Kerala Lottery Winner: ₹30 ಕೋಟಿ ಮೊದಲ ಬಹುಮಾನ ಪಡೆದವರು ಯಾರು? ಆ ಅದೃಷ್ಟಶಾಲಿ ಇವರೇನಾ? | ವ್ಯಾಪಾರ ಸುದ್ದಿ | ACTPnews

ಕೇರಳ ಲಾಟರಿ


Last Updated:

Kerala Lottery Winner: ಇತಿಹಾಸದಲ್ಲೇ ಮೊದಲ ಬಾರಿಗೆ 30 ಕೋಟಿ ರೂಪಾಯಿ ಮೊದಲ ಬಹುಮಾನವನ್ನು ಘೋಷಿಸಲಾಗಿತ್ತು. TL 360615 ಸಂಖ್ಯೆಯ ಟಿಕೆಟ್ ಈ ಜಾಕ್‌ಪಾಟ್ ಗೆದ್ದಿದೆ. ಆದರೆ ಆ 30 ಕೋಟಿಗಳ ಜಾಕ್‌ಪಾಟ್ ತನ್ನದಾಗಿಸಿಕೊಂಡ ಅದೃಷ್ಟಶಾಲಿ ಯಾರು ಎಂಬ ಪ್ರಶ್ನೆ ಇದೀಗ ಎದ್ದಿದೆ!

ಕೇರಳ ಲಾಟರಿ
ಕೇರಳ ಲಾಟರಿ

ಕೇರಳ ರಾಜ್ಯ ಲಾಟರಿ (Kerala State Lotter) ಇಲಾಖೆಯ ತಿರುವೋಣಂ ಬಂಪರ್ (BR-111) ಡ್ರಾ (Thiruvonam Bumper draw)ಸೆಪ್ಟೆಂಬರ್ 26, 2026ರಂದು ತಿರುವನಂತಪುರಂನ (Thiruvananthapuram) ಗೋರ್ಕಿ ಭವನದಲ್ಲಿ (Gorky Bhavan) ನಡೆಯಿತು. ಇತಿಹಾಸದಲ್ಲೇ ಮೊದಲ ಬಾರಿಗೆ 30 ಕೋಟಿ ರೂಪಾಯಿ ಮೊದಲ ಬಹುಮಾನವನ್ನು ಘೋಷಿಸಲಾಗಿತ್ತು. TL 360615 ಸಂಖ್ಯೆಯ ಟಿಕೆಟ್ ಈ ಜಾಕ್‌ಪಾಟ್ ಗೆದ್ದಿದೆ. ಆದರೆ ಆ 30 ಕೋಟಿಗಳ ಜಾಕ್‌ಪಾಟ್ ತನ್ನದಾಗಿಸಿಕೊಂಡ ಅದೃಷ್ಟಶಾಲಿ (Winner) ಯಾರು ಎಂಬ ಪ್ರಶ್ನೆ ಇದೀಗ ಎದ್ದಿದೆ!

TL 360615 ನಂಬರಿನ ಲಾಟರಿಗೆ 30 ಕೋಟಿ ರೂಪಾಯಿ ಮೊದಲ ಬಹುಮಾನ

TL 360615 ನಂಬರಿನ ಲಾಟರಿ ಟಿಕೆಟ್‌ಗೆ 30 ಕೋಟಿ ರೂಪಾಯಿಗಳ ಮೊದಲ ಬಹುಮಾನ ಬಂದಿದೆ. ಕಣ್ಣೂರು ಜಿಲ್ಲೆಯ ಚಕ್ಕರಕ್ಕಲ್‌ನ ಮುತ್ತು ಲಾಟರಿ ಏಜೆನ್ಸಿ ಮಾಲೀಕ ಅನೀಶ್ ಎವಿ ಎಂಬುವರು (ಏಜೆನ್ಸಿ ಸಂಖ್ಯೆ C 3789) ಮೂಲಕ ಮೊದಲ ಬಹುಮಾನ ಪಡೆದ ಲಾಟರಿ ಮಾರಾಟವಾಗಿತ್ತು. ನಂತರ ತಾಳಿಪರಂಬದ ತಂಬುರಾನ್ ಲಾಟರಿ (ಪಿ ವಿ ವತ್ಸರಾಜ್) ಮೂಲಕ ವಡಕ್ಕಂಚೇರಿ/ತಾಳಿಪರಂಬ ಪ್ರದೇಶದ ಚಿಲ್ಲರೆ ಮಾರಾಟಗಾರ ಸುಜಿತ್‌ಗೆ ತಲುಪಿ, ಅವರೇ ಅಂತಿಮ ಖರೀದಿದಾರರಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.

30 ಕೋಟಿ ರೂಪಾಯಿ ಪಡೆದ ಅದೃಷ್ಟಶಾಲಿ ಯಾರು?

ಆದರೆ ಡ್ರಾ ನಡೆದ ನಂತರವೂ 30 ಕೋಟಿ ರೂಪಾಯಿ ಮೊದಲ ಬಹುಮಾನದ ವಿಜೇತರ ಗುರುತು ಬಹಿರಂಗವಾಗಿಲ್ಲ. ಸುತ್ತಮುತ್ತಲಿನ ಸರಣಿ ಟಿಕೆಟ್‌ಗಳನ್ನು ಪಡೆದರನ್ನು ಪತ್ತೆಹಚ್ಚಿದ್ದರೂ, TL 360615 ನಂಬರಿನ ಮೊದಲ ಬಹುಮಾನ ಪಡೆದ ಟಿಕೆಟ್ ಖರೀದಿಸಿದವರು ಯಾರೂ ಇದುವರೆಗೂ ಬಹುಮಾನಕ್ಕೆ ಹಕ್ಕು ಸಾಧಿಸಿ ಬಂದಿಲ್ಲ. ಲಾಟರಿ ನಿಯಮಾವಳಿ ಪ್ರಕಾರ ವಿಜೇತರು ನಿಗದಿತ ಅವಧಿಯೊಳಗೆ ದಾಖಲೆಗಳೊಂದಿಗೆ ಬಹುಮಾನ ಪಡೆಯಬಹುದು. ಕಣ್ಣೂರು ನಿವಾಸಿಯಾಗಿರುವ ಸಾಧ್ಯತೆ ಹೆಚ್ಚು ಎಂದು ಮಾರಾಟಗಾರರು ಹೇಳುತ್ತಾರೆ.

ಸುಮಾರು 90 ಲಕ್ಷ ಟಿಕೆಟ್‌ಗಳು ಮಾರಾಟ

ಟಿಕೆಟ್ ಬೆಲೆ 500 ರೂಪಾಯಿ. ಸುಮಾರು 90 ಲಕ್ಷ ಟಿಕೆಟ್‌ಗಳನ್ನು ಮುದ್ರಿಸಿದ್ದು ಬಹುತೇಕ ಮಾರಾಟವಾಗಿತ್ತು. ಸರಣಿಗಳು TA, TB, TC, TD, TE, TG, TH, TJ, TK, TL. ಸಮಾಧಾನಕರ ಬಹುಮಾನವಾಗಿ ಅದೇ ಸಂಖ್ಯೆಯ ಉಳಿದ ಒಂಬತ್ತು ಸರಣಿ ಟಿಕೆಟ್‌ಗಳಿಗೆ ತಲಾ 5 ಲಕ್ಷ ರೂಪಾಯಿ ಘೋಷಿಸಲಾಗಿತ್ತು. ಎರಡನೇ ಬಹುಮಾನ ತಲಾ 1 ಕೋಟಿ ರೂಪಾಯಿಯನ್ನು 20 ವಿಜೇತರಿಗೆ (ಒಟ್ಟು 20 ಕೋಟಿ) ಹಂಚಲಾಗಿತ್ತು. ಮೂರನೇ ಬಹುಮಾನ ತಲಾ 25 ಲಕ್ಷವನ್ನು 20 ವಿಜೇತರಿಗೆ ಹಂಚಲಾಗಿತ್ತು. ನಾಲ್ಕನೇ ಬಹುಮಾನ ತಲಾ 5 ಲಕ್ಷವನ್ನು 10 ವಿಜೇತರಿಗೆ, ಐದನೇ ಬಹುಮಾನವಾಗಿ ತಲಾ 2 ಲಕ್ಷವನ್ನು 10 ವಿಜೇತರಿಗೆ, ಆರನೇಯಿಂದ ಒಂಬತ್ತನೇವರೆಗೆ 5,000, 2,000, 1,000 ಮತ್ತು 500 ರೂಪಾಯಿ ಬಹುಮಾನಗಳು ಲಕ್ಷಾಂತರ ಟಿಕೆಟ್‌ಗಳಿಗೆ ಲಭ್ಯವಾಗಿತ್ತು.

