Last Updated:
ಬಿಗ್ ಬಾಸ್ ಮನೆಗೆ ಮೂರು ಜನ ವೈಲ್ಡ್ ಕಾರ್ಡ್ ಮೂಲಕ ಹೋಗಿದ್ದಾರೆ. ಇವರ ಆಟ ಚೆನ್ನಾಗಿದಿಯೇ? ಇಡೀ ಆಟವನ್ನ ಇವರು ಬದಲಿಸಿ ಬಿಟ್ಟರೇ? ಮನರಂಜನೆ ಕೊಡ್ತೀನಿ ಅಂತ ಹೋದವರು ಏನ್ ಮಾಡ್ತಿದ್ದಾರೆ? ಈ ಎಲ್ಲ ಪ್ರಶ್ನೆಗಳನ್ನ ಕಿಚ್ಚ ಸುದೀಪ್ ಕೇಳಿದ್ದಾರೆ. ಇವರ ಪ್ರಶ್ನೆಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ಕಳೆದ ವಾರ ಮೂರು ಜನ ವೈಲ್ಡ್ ಕಾರ್ಡ್ (Wild Card) ಮೂಲಕ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಕಂಪ್ಲೀಟ್ ಮನರಂಜನೆ ಕೊಡ್ತೀವಿ ಅಂತಲೇ ಹೋಗಿದ್ದಾರೆ. ಆದರೆ, ಇವರು ಆ ಕೆಲಸ ಮಾಡಿದರೇ? ಆಟವನ್ನ ಬದಲಿಸುತ್ತೇನೆ ಅಂದವರನ್ನ ಆಟವೇ ಬದಲಿಸಿ ಬಿಡ್ತಾ? ಈ ಪ್ರಶ್ನೆಯನ್ನೆ ಸುದೀಪ್ (Sudeepa) ಕೇಳಿದ್ದಾರೆ. ಈ ಮೂಲಕ ಕಿಚ್ಚನ (Kichcha) ಪಂಚಾಯ್ತಿ ಬಗ್ಗೆ ಈಗೊಂದಷ್ಟು ಕುತೂಹಲ ಮೂಡಿಸಿದ್ದಾರೆ. ಸುದೀಪ್ ಕ್ಲಾಸ್ (Sudeepa Class) ಇವರಿಗೇನೆ ಅನ್ನುವ ಹಾಗೆ ಮಾತನಾಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ದೊಡ್ಮನೆಯ ಆಟವೇ ಹಾಗೆ ನೋಡಿ. ಅದು ಎಂತವರನ್ನ ಬದಲಿಸಿ ಬಿಡುತ್ತದೆ. ಈ ಸೀಸನ್ ಅಲ್ಲು ಹಾಗೆ ಆದಂತೆ ಇದೆ. ಆಟವನ್ನ ಚೇಂಜ್ ಮಾಡ್ತೀನಿ ಅಂತ ಹೋದವರು ಬದಲಾಗಿದ್ದಾರೆ.
ಆಟವೇ ಇವರನ್ನ ಬದಲಿಸಿತೇ
(ಚಿತ್ರ ಕೃಪೆ: ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್)
ಈ ಕಾರಣಕ್ಕೇನೆ ಸುದೀಪ್ ಈ ಪ್ರಶ್ನೆ ಕೇಳಿದ್ದಾರೆ. ಆಟ ಬದಲಿಸ್ತೀನಿ ಅಂದವರು ಬದಲಾದರೆ? ಆಟವೇ ಇವರನ್ನ ಬದಲಿಸಿ ಬಿಡ್ತೇ ಅಂತಲೇ ಕಿಚ್ಚನ ಪಂಚಾಯ್ತಿಯಲ್ಲಿ ಪ್ರಶ್ನೆ ಮಾಡಿದ್ದಾರೆ.
ಈ ಶೋದ ರನ್ನರಪ್ ಕೂಡ ಇವರಾಗಿದ್ದರು. ಆದರೆ, ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರವೇ ಕಳಪೆ ಆಗಿದ್ದಾರೆ. ಜೈಲಿಗೂ ಹೋಗಿ ಬಂದಿದ್ದಾರೆ. ಹಾಗಾಗಿ ಇವರನ್ನ ಆಟವೇ ಬದಲಿಸಿತೇ ಅನ್ನುವ ಪ್ರಶ್ನೆನೂ ಇದೆ.
