Last Updated:
Smit Machchhar: ರಿಯಲ್ ಹೀರೋ ಸ್ಮಿತ್ ಮಚ್ಚಾರ್ ನಗ್ತಿದ್ದಾರಂತೆ, ಮಾತನಾಡುತ್ತಿದ್ದಾರಂತೆ ಬೇಗನೆ ಗುಣಮುಖರಾಗುತ್ತಿದ್ದಾರಂತೆ. ಅವರ ಆರೋಗ್ಯದ ಅಪ್ಡೇಟ್ಸ್ ಹೊರಬೀಳುತ್ತಿದ್ದಂತೆ ಜನ ಸಮಾಧಾನದಿಂದ ನಿಟ್ಟುಸಿರುವ ಬಿಟ್ಟಿದ್ದಾರೆ.
ಯುಎಇಯಲ್ಲಿನ (UAE) ಭಾರತೀಯ ರಾಯಭಾರಿ ದೀಪಕ್ ಮಿತ್ತಲ್ ಇತ್ತೀಚೆಗೆ ಫ್ಲೈದುಬೈ (Fly Dubai) ವಿಮಾನ ಹಾಗೂ ಪ್ರಯಾಣಿಕರನ್ನು ತಮ್ಮ ಜೀವ ಪಣಕ್ಕಿಟ್ಟು ರಕ್ಷಿಸಿದ ರಿಯಲ್ ಹೀರೋ ಸ್ಮಿತ್ ಮಚ್ಚಾರ್ ಆರೋಗ್ಯ ವಿಚಾರಿಸಿದರು. “ಅವರು ಆರೋಗ್ಯವಂತರಾಗಿದ್ದಾರೆ. ಬೇಗ ಚೇತರಿಸಿಕೊಳ್ಳುತ್ತಿದ್ದಾರೆ” ಎಂದರು. ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Captain Smit Machchhar) ಅವರನ್ನು ಭೇಟಿಯಾಗಿ “ಧೈರ್ಯ ಹೇಳಿದೆವು” ಎಂದು ಹೇಳಿದರು.
ಬುಧವಾರ ದುಬೈನಿಂದ ಟೆಲ್ ಅವೀವ್‌ಗೆ ಪ್ರಯಾಣಿಸುತ್ತಿದ್ದ ಫ್ಲೈದುಬೈ ವಿಮಾನ FZ1073 ರ ಕಾಕ್‌ಪಿಟ್‌ನಲ್ಲಿ ಮಚ್ಚರ್ ಅವರನ್ನು ಅವರ ಕೋ ಪೈಲಟ್ ಇರಿದು ಗಂಭೀರವಾಗಿ ಗಾಯಗೊಳಿಸಿದರು. 174 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ವಾಯುವ್ಯ ಸೌದಿ ಅರೇಬಿಯಾದ ತಬೂಕ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು.
“ಕ್ಯಾಪ್ಟನ್ ಸ್ಮಿತ್ ಅವರನ್ನು ಭೇಟಿಯಾಗಿ ಅವರ ಆರೋಗ್ಯದ ಭರವಸೆ ಸಿಕ್ಕಿದೆ. ಯುಎಇ ಸರ್ಕಾರ ನೀಡಿದ ಬೆಂಬಲ ಮತ್ತು ವೈದ್ಯಕೀಯ ಆರೈಕೆಗಾಗಿ ಧನ್ಯವಾದಗಳು” ಎಂದು ಮಿತ್ತಲ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
“ಹಲವು ಜೀವಗಳನ್ನು ಉಳಿಸಲು ಮತ್ತು ದುರಂತವನ್ನು ತಪ್ಪಿಸಲು ಕ್ಯಾಪ್ಟನ್ ಸ್ಮಿತ್ ತೋರಿಸಿದ ಧೈರ್ಯದ ಬಗ್ಗೆ ನಮಗೆ ಹೆಮ್ಮೆ ಇದೆ” ಎಂದು ಅವರು ಎಕ್ಸ್‌ನಲ್ಲಿ ಮತ್ತೊಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಇದಕ್ಕೂ ಮೊದಲು ಅವರು ಪೈಲಟ್ ಕುಟುಂಬವನ್ನು ಭೇಟಿಯಾದರು. “ಭಾರತೀಯ ಹೀರೋ”ನ ಯೋಗಕ್ಷೇಮವನ್ನು ಖಾತ್ರಿಪಡಿಸಿಕೊಳ್ಳುವಲ್ಲಿ ಭಾರತ ಸರ್ಕಾರದ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು.
ಸೌದಿ ಅರೇಬಿಯಾದ ತಬೂಕ್ ನಗರದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ನಂತರ, ಮಚ್ಚರ್ ಅವರನ್ನು ಹೆಚ್ಚಿನ ವೈದ್ಯಕೀಯ ಆರೈಕೆಗಾಗಿ ಅಬುಧಾಬಿಗೆ ಸ್ಥಳಾಂತರಿಸಲಾಯಿತು. ಮಚ್ಚರ್ ಅವರ ಆರೋಗ್ಯ ಸ್ಥಿರವಾಗಿದ್ದು, ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮಿತ್ತಲ್ ಹೇಳಿದರು.
ಯುಎಇಯಲ್ಲಿ ಮಚ್ಚರ್ ಮತ್ತು ಅವರ ಕುಟುಂಬದೊಂದಿಗೆ ನಡೆಸಿದ ಭೇಟಿಯ ಸಮಯದಲ್ಲಿ, ಪೈಲಟ್ ಅವರ ನೈತಿಕ ಸ್ಥೈರ್ಯ ಸೂಪರ್ ಆಗಿದೆ ಎಂದು ತಿಳಿಯಿತು ಎಂದರು. “ಅವರು ಮಾತನಾಡುತ್ತಿದ್ದರು, ನಗುತ್ತಿದ್ದರು, ಇದು ನಮಗೆ ಮತ್ತು ಮುಖ್ಯವಾಗಿ ಅವರ ಕುಟುಂಬಕ್ಕೆ ದೊಡ್ಡ ಸಮಾಧಾನ ತಂದಿತು” ಎಂದು ಅವರು ಹೇಳಿದರು.
ಯುಎಇ ಅಧಿಕಾರಿಗಳಿಂದ ಬೆಂಬಲ ದೊರೆತಿದ್ದು, ಭಾರತೀಯ ರಾಯಭಾರ ಕಚೇರಿ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಭಾರತೀಯ ರಾಜತಾಂತ್ರಿಕರು ಹೇಳಿದರು. ಪ್ರತ್ಯೇಕವಾಗಿ, ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಗುರುವಾರ ರಾಯಭಾರಿ ಮಿತ್ತಲ್ ಅವರು ಕ್ಯಾಪ್ಟನ್ ಮಚ್ಚರ್ ಮತ್ತು ಅವರ ಕುಟುಂಬವನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದಾರೆ ಎಂದು ಹೇಳಿದರು.














