Salman Khan: ದಿಢೀರ್ ದೆಹಲಿ ಹೈಕೋರ್ಟ್ ಕದ ತಟ್ಟಿದ್ಯಾಕೆ ಸಲ್ಮಾನ್ ಖಾನ್? ಯಾವುದರ ವಿರುದ್ಧ ಸ್ಟೇ? | Salman Khan moves delhi high court to get stay for kala hiran | | ACTPnews

ಸಲ್ಮಾನ್ ಖಾನ್


Last Updated:

Salman Khan: ನಟ ಸಲ್ಮಾನ್ ಖಾನ್ ಅವರು ದಿಢೀರ್ ಆಗಿ ದೆಹಲಿ ಕೋರ್ಟ್ ಮೆಟ್ಟಿಲೇರಿದ್ದೇಕೆ? ಇದರ ಹಿಂದಿನ ಕಾರಣ ಏನು?

ಸಲ್ಮಾನ್ ಖಾನ್
ಸಲ್ಮಾನ್ ಖಾನ್

ಸಲ್ಮಾನ್ ಖಾನ್ ದಿಢೀರ್ ಆಗಿ ದೆಹಲಿ ಹೈಕೋರ್ಟ್  (Delhi Highcourt) ಮೆಟ್ಟಿಲೇರಿದ್ದಾರೆ. ತಮ್ಮ ಜೀವನದ ಘಟನೆ ಆಧಾರಿತ ‘ಕಾಲಾ ಹಿರನ್: ಬ್ಯಾಟಲ್ ಫಾರ್ ಲೆಗಸಿ’ (Kala Hiran) ಚಿತ್ರದ ನಿರ್ಮಾಣ, ಪ್ರಚಾರ ಮತ್ತು ಬಿಡುಗಡೆಗೆ ತಕ್ಷಣ ತಡೆಯಾಜ್ಞೆ ನೀಡುವಂತೆ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

1998 ರ ಕೃಷ್ಣಮೃಗ ಬೇಟೆ ಪ್ರಕರಣದಿಂದ ಪ್ರೇರಿತವಾದ ಈ ಚಿತ್ರವು ತಮ್ಮ ವೈಯಕ್ತಿಕ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ನಟ ಆರೋಪಿಸಿದ್ದಾರೆ. ‘ಕಾಲಾ ಹಿರನ್ – ದಿ ಬ್ಯಾಟಲ್ ಫಾರ್ ಲೆಗಸಿ’ ಚಿತ್ರದ ಬಿಡುಗಡೆಯನ್ನು ತಡೆಯಲು ಅವರು ನ್ಯಾಯಾಲಯದಲ್ಲಿ ಮಧ್ಯಂತರ ತಡೆಯಾಜ್ಞೆ ನೀಡಬೇಕೆಂದು ಕೋರಿ ಅರ್ಜಿಯನ್ನು ಸಲ್ಲಿಸಿದ್ದಾರೆ.

ಚಲನಚಿತ್ರ ನಿರ್ಮಾಣ ಮತ್ತು ಪ್ರಚಾರ ಸಾಮಗ್ರಿಗಳು ಅವರ ಸಾರ್ವಜನಿಕ ಇಮೇಜ್‌ಗೆ ಮಸಿ ಬಳಿಯುವ ಸಾಧ್ಯತೆಯಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಚಿತ್ರದ ಸಂಪೂರ್ಣ ಕಥಾವಸ್ತುವು ಸಲ್ಮಾನ್ ಖಾನ್ ಒಳಗೊಂಡ ಪ್ರಸಿದ್ಧ ‘ಕೃಷ್ಣಮೃಗ ಬೇಟೆ ಪ್ರಕರಣ’ವನ್ನು ಆಧರಿಸಿದೆ.

ಇದು ಪ್ರಸ್ತುತ ನ್ಯಾಯಾಲಯದಲ್ಲಿ ಬಾಕಿ ಇರುವ ಕಾನೂನು ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಸಲ್ಮಾನ್ ವಕೀಲರು ವಾದಿಸಿದ್ದಾರೆ. ಅನುಮತಿಯಿಲ್ಲದೆ ಯಾರೊಬ್ಬರ ವೈಯಕ್ತಿಕ ಜೀವನವನ್ನು ಚಿತ್ರೀಕರಿಸುವುದು ಅವರ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed