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ, ಇಲ್ಲಿನ ಜನರಿಗೆ ಕುಟುಂಬದೊಂದಿಗೆ ಸಮಯ ಕಳೆಯುವ ಮತ್ತು ವಿಶ್ರಾಂತಿ ಪಡೆಯುವ ಹಕ್ಕನ್ನು ನೀಡಲಾಗಿದೆ. ಅದಕ್ಕಾಗಿಯೇ ಜೋರಾಗಿ ಸಂಗೀತ ನುಡಿಸುವುದು, ಟಿವಿ ವಾಲ್ಯೂಮ್ ಹೆಚ್ಚಿಸುವುದು, ಹುಲ್ಲುಗಳನ್ನು ಕಟ್ ಮಾಡುವುದು, ಗೋಡೆಗಳನ್ನ ಕೊರೆಯುವುದು ಅಥವಾ ಭಾನುವಾರದಂದು ಪೀಠೋಪಕರಣಗಳನ್ನು ಬಡಿಯುವುದನ್ನು ಕಾನೂನುಬಾಹಿರವೆಂದು ಪರಿಗಣಿಸಬಹುದು.
ಅದರಂತೆ, ಜರ್ಮನಿಯಲ್ಲಿ, ಶಬ್ದ ನಿಯಮಗಳನ್ನು ಉಲ್ಲಂಘಿಸಿ ಬಟ್ಟೆ ಒಗೆದರೆ, 50 ಯುರೋಗಳಿಂದ 2500 ಯುರೋಗಳವರೆಗೆ ದಂಡ ವಿಧಿಸಬಹುದು. ಇದು ಭಾರತೀಯ ರೂಪಾಯಿಗಳಲ್ಲಿ ಲಕ್ಷ ರೂಪಾಯಿಗಳಷ್ಟು ಅನ್ವಯವಾಗಲಿದೆ.













