Andaman: ಬದಲಾಗುತ್ತಾ ಭಾರತದ ಭವಿಷ್ಯ? ಅಂಡಮಾನ್​​ನಲ್ಲಿ ಭಾರೀ ಪ್ರಮಾಣದಲ್ಲಿ ಪತ್ತೆಯಾದ ಗ್ಯಾಸ್ ನಿಕ್ಷೇಪ, ವಿಡಿಯೋ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಾಂದರ್ಭಿಕ ಚಿತ್ರ


Last Updated:

ಅಂಡಮಾನ್ ದ್ವೀಪಗಳ ಪೂರ್ವ ತೀರಗಳಿಗೆ 15 ಕಿಲೋ ಮೀಟರ್ ದೂರದಲ್ಲಿರುವ ಶ್ರೀ ವಿಜಯಪುರಂ-03 ಬಳಿ ನ್ಯಾಚುರಲ್ ಗ್ಯಾಸ್ ಪತ್ತೆಯಾಗಿರೋದಾಗಿ ಪೆಟ್ರೋಲಿಯಂ ಹರ್ದೀಪ್ ಸಿಂಗ್ ಪುರಿ ಘೋಷಣೆ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭಾರತ ಪೂರ್ವ ಕರಾವಳಿಯ ದ್ವೀಪಗಳಲ್ಲಿ (Andaman Sea) ಭಾರೀ ಪ್ರಮಾಣದ ನಿಕ್ಷೇಪಗಳು ಪತ್ತೆಯಾಗಿದೆ. ಅಂಡಮಾನ್ ಪೂರ್ವ ತೀರದ 15 ಕಿಲೋ ಮೀಟರ್ ದೂರದ ಶ್ರೀ ವಿಜಯಪುರಂ-03 ಬಳಿ (Sri Vijayapuram-3) ಗ್ಯಾಸ್ ನಿಕ್ಷೇಪಗಳು ಪತ್ತೆಯಾಗಿರೋದಾಗಿ ಕೇಂದ್ರ ಘೋಷಣೆ ಮಾಡಿದೆ. ಆಯಿಲ್ ಇಂಡಿಯಾ ಲಿಮಿಟೆಡ್ ಉತ್ಖನನದಲ್ಲಿ ಸಮುದ್ರ ಆಳದ 355 ಮೀಟರ್ ಕೆಳಭಾಗದಲ್ಲಿ ನಿಕ್ಷೇಪ ಪತ್ತೆಯಾಗಿರೋದಾಗಿ (Natural Gas) ಗುರುತಿಸಿದ್ದಾರೆ. ಭಾರತದ ಕರಾವಳಿ ಪರಿಶೋಧನಾ ಪ್ರಯತ್ನಗಳು ಒಂದು ಪ್ರಮುಖ ಪ್ರಗತಿಯಾಗಿದೆ ಎಂದು ಎಕ್ಸ್ ನಲ್ಲಿ ಪೆಟ್ರೋಲಿಯಂ ಸಚಿವ (Hardeep Singh Puri) ವಿಡಿಯೋ ಶೇರ್ ಮಾಡಿದ್ದಾರೆ.

ಸಮುದ್ರದಲ್ಲಿ ಗರ್ಭದ ಸುಮಾರು 355 ಮೀಟರ್ ಆಳದಲ್ಲಿ ನೈಸರ್ಗಿಕ ನಿಕ್ಷೇಪಗಳನ್ನು ಗುರುತಿಸಿದ್ದಾರೆ. ಈಯೋಸೀನ್ ಸ್ತರದಲ್ಲಿ 1,900 ಮೀಟರ್‌ಗಿಂತಲೂ ಹೆಚ್ಚು ಆಳದಲ್ಲಿ ನಡೆಸಲಾದ ಪ್ರಾಥಮಿಕ ಉತ್ಪಾದನಾ ಪರೀಕ್ಷೆಗಳಲ್ಲಿ ಗ್ಯಾಸ್ ಇರೋದು ಪತ್ತೆಯಾಗಿದೆ. ಸದ್ಯ ಗ್ಯಾಸ್ ನ ಗುಣಮಟ್ಟ, ಅದರ ಕ್ಯಾಲೋರಿಫಿಕ್ ಮೌಲ್ಯ ಅಂದಾಜು ಮಾಡಲು ಆಯಿಲ್ ಇಂಡಿಯಾ ಪ್ರಯತ್ನಿಸುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. ಆಯಿಲ್ ಇಂಡಿಯಾ ಅನ್ವಯ, ಅಂಡಮಾನ್ ಬೆಸಿನ್​​ ನಲ್ಲಿ ನಡೆಯುತ್ತಿರುವ ಅನ್ವೇಷಣೆಯ ಭಾಗವಾಗಿ ಮೂರು ಭಾವಿಗಳನ್ನು ಉತ್ಖನನ ಮಾಡುತ್ತಿದ್ದು, ಇದರಲ್ಲಿ ಎರಡು ಭಾವಿಗಳಲ್ಲಿ ಹೈಡ್ರೋಜನ್ ಕರ್ಬನ್ ಇರೋದು ಖಚಿತವಾಗಿದೆ.

ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆಯ ದಿನ ದೇಶೀಯ ಇಂಧನ ನಿಕ್ಷೇಪಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲು ಪ್ರಧಾನಿ ಮೋದಿ ಘೋಷಣೆ ಮಾಡಿದ್ದರು. ಇದರೊಂದಿಗೆ ಸಮುದ್ರ ಮಂಥನ್ ಮಿಷನ್ ಆರಂಭವಾಗಿತ್ತು. ಈ ಯೋಜನೆ ಭಾಗವಾಗಿ ಹೈಡ್ರೋಕಾರ್ಬನ್ ನಿಕ್ಷೇಪಗಳನ್ನು ಸಂಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲು ತೀರ ಪ್ರದೇಶಗಳ ಮುಖಜ ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಅನ್ವೇಷಣೆಗಳು ನಡೆಸಲು ಪ್ರಣಾಳಿಕೆ ಮಾಡಿಕೊಂಡಿದ್ದೇವು. ಅಂಡಮಾನ್ ಬೇಸ್ ನಲ್ಲಿ ಮೂರು ಅನ್ವೇಷಣ ಭಾವಿಗಳಲ್ಲಿ ಹೈಡ್ರೋಕಾರ್ಬಾನ್ ಇರೋದು ಖಚಿತವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಈ ಆವಿಷ್ಕಾರ ಅಂಡಮಾನ್ ಪ್ರದೇಶಗಳಲ್ಲಿ ನಡೆಯುತ್ತಿರುವ ಅನ್ವೇಷಣೆಗಳಿಗೆ ಸಿಕ್ಕ ಅತೀ ದೊಡ್ಡ ಗೆಲುವು, ಇದು ಭಾರತದ ಇಂಧನ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಸಚಿವರು ಬರೆದುಕೊಂಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed