[ad_1]
ಕೋಟೆ ಸಿನಿಮಾವನ್ನ ನಾನು ಡೈರೆಕ್ಷನ್ ಮಾಡಿದ್ದೇನೆ. ಈ ಚಿತ್ರವನ್ನ ಉತ್ತರ ಕರ್ನಾಟಕದಲ್ಲಿ ಚಿತ್ರೀಕರಣ ಮಾಡಿದ್ದೇವೆ. ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅಭಿನಯಿಸಿದ್ದಾರೆ.
ಬೃಂದಾವಿಹಾರಿ ಡೈರೆಕ್ಟರ್ ಹೇಳಿದ್ದೇನು ಗೊತ್ತಾ?
ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ಸರ್ಕಲ್ ಅಲ್ಲಿ ಚಿತ್ರೀಕರಣ ಮಾಡಿದ್ದೇವೆ. ಈ ಚಿತ್ರಕ್ಕಾಗಿಯೇ ಇಲ್ಲಿಯ ಲೋಕೇಶನ್‌ಗಳನ್ನೆ ಬಳಸಿದ್ದೇವೆ ಅಂತಲೇ ಹೇಳಿದ್ದಾರೆ.
ಕೃಷ್ಣಂ ಪ್ರಣಯ ಸಖಿ ಚಿತ್ರದ ಒಂದು ಹಾಡಿಗೆ ಮಾಳು ನಿಪ್ಪನಾಳ್ ಅವರಿಂದ ಹಾಡಿಸ್ಬೇಕು ಅಂತ ಪ್ರಯತ್ನ ಮಾಡಿದೇವು.10 ಸಲ ಕಾಲ್ ಕೂಡ ಮಾಡಿದೇವು.
ಬೃಂದಾವಿಹಾರಿ ಚಿತ್ರದ ರಿಲೀಸ್ ಮುಂದಕ್ಕೆ ಹೋಗಿದೆ. ಹೆಚ್ಚು ಕಡಿಮೆ ಒಂದು ತಿಂಗಳು ಮುಂದೆ ಹೋಗಿದೆ. ಅಕ್ಟೋಬರ್-16 ರಂದು ಇದು ತೆರೆ ಕಾಣಬೇಕಿತ್ತು.
ಆದರೆ, ಇದು ನವೆಂಬರ್-20 ರಂದು ಇದು ತೆರೆ ಕಾಣುತ್ತಿದೆ. ಹಾಗಾಗಿಯೇ ನೀವು ಒಂದು ತಿಂಗಳು ವೇಟ್ ಮಾಡಬೇಕು ಅನ್ನೋದನ್ನು ಶ್ರೀನಿವಾಸ್ ರಾಜು ಹೇಳಿಕೊಂಡಿದ್ದಾರೆ.
ಉತ್ತರ ಕರ್ನಾಟಕದವರಿಗೆ ಅವಕಾಶವೇ ಸಿಗೋದಿಲ್ಲ
ಒಂದು ವೇಳೆ ಈಗ ನಾವು ಬಂದ್ರೆ ಶೋಗಳು ಡಿವೈಡ್ ಆಗುತ್ತವೆ. ನಮಗೆ ಎರಡು ಶೋ ಅವರಿಗೆ ಎರಡು ಶೋ ಅಂತ ಆಗುತ್ತದೆ. ಹಾಗಾಗಿಯೇ ನಾವು ಒಂದು ತಿಂಗಳು ಮುಂದೆ ಹೋಗಿದ್ದೇವೆ. ಮುಂದಿನ ತಿಂಗಳು ನವೆಂಬರ್-20 ರಂದು ನಮ್ಮ ಚಿತ್ರ ಬರ್ತಿದೆ ಅಂತಲೇ ಗಣೇಶ್ ಹೇಳಿದ್ದಾರೆ.
ಉತ್ತರ ಕರ್ನಾಟಕದ ಜನರಿಗೆ ಅವಕಾಶ ಕೊಡ್ತಿಲ್ಲ ಅನ್ನೋದು ಈಗ ಗೊತ್ತಾಗಿದೆ. ಕತೆಯನ್ನ ಕೊಡಿ, ನಮ್ಮಲ್ಲಿ ಒಳ್ಳೆ ರೈಟರ್ ಇದ್ದಾರೆ.
ಕಥೆಗೆ ಸೂಕ್ತ ಅನಿಸೋ ಕಲಾವಿದರನ್ನ ನಾವು ಹಾಕಿಕೊಳ್ಳುತ್ತೇವೆ. ಹಾಕಿಕೊಂಡು ಸಿನಿಮಾ ಮಾಡುತ್ತೇವೆ ಅಂತಲೇ ಗಣೇಶ್ ಹೇಳಿಕೊಂಡಿದ್ದಾರೆ.
ಒಟ್ಟಾರೆ, ಬೃಂದಾವಿಹಾರಿ ಸಿನಿಮಾದ ಹುಬ್ಬಳ್ಳಿ ಪ್ರೆಸ್ ಮೀಟ್ ಅಲ್ಲಿ ಗಣೇಶ್, ಡೈರೆಕ್ಟರ್ ಶ್ರೀನಿವಾಸ್ ರಾಜು, ನಟಿಯರಾದ ದೇವಿಕಾ ಭಟ್, ಮಾಳವಿಕಾ ಶರ್ಮಾ, ಮ್ಯೂಸಿಕ್ ಡೈರೆಕ್ಟರ್ ಅಬ್ದುಲ್ ಹೇಶಮ್ ವಹಾಬ್, ನಿರ್ಮಾಪಕ ಸಮೃದ್ಧಿ ಮಂಜುನಾಥ್ ಇದ್ದರು. ಇವರು ಸಿನಿಮಾ ಕುರಿತು ಹೇಳಿಕೊಂಡರು.
[ad_2]
Source link













