Last Updated:
ಸಿಟಿ ಲೈಟ್ಸ್ ಚಿತ್ರ ಇನ್ನು ಥಿಯೇಟರ್ ಅಲ್ಲಿದೆ. ಇನ್ನು ಎರಡು ದಿನ ಕಳೆದರೆ ಆಯಿತು. ಈ ಚಿತ್ರ 25 ದಿನ ಪೂರೈಸುತ್ತದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ದುನಿಯಾ ವಿಜಯ್ (Duniya Vijay) ಅವರ ಸಿಟಿ ಲೈಟ್ಸ್ (City Lights) ಇನ್ನೂ ಥಿಯೇಟರ್ ಅಲ್ಲಿದೆ. ಸೆಪ್ಟೆಂಬರ್-18 ರಂದು ಇದು ತೆರೆ ಕಂಡಿತ್ತು. ಈ ಲೆಕ್ಕದಂತೆ ಇನ್ನು ಎರಡ್ಮೂರು ದಿನಗಳು ಕಳೆದರೆ ಆಯಿತು. ಈ ಚಿತ್ರ 25 ದಿನ ಪೂರೈಸುತ್ತದೆ. ಪ್ರೇಮದ ಊರಲಿ (Premada Oorali) ಸಿನಿಮಾ ಎಲ್ಲೆಡೆ ಇದೆ. ಶೋಗಳು ಜಾಸ್ತಿ ಆಗಿವೆ. ಆದರೂ ಸಿಟಿ ಲೈಟ್ಸ್ (City Lights) ತನ್ನ ಖದರ್ ಉಳಿಸಿಕೊಂಡಿದೆ. ರಾಜ್ಯದ ಸುಮಾರು 30 ಥಿಯೇಟರ್ ಅಲ್ಲಿ ಇದು ಪ್ರದರ್ಶನ ಕಾಣುತ್ತಿದೆ. ಇಲ್ಲಿ ಇದು 25 ದಿನ ಪೂರೈಸುತ್ತಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ಸಿಟಿ ಲೈಟ್ಸ್ 25 ದಿನ ಪೂರೈಸ್ತಾ ಇದೆ
(ಚಿತ್ರ ಕೃಪೆ: ಮೊನಿಷಾ ವಿಜಯ್ ಕುಮಾರ್ ಇನ್ಸ್ಟಾಗ್ರಾಮ್)
ಕನ್ನಡದಲ್ಲಿ ಇತ್ತೀಚಿಗೆ 50 ದಿನ ಪೂರೈಸಿದ ಚಿತ್ರ ಒಂದು ಇದೆ. ಅದು ಅಯೋಗ್ಯ-2 ಸಿನಿಮಾನೇ ಆಗಿದೆ. ಈ ಸಿನಿಮಾ ಆದ್ಮೇಲೆ ಈಗ ಸಿಟಿ ಲೈಟ್ಸ್ 25 ದಿನ ಪೂರ್ಣಗೊಳಿಸುತ್ತಿದೆ.
ಈ ಚಿತ್ರದಲ್ಲಿ ಬೆಂಗಳೂರಿನ ಮೆಜೆಸ್ಟಿಕ್ ಕತೆ ಹೇಳಿದ್ದರು. ಹಾಗೆ ವೇಶ್ಯಾವಾಟಿಕೆಯ ದಂಧೆಯ ಕರಾವಳಿ ಮುಖವನ್ನು ಬಿಚ್ಚಿಟ್ಟಿದ್ದರು.
ನವ ನಟ ಪುನೀತ್ ಕುಮಾರ್ ಈ ಚಿತ್ರದಲ್ಲಿ ವಿಲನ್ ರೋಲ್ ಮಾಡಿದ್ದಾರೆ. ಇವರ ಅಭಿನಯಕ್ಕೂ ಉತ್ತಮ ಪ್ರತಿಕ್ರಿಯೆ ಬಂದಿವೆ.
ಸೆಪ್ಟೆಂಬರ್-18 ರಿಲೀಸ್
(ಚಿತ್ರ ಕೃಪೆ: ಮೊನಿಷಾ ವಿಜಯ್ ಕುಮಾರ್ ಇನ್ಸ್ಟಾಗ್ರಾಮ್)
ದುನಿಯಾ ವಿಜಯ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಜನ ಈ ಚಿತ್ರವನ್ನ ಸ್ವೀಕರಿಸಿದ್ದಾರೆ. ಹಾಗಾಗಿಯೆ ದುನಿಯಾ ವಿಜಯ್ ಅವರನ್ನ ಹ್ಯಾಟ್ರಿಕ್ ಹಿಟ್ ಡೈರೆಕ್ಟರ್ ಅಂತಲೂ ಬಣ್ಣಿಸಬಹುದು.
ಈ ಚಿತ್ರಕ್ಕೂ ಮುಂಚೆ ಭೀಮ ಮತ್ತು ಸಲಗ ಸಿನಿಮಾ ಮಾಡಿದ್ದರು. ಈ ಸಿನಿಮಾಗಳು ಹಿಟ್ ಆಗಿದ್ದವು. ಸಿಟಿ ಲೈಟ್ಸ್ ಸಹ ಜನರ ಹೃದಯ ಗೆದ್ದಿದೆ.
ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಈ ಹಿಂದಿನ ಭೀಮ ಹಾಗೂ ಸಲಗ ರೀತಿನೇ ಇಲ್ಲೂ ಒಳ್ಳೆ ಹಾಡುಗಳೇ ಇವೆ. ಈ ಹಾಡುಗಳನ್ನು ಜನ ಮೆಚ್ಚಿಕೊಂಡಿದ್ದಾರೆ.
ಹಾಗೆ ಸಿಟಿ ಲೈಟ್ಸ್ ಸಿನಿಮಾ ತನ್ನ ಓಟವನ್ನ ಮುಂದುರೆಸಿದೆ. 30 ಥಿಯೇಟರ್ ಅಲ್ಲಿ ಈ ಚಿತ್ರ ಪ್ರದರ್ಶನ ಆಗುತ್ತಿದೆ. 25 ದಿನವನ್ನು ಇದು ಪೂರೈಸುತ್ತಿದೆ.
ಪ್ರೇಮದ ಊರಲಿ, ಬೇಲ್ ಚಿತ್ರಕ್ಕೂ ಮುಂಚೆ ಈ ಸಿಟಿ ಲೈಟ್ಸ್ ಚಿತ್ರ ಜನರನ್ನ ರಂಜಿಸಿದೆ. ಗೆಲುವಿನ ನಗೆ ಬೀರಿದೆ ಅಂತಲೂ ಹೇಳಬಹುದು.