ಗಿಚ್ಚ ಗಿಲಿ ಗಿಲಿ ಪ್ರಶಾಂತ್ ಒಂದು ಮಾತು ಹೇಳಿದ್ದರು. ಮನೆಯವರು ಏನೇ ಹೇಳಿದರೂ ಅಷ್ಟೇನೆ ಸರಿನೇ. ನಾನು ಅದರ ಬಗ್ಗೆ ಯೋಚನೆ ಮಾಡೋದಿಲ್ಲ.
ಮನೆ ಒಳಗೆ ಹೋಗಿ ಕಂಪ್ಲೀಟ್ ಮನರಂಜನೆ ಕೊಡ್ತೀನಿ. ಅದನ್ನ ಕೊಡಲಿಕ್ಕೆ ಒಳಗೆ ಹೋಗ್ತೀನಿ ಅಂತಲೇ ಹೇಳಿದ್ದರು. ಆದರೆ, ಅದ್ಯಾಕೋ ಪ್ರಶಾಂತ್ ಡಲ್ ಹೊಡೆದಂತೆ ಇದೆ. ಇವರ ಮಾತುಗಳಂತೆ ಇವರಿಂದ ಇಲ್ಲಿ ಮನರಂಜನೆ ಏನು ಸಿಕ್ತಿಲ್ಲ ಅಂತಲೂ ಫೀಲ್ ಆಗುತ್ತದೆ.
ನಟಿ ಸೋನಿಕಾ ಗೌಡ ಜೋರಾಗಿಯೇ ಇದ್ದಾರೆ. ಒಂದು ಟಾಸ್ಕ್ ಅಲ್ಲಿ ಗಾನವಿ ಜೊತೆಗೆ ಕಿತ್ತಾಡಿರೋದು ಇದೆ. ಆಗಲೇ ಇವರೆಷ್ಟು ಜೋರು ಅನ್ನೋದು ತಿಳಿದಿದೆ.
ಗಾನವಿ ಗೌಡ ಬದಲಾದರೆ?
(ಚಿತ್ರ ಕೃಪೆ: ಕಲರ್ಸ್ ಕನ್ನಡ ಇನ್ಸ್ಟಾಗ್ರಾಮ್)
ಆದರೆ, ಆಟ ಅಂತ ಬಂದಾಗ ಏನು ಕತೆ ಅನ್ನುವ ಪ್ರಶ್ನೆನೂ ಇದೆ. ಒಟ್ಟಾರೆ, ಆಟವನ್ನ ಚೇಂಜ್ ಮಾಡ್ತೀವಿ ಅಂತ ವೈಲ್ಡ್ ಕಾರ್ಡ್ ಮೂಲಕ ಹೋದ ಸ್ಪರ್ಧಿಗಳು ಏನು ಮಾಡಿದರು. ಈ ಅರ್ಥ ಬರುವ ರೀತಿಯಲ್ಲಿಯೇ ಸುದೀಪ್ ಪ್ರಶ್ನೆ ಕೇಳಿದ್ದಾರೆ.
ಕಿಚ್ಚ ಸುದೀಪ್ ತಮ್ಮ ಪಂಚಾಯ್ತಿಯಲ್ಲಿ ಯಾರಿಗೆ ಬುದ್ಧಿ ಹೇಳುತ್ತಾರೆ. ಮತ್ಯಾರಿಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಇನ್ಯಾರಿಗೆ ಚಪ್ಪಾಳೆ ಕೊಡ್ತಾರೆ ಅನ್ನುವ ಕುತೂಹಲ ಇದೆ.
ಸೆಕೆಂಡ್ ಚಾನ್ಸ್ ಪಡೆದು ಮನೆ ಒಳಗೆ ಹೋದ ತಾಂಡವ್ ರಾಮ್ ಅವರಿಗೆ ಸುದೀಪ್ ಏನು ಹೇಳ್ತಾರೆ. ಮನೆಯಲ್ಲಿ ಇವರ ಆಟ ಚೆನ್ನಾಗಿದಿಯಾ? ಇವರಿಗೆ ಪ್ರಶ್ನೆಗಳು ಇರುತ್ತಾ? ಈ ಎಲ್ಲ ಕುತೂಹಲವು ಇದೆ ಅಂತ ಹೇಳಬಹುದು.














