Last Updated:
Abhijeet Dipke Video: ದೆಹಲಿಯಲ್ಲಿ ಬಂಧನದಲ್ಲಿದ್ದಾಗ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಅಜ್ಜಿಯ ಸಾವಿನ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡುತ್ತಿರುವ ವಿಡಿಯೋವನ್ನು ದೆಹಲಿ ಪೊಲೀಸರು ಭಾನುವಾರ ಬಿಡುಗಡೆ ಮಾಡಿದ್ದಾರೆ.
ದೆಹಲಿ: ಸಿಜೆಪಿ (CJP) ಮುಖ್ಯಸ್ಥ ಅಭಿಜಿತ್ ದೀಪ್ಕೆ (Abhijeet Dipke) ರಿಲೀಸ್ ಆಗಿದ್ದಾರೆ. ನಿನ್ನೆ ಸಿಜೆಪಿ ನೇತೃತ್ವದಲ್ಲಿ ದೆಹಲಿಯಲ್ಲಿ (Delhi Protest) ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅಭಿಜಿತ್ ದೀಪ್ಕೆ ಭಾಗಿಯಾಗಲು ತೆರಳುತ್ತಿದ್ದರು. ಆದರೆ ದೆಹಲಿಗೆ ವಿಮಾನದಲ್ಲಿ ಬಂದಿಳಿಯುತ್ತಿದ್ದಂತೆ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದು, ಇಂದು ಕೋರ್ಟ್ಗೆ ಹಾಜರುಪಡಿಸಿ, ಬಳಿಕ ರಿಲೀಸ್ ಮಾಡಿದ್ದಾರೆ. ಅತ್ತ ಅಭಿಜಿತ್ ದೀಪ್ಕೆ ಅಜ್ಜಿ ಸಾವಿತ್ರಿಬಾಯಿ ದೀಪ್ಕೆ (Savitribai Dipke) ನಿಧನರಾಗಿದ್ದಾರೆ. ಅಜ್ಜಿಯ ನಿಧನದ ಸುದ್ದಿಯನ್ನೇ ಅಭಿಜಿತ್ ದೀಪ್ಕೆಗೆ ತಿಳಿಸಿಲ್ಲ ಅಂತ ಅವರ ತಾಯಿ ಆರೋಪಿಸಿದ್ದರು. ಆದರೆ ಅಭಿಜಿತ್ ದೀಪ್ಕೆ ತಾಯಿ ಆರೋಪ ಸುಳ್ಳು ಎಂದಿರುವ ದೆಹಲಿ ಪೊಲೀಸರು, ಅದಕ್ಕೆ ಸಂಬಂಧಿಸಿದ ವಿಡಿಯೋ ರಿಲೀಸ್ ಮಾಡಿದ್ದಾರೆ.
ದೆಹಲಿಯಲ್ಲಿ ಬಂಧನದಲ್ಲಿದ್ದಾಗ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಅಜ್ಜಿಯ ಸಾವಿನ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡುತ್ತಿರುವ ವಿಡಿಯೋವನ್ನು ದೆಹಲಿ ಪೊಲೀಸರು ಭಾನುವಾರ ಬಿಡುಗಡೆ ಮಾಡಿದ್ದಾರೆ. ಅಭಿಜಿತ್ ದೀಪ್ಕೆ ಅವರಿಗೆ ಅವರ ಅಜ್ಜಿ ಸಾವಿತ್ರಿಬಾಯಿ ದೀಪ್ಕೆ ಸಾವು ಮತ್ತು ಅಂತ್ಯಕ್ರಿಯೆಯ ಸಮಯದ ಬಗ್ಗೆ ತಿಳಿಸಲಾಗಿದ್ದು, ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಮಹಾರಾಷ್ಟ್ರದಲ್ಲಿರುವ ಅವರ ಊರಿಗೆ ಪ್ರಯಾಣಿಸಲು ಸಹಾಯ ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ನೀವು ಅಜ್ಜಿ ಅಂತ್ಯಕ್ರಿಯೆಗೆ ಹೋಗುತ್ತೀರಿ ಅಂತ ನಿರ್ಧಾರ ಮಾಡಿದ್ರೆ ವಿಮಾನ, ಬಸ್ ಅಥವಾ ರೈಲು ವ್ಯವಸ್ಥೆ ಮಾಡಿಕೊಡುತ್ತೇವೆ. ಮನೆಯವರೊಂದಿಗೆ ಫೋನ್ನಲ್ಲಿ ಮಾತನಾಡೋದಿದ್ದರೆ ಅದಕ್ಕೂ ವ್ಯವಸ್ಥೆ ಮಾಡುತ್ತೇವೆ ಅಂತ ದೆಹಲಿ ಪೊಲೀಸ್ ಅಧಿಕಾರಿಗಳು ಹೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈ ವಿಡಿಯೋ ಬಿಡುಗಡೆ ಮಾಡಿರುವ ಪೊಲೀಸ್ ಅಧಿಕಾರಿ ನೇಹಾ ಯಾದವ್, ಪೊಲೀಸ್ ಅಧಿಕಾರಿಗಳು ದೀಪ್ಕೆ ಅಜ್ಜಿಯ ಸಾವಿನ ಬಗ್ಗೆ ಮಾಹಿತಿ ಪಡೆದ ಕೂಡಲೇ ಅವರನ್ನು ಸಂಪರ್ಕಿಸಿ, ಅವರ ಹೆತ್ತವರೊಂದಿಗೆ ಮಾತನಾಡಲು ಬಯಸುತ್ತೀರಾ ಎಂದು ಪದೇ ಪದೇ ಕೇಳಿದರು. ಪೊಲೀಸರು ನೀಡಿದ ಸಹಾಯವನ್ನು ಅವರು ನಿರಾಕರಿಸಿದರು ಎಂದು ಅವರು ಹೇಳಿದ್ದಾರೆ.
#WATCH | Video released by @DelhiPolice
Cops informed Abhijeet Dipke about passing away of his grandmother and asking him if he wants to speak to his parents. Dipke denied speaking to them.#AbhijeetDipke #DelhiPolice #CJPProtest #CJP https://t.co/bikhLp4ZWl
— DD News (@DDNewslive) October 11, 2026
ಬಾಟಲಿಯಲ್ಲಿ ನೀರು ಕೊಟ್ಟು ಪೊಲೀಸ್ ಅಧಿಕಾರಿಗಳು ಅಭಿಜಿತ್ ದೀಪ್ಕೆ ಅವರನ್ನು ಸಂತೈಸಿದ್ದಾರೆ. ಪೊಲೀಸರು ದೀಪ್ಕೆಗೆ ಅವರ ಅಜ್ಜಿಯ ನಿಧನದ ಬಗ್ಗೆ ತಿಳಿಸಿ, ಹೋಗಲು ಅವಕಾಶ ನೀಡಿದಾಗ, ಅವರು “ನಾನು ಇಲ್ಲೇ ಇರುತ್ತೇನೆ” ಎಂದು ಹೇಳಿದ್ದಾರೆ.
#WATCH | Delhi | DCP Neha Yadav says, “As soon as the Delhi Police received information about the passing away of Cockroach Janta Party (CJP) Founder Abhijeet Dipke’s grandmother, officers approached him to convey this sad news and offered all possible assistance. They sensitively asked if he needed help with flights, phone calls, or anything else. They repeatedly asked if he wished to speak to his parents, but he declined…Regarding CJP, their past conduct showed a failure to adhere to previously given undertakings and local directives. When permission was granted previously, they did not abide by the law; the crowd they mobilized engaged in heavy stone-pelting, arson, and violence, causing significant damage to public property. Permission for the proposed sit-in protest at Janpath was denied due to the failure to follow prescribed procedures, a history of non-compliance with laws and guidelines, and the prevailing security and law-and-order situation. To ensure Delhi’s security and protect the lives and property of its citizens, Section 133 BNSS was imposed in several areas of the city, prohibiting any form of gathering or protest. Abhijeet Dipke and two of their associates were detained on October 10 in connection with a call for a protest at Janpath as permission for the demonstration had not been granted”
— ANI (@ANI) October 11, 2026
ದೀಪ್ಕೆ ಅವರ ತಾಯಿ ಅನಿತಾ ದೀಪ್ಕೆ ಅವರು ತಮ್ಮ ಮಗನಿಗೆ ಅಜ್ಜಿ ಸಾವಿನ ಬಗ್ಗೆ ತಿಳಿಸಲಾಗಿದೆಯೇ ಎಂಬ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ. ದೀಪ್ಕೆ ಕುಟುಂಬವು ಆತನೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗಲಿಲ್ಲ ಮತ್ತು ಅವನು ಹಿಂತಿರುಗುವವರೆಗೆ ಅಂತ್ಯಕ್ರಿಯೆ ನಡೆಸೋದಿಲ್ಲ ಅಂತ ಅನಿತಾ ಹೇಳಿದ್ದಾರೆ. ಇದರ ಬೆನ್ನಲ್ಲೇ ದೆಹಲಿ ಪೊಲೀಸರು ಈ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ಅಭಿಜಿತ್ ದೀಪ್ಕೆ ಅವರ ಅಜ್ಜಿಯ ಸಾವಿನ ಬಗ್ಗೆ ಮತ್ತು ನಿಗದಿತ ಅಂತ್ಯಕ್ರಿಯೆಯ ಬಗ್ಗೆ ತಿಳಿಸಲಾಗಿತ್ತು ಎಂದು ಪೊಲೀಸರು ವಾದಿಸಿದ್ದಾರೆ. ಮಾನವೀಯ ಆಧಾರದ ಮೇಲೆ ಅವರಿಗೆ ಮನೆಗೆ ಪ್ರಯಾಣಿಸಲು ಸಹಾಯವನ್ನು ಸಹ ನೀಡಲಾಯಿತು ಎಂದು ಹೇಳಿದ್ದಾರೆ.
ದೀಪ್ಕೆ ಅವರ ಅಜ್ಜಿ, 85 ವರ್ಷದ ಸಾವಿತ್ರಿಬಾಯಿ ಶಂಕರರಾವ್ ದೀಪ್ಕೆ, ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಸಂತುಕ್ ಪಿಂಪ್ರಿ ಗ್ರಾಮದಲ್ಲಿರುವ ತಮ್ಮ ಮನೆಯಲ್ಲಿ ಶನಿವಾರ ಬೆಳಿಗ್ಗೆ 11.30 ರ ಸುಮಾರಿಗೆ ನಿಧನರಾದರು. ಅವರು ವಯೋಸಹಜ ಆರೋಗ್ಯ ಸಮಸ್ಯೆಗಳು ಮತ್ತು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ. ಅವರ ಅಂತ್ಯಕ್ರಿಯೆಯನ್ನು ಭಾನುವಾರ ಬೆಳಿಗ್ಗೆ 10 ಗಂಟೆಗೆ ನಿಗದಿಪಡಿಸಲಾಗಿತ್ತು.