ಇದೇ ಮೊದಲಬಾರಿಗೆ 30 ಕೋಟಿ ರೂಪಾಯಿ ಬಹುಮಾನ

ಮೊದಲ ಬಹುಮಾನದ ಮೇಲೆ ಏಜೆಂಟ್ ಕಮಿಷನ್ ಸುಮಾರು 10 ಶೇಕಡಾ, ಆದಾಯ ತೆರಿಗೆ, ಸರ್ಚಾರ್ಜ್ ಮತ್ತು ಸೆಸ್ ಕಡಿತವಾಗುತ್ತದೆ. ಅಂದಾಜಿನಂತೆ 30 ಕೋಟಿ ರೂಪಾಯಿ ಮೊದಲ ಬಹುಮಾನಗ ವಿಜೇತರ ಕೈಗೆ ಸುಮಾರು 15.5ರಿಂದ 16.5 ಕೋಟಿ ರೂಪಾಯಿ ಬರುವ ನಿರೀಕ್ಷೆ ಇದೆ. ಕಳೆದ ವರ್ಷ 25 ಕೋಟಿ ಇದ್ದ ಮೊದಲ ಬಹುಮಾನವನ್ನು 5 ಕೋಟಿ ಹೆಚ್ಚಿಸಿ, ಈ ಬಾರಿ 30 ಕೋಟಿ ಘೋಷಿಸಲಾಗಿತ್ತು. ಇನ್ನು ಪಾಲಕ್ಕಾಡ್ ಜಿಲ್ಲೆಯಲ್ಲಿ ಅತಿ ಹೆಚ್ಚು ಟಿಕೆಟ್ ಮಾರಾಟವಾಗಿತ್ತು.

ಮೂಲ ಲಾಟರಿ ಟಿಕೆಟ್ ನೀಡಿದರೆ ಮಾತ್ರ ಬಹುಮಾನ

ಮೂಲಗಳ ಪ್ರಕಾರ 30 ಕೋಟಿ ರೂಪಾಯಿ ಬಂಪರ್ ಬಹುಮಾನ ಪಡೆದವರು ಯಾರು ಎಂಬ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ. ಆಟೋ ಚಾಲಕ ಮನು ಎಂಬಾತ ಅಂತ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಡಿದೆ. ಆದರೆ ಅದು ಅಧಿಕೃತವಾಗಿ ದೃಢಪಟ್ಟಿಲ್ಲ. ಪ್ರಥಮ ಬಹುಮಾನ ಪಡೆದ ಟಿಕೆಟ್‌ದಾರರು ಕೇರಳಂ ಲಾಟರಿ ಇಲಾಖೆಯ ನಿಯಮಾನುಸಾರ ಮೂಲ ಟಿಕೆಟ್ ಹಾಗೂ ಅಗತ್ಯ ಗುರುತಿನ ದಾಖಲೆಗಳೊಂದಿಗೆ ಬಹುಮಾನ ಮೊತ್ತವನ್ನು ಕ್ಲೇಮ್ ಮಾಡಬೇಕಾಗುತ್ತದೆ. ಬಹುಮಾನ ಮೊತ್ತಕ್ಕೆ ಅನ್ವಯವಾಗುವ ತೆರಿಗೆ ಹಾಗೂ ಇತರ ಕಡಿತಗಳ ಬಳಿಕ ವಿಜೇತರಿಗೆ ಹಣ ಪಾವತಿಯಾಗಲಿದೆ. ವಿಜೇತರು ಮುಂದೆ ಬಂದಾಗ ಅವರ ಹೆಸರು ಅಧಿಕೃತವಾಗಿ ತಿಳಿಯುವ ಸಾಧ್ಯತೆ ಇದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed