Last Updated:
Vijay: ಇಂದು ವಿಜಯ್ ಕೊಲ್ಲೂರಿಗೆ ಬರುತ್ತಿರುವ ಹಿನ್ನೆಲೆ 5 ಗಂಟೆಗಳ ಕಾಲ ಸಾರ್ವಜನಿಕ ದರ್ಶನಕ್ಕೆ ಬ್ರೇಕ್ ಹಾಕಲಾಗಿದೆ. ಎಷ್ಟು ಹೊತ್ತಿನಿಂದ ಎಷ್ಟು ಹೊತ್ತಿನ ತನಕ? ಇಲ್ಲಿ ಓದಿ.
ತಮಿಳುನಾಡು ಸಿಎಂ (Tamil Nadu CM) ವಿಜಯ್ ಜೋಸೆಫ್ ಕೊಲ್ಲೂರಿಗೆ (Kollur) ಭೇಟಿ ನೀಡುತ್ತಿರುವುದು ಈಗ ದೊಡ್ಡ ಸುದ್ದಿಯಾಗಿದೆ. ಮಧ್ಯಾಹ್ನ 12.30 ಕ್ಕೆ ವಿಶೇಷ ವಿಮಾನದ ಮೂಲಕ ಮಂಗಳೂರು (Mangaluru) ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಜಯ್ (Vijay) ಅವರು ಆಗಮಿಸಲಿದ್ದು ಬಳಿಕ ರಸ್ತೆ ಮಾರ್ಗದ ಮೂಲಕ ಕೊಲ್ಲೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
ಮಂಗಳೂರಿನಿಂದ 130 ಕೀಮೀ ದೂರವಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರಕ್ಕೆ ನಟ ಝಿರೋ ಟ್ರಾಫಿಕ್ ನಲ್ಲಿ ಹೋಗಲಿದ್ದಾರೆ. 1.30 ಗಂಟೆಯ ರಸ್ತೆ ಪ್ರಯಾಣದ ಮೂಲಕ ಕೊಲ್ಲೂರಿಗೆ ಭೇಟಿ ನೀಡಿ 2 ಗಂಟೆಗೆ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ.
ದೇವರ ದರ್ಶನದ ಬಳಿಕ ವಿಜಯ್ ವಿಶೇಷ ಪೂಜೆ ನೆರವೇರಿಸಲಿದ್ದಾರೆ ಎನ್ನಲಾಗಿದೆ. ಅಂದಾಜು 3 ಗಂಟೆಯ ವೇಳೆಗೆ ಕೊಲ್ಲೂರು ಕ್ಷೇತ್ರದಿಂದ ನಿರ್ಗಮಿಸಲಿದ್ದು ಸಂಜೆ 4.30ರ ವೇಳೆಗೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ಚೆನ್ನೈ ಗೆ ನಿರ್ಗಮಿಸಲಿದ್ದಾರೆ ಎನ್ನಲಾಗಿದೆ.
ಮಂಗಳೂರಿನಿಂದ 130 ಕೀಲೋ ಮೀಟರ್ ದೂರವಿರುವ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ರಸ್ತೆ ಪ್ರಯಾಣದ ಮೂಲಕ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ. ದೇವಿಯ ದರ್ಶನದ ಬಳಿಕ ಸಂಜೆ 4:30ರ ವೇಳೆಗೆ ಚೆನ್ನೈಗೆ ವಾಪಸ್ ತೆರಳಲಿದ್ದಾರೆ. ವಿಜಯ್ ಆಗಮನ ಹಿನ್ನೆಲೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಅಲ್ಲದೆ, ಮಧ್ಯಾಹ್ನ 12 ರಿಂದ ಸಂಜೆ 5 ಗಂಟೆವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್ ಹಾಕಲಾಗಿದೆ.
ದೇವಿ ದರ್ಶನಕ್ಕೆ ಬರ್ತಿರುವ ತಮಿಳುನಾಡಿನ ಮೂರನೇ ಸಿಎಂ
ತಮಿಳುನಾಡಿನ ಅಂದಿನ ಸಿಎಂ ಎಂಜಿಆರ್ ಅವರು, ಈ ಹಿಂದೆ ಕೊಲ್ಲೂರು ಶ್ರೀ ಮೂಕಾಂಬಿಕೆಯ ದರ್ಶನ ಪಡೆದಿದ್ದರು. ಭೇಟಿ ನೀಡಿದ್ದ ಸಂದರ್ಭದಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಿಗೆ ಚಿನ್ನದ ಖಡ್ಗವನ್ನು ಅರ್ಪಿಸಿದ್ದರು.
Bangalore,Karnataka













