Last Updated:
ವಂದೇ ಭಾರತ್ ಎಕ್ಸ್ಪ್ರೆಸ್ ಮರ ತುಂಬಿದ ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ಡಿಕ್ಕಿಯಿಂದ ರೈಲು ಹಾನಿಗೊಳಗಾಗಿದೆ, ಆದರೆ ಯಾರಿಗೂ ಗಾಯಗಳಾಗಿಲ್ಲ. ರೈಲು ಸುಮಾರು 41 ನಿಮಿಷಗಳ ಕಾಲ ಸ್ಥಗಿತಗೊಂಡಿತ್ತು. ಈ ಘಟನೆ ರೈಲ್ವೆ ಹಳಿಗಳ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ವಂದೇ ಭಾರತ್ ಎಕ್ಸ್ಪ್ರೆಸ್ (Vande Bharat Express) ಮರ ತುಂಬಿದ ಟ್ರ್ಯಾಕ್ಟರ್ಗೆ (Tractor) ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಹಜಾರಿಬಾಗ್ನಲ್ಲಿ ಸಂಭವಿಸಬಹುದಾಗಿದ್ದ ಈ ದೊಡ್ಡ ರೈಲು ಅಪಘಾತವೊಂದು (Accident) ಕೂದಲೆಳೆ ಅಂತರದಲ್ಲಿ ತಪ್ಪಿದೆ. ರಾಂಚಿಯಿಂದ ಪಾಟ್ನಾಗೆ ಪ್ರಯಾಣಿಸುತ್ತಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ನಿನ್ನೆ ತಡರಾತ್ರಿ ಚಾರ್ಹಿ ಮತ್ತು ಬೇಸ್ ರೈಲು ನಿಲ್ದಾಣಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಮರ ತುಂಬಿದ ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದಿದೆ.














