IND vs WI: ಅಭಿಷೇಕ್ ಸ್ಫೋಟಕ ಅರ್ಧಶತಕ, ವೆಸ್ಟ್ ಇಂಡೀಸ್​​ಗೆ ಬೃಹತ್ ಗುರಿ ನೀಡಿದ ಭಾರತ | ಕ್ರೀಡಾ ಸುದ್ದಿ | ACTPnews

ಅಭಿಷೇಕ್ ಶರ್ಮಾ


Last Updated:

ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ 3ನೇ ಟಿ20 ಪಂದ್ಯದಲ್ಲಿ ಭಾರತ ತಂಡ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 220 ರನ್​ಗಳ ಬೃಹತ್ ಮೊತ್ತ ಕಲೆಯಾಕಿದೆ.

ಅಭಿಷೇಕ್ ಶರ್ಮಾ
ಅಭಿಷೇಕ್ ಶರ್ಮಾ

ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ (India vs West Indies) ವಿರುದ್ಧ ನಡೆಯುತ್ತಿರುವ 3ನೇ ಟಿ20 ಪಂದ್ಯದಲ್ಲಿ ಭಾರತ ತಂಡ (Team India) 20 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 223 ರನ್​ಗಳ ಬೃಹತ್ ಮೊತ್ತ ಕಲೆ ಹಾಕಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಅಭಿಷೇಕ್ ಶರ್ಮಾ (Abhishek Sharma) ಸಿಡಿಸಿದ ಸ್ಫೋಟಕ ಅರ್ಧಶತಕ ಈ ಬೃಹತ್ ಮೊತ್ತಕ್ಕೆ ಕಾರಣವಾಯಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಕುಸಿತ ಕಂಡು 250 ರನ್​ಗಳಿಗೂ ಹೆಚ್ಚು ರನ್​ಗಳಿಸುವ ಅವಕಾಶ ಕಳೆದುಕೊಂಡಿತು.

ಅಭಿಷೇಕ್ ಅಬ್ಬರದ ಅರ್ಧಶತಕ

ಟಾಸ್ ಸೋತು ಬ್ಯಾಟಿಂಗ್ ಇಳಿದಿದ್ದ ಭಾರತ ನಿರೀಕ್ಷಿತ ಆರಂಭ ಪಡೆಯಲು ವಿಫಲವಾಯಿತು. ಕಳೆದ ಪಂದ್ಯದಲ್ಲಿ 82 ರನ್​ಗಳಿಸಿದ್ದ ಸಂಜು ಸ್ಯಾಮ್ಸನ್​ ಕೇವಲ 3 ರನ್​ಗಳಿಸಿ ಔಟ್ ಆದರು. ಆದರೆ ಎಂದಿನಂತೆ ಸ್ಫೋಟಕ ಆಟವಾಡಿದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಕೇವಲ 18 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿ ಅಬ್ಬರಿಸಿದರು. ಒಟ್ಟಾರೆ   ಈ ಪಂದ್ಯದಲ್ಲಿ ಅವರು 30 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್​ಗಳ ಸಹಿತ 69 ರನ್​ಗಳಿಸುವ ಮೂಲಕ ದೊಡ್ಡ ಮೊತ್ತವನ್ನ ಕಲೆ ಹಾಕಲು ನೆರವಾದರು.

ಮಧ್ಯಮ ಕ್ರಮಾಂಕದ ಕುಸಿತ

ಒಂದು ಹಂತದಲ್ಲಿ ಭಾರತ ತಂಡ 8 ಓವರ್ಗಳಲ್ಲಿ 100 ರ ಗಡಿ ದಾಟಿ 250ಕ್ಕೂ ಹೆಚ್ಚು ಮೊತ್ತ ಗಳಿಸುವ ಮುನ್ಸೂಚನೆ ನೀಡಿತ್ತು. ಆದರೆ 2 ಓವರ್​ಗಳ ಅಂತರದಲ್ಲಿ  4 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. 8 ಓವರ್​ಗಳಲ್ಲಿ 1 ವಿಕೆಟ್ ಕಳೆದುಕೊಂಡು 109 ರನ್​ಗಳಿಸಿದ್ದ ಭಾರತ 10 ಓವರ್​ಗಳಾಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು 125 ರನ್​ಗಳಿಸಿತ್ತು. ಇಶಾನ್ ಕಿಶನ್ 18 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್​ ಸಹಿತ 37,  ನಾಯಕ ಶ್ರೇಯಸ್ ಅಯ್ಯರ್ 1 ಹಾಗೂ ಅಭಿಷೇಕ್ ಶರ್ಮಾ 69 ರನ್​ಗಳಿಸಿ ಸತತ 2 ಓವರ್​ಗಳಲ್ಲಿ ಪೆವಿಲಿಯನ್ ಸೇರಿಕೊಂಡರು.

200ರ ಗಡಿ ದಾಟಿಸಿದ ಬಾಲಂಗೋಚಿಗಳು

11ನೇ ಓವರ್​ನಲ್ಲಿ ನಮನ್ ಧೀರ್ ಕೂಡ ಕೇವಲ 5 ಎಸೆತಗಳಲ್ಲಿ 10 ರನ್​ಗಳಿಸಿ ಔಟ್ ಆದರು. ಈ ಹಂತದಲ್ಲಿ ತಿಲಕ್ ವರ್ಮಾ ಹಾಗೂ ನಿತೀಶ್ ಕುಮಾರ್ ರೆಡ್ಡಿ 37 ರನ್​ಗಳ ಚೇತರಿಕೆ ಜೊತೆಯಾಟ ನೀಡಿದರು. ಆದರೆ ನಿತೀಶ್ ಕೂಡ ರನ್​ಗಳಿಸುವ ಆತುರದಲ್ಲಿ 14 ಎಸೆತಗಳಲ್ಲಿ 21 ರನ್​ಗಳಿಸಿ ನಿರ್ಗಮಿಸಿದರು. ಕೊನೆಯ ಬ್ಯಾಟಿಂಗ್ ಜೋಡಿಯಾಗಿದ್ದ ಅಕ್ಷರ್ ಪಟೇಲ್ ಹಾಗೂ ತಿಲಕ್ ವರ್ಮಾ  25 ರನ್​ ಸೇರಿಸಿದರು. ತಿಲಕ್ ವರ್ಮಾ (28) ವಿಚಿತ್ರ ರನ್​ಔಟ್​ಗೆ ಬಲಿಯಾದರು. ಅಕ್ಷರ್ ಹೊಡೆದ ಚೆಂಡು ಬೌಂಡರಿ ದಾಟಿದೆ ಎಂದು ಭಾವಿಸಿದ ತಿಲಕ್ ರನ್ ಓಡುವ ಬದಲಿಗೆ ನಡೆದುಕೊಂಡು ಬಂದರು. ಆದರೆ ಚೆಂಡನ್ನ ಪಡೆದ ಕೀಪರ್ ಶಾಯ್ ಹೋಪ್ ಬೌಲರ್​ ಕೈಗೆ ಚೆಂಡನ್ನ ನೀಡಿದರು. ಬೌಲರ್ ಬೇಲ್ಸ್ ಎಗರಿಸಿ ರನ್ ಔಟ್ ಅಪೀಲ್ ಮಾಡಿದರು. ಚೆಂಡು ಬೌಂಡರಿ ದಾಟುವ ಮುನ್ನ ಫೀಲ್ಡರ್ ತಡೆದಿದ್ದರಿಂದ, ತಿಲಕ್ ರನ್ ಪೂರ್ಣಗೊಳಿಸದ ಕಾರಣ ರನ್​ ಔಟ್ ಆದರು.

ವೆಸ್ಟ್ ಇಂಡೀಸ್ ಪರ ರೋಸ್ಟನ್ ಚೇಸ್ 38ಕ್ಕೆ2, ಶಮರ್ ಜೋಸೆಫ್ 54ಕ್ಕೆ2, ಶಮರ್ ಸ್ಪ್ರಿಂಗರ್ 50ಕ್ಕೆ2, ಗುಡಕೇಶ್ ಮೋಟಿ 37ಕ್ಕೆ1, ಕೀಮೋ ಪಾಲ್ 38ಕ್ಕೆ1 ವಿಕೆಟ್ ಪಡೆದರು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed