ಸೂರ್ಪನಖಿ ಗ್ಲಾಮರಸ್
ಸೀತೆಯ ಪಾತ್ರವನ್ನ ಸೂರ್ಪನಖಿ ಪಾತ್ರಕ್ಕೆ ಹೋಲಿಸಿದರೆ, ಇಲ್ಲಿ ಸೂರ್ಪನಖಿನೆ ಚೆಂದ ಕಾಣಿಸ್ತಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಆ ರೀತಿನೇ ಹೆಚ್ಚು ಕಾಮೆಂಟ್ ಬರ್ತಿವೆ.
ರಾಮಾಯಣದಲ್ಲಿ ಅಭಿನಯಿಸಿರೋ ಕಲಾವಿದೆಯರು ಮಾಡ್ರನ್ ಆಗಿದ್ದಾರೆ. ಎಲ್ಲರ ಕಾಸ್ಟೂಮ್‌ಗಳು ತ್ರೇತಾಯುಗದಲ್ಲಿ ಧರಿಸೋ ರೀತಿ ಇಲ್ವೇ ಇಲ್ಲ.
ಹಾಗಾಗಿಯೇ ಎಲ್ಲರೂ ಮಾಡ್ರನ್ ಆಗಿಯೇ ಕಾಣಿಸುತ್ತಿದ್ದಾರೆ. ಇದು ಅದೆಷ್ಟು ಸರಿ ಅನ್ನುವ ಅರ್ಥದಲ್ಲಿಯೇ ಅನೇಕರು ಕಾಮೆಂಟ್ ಹೊಡೆದಿರೋದು ಇದೆ.
ಸೂರ್ಪಖಿ ಪಾತ್ರವನ್ನ ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ನಿರ್ವಹಿಸಿದ್ದಾರೆ. ಸೀತೆಯ ಪಾತ್ರದಲ್ಲಿ ನಟಿ ಸಾಯಿ ಪಲ್ಲವಿ ಅಭಿನಯಿಸಿದ್ದಾರೆ.
ಯಶ್ ಬಂದ ಬಳಿಕ ಆಯ್ಕೆ
ಲಾರಾ ದತ್ತ, ಸಾಯಿ ಪಲ್ಲವಿ, ರಕುಲ್ ಪ್ರೀತ್ ಸಿಂಗ್ ಸದ್ಯ ಈ ರಾಮಯಣ ಚಿತ್ರದ ಟ್ರೈಲರ್ ಮೂಲಕವೇ ಟ್ರೋಲ್ ಆಗುತ್ತಿದ್ದಾರೆ. ಹೆಚ್ಚು ಗಮನ ಕೂಡ ಸೆಳೆಯುತ್ತಿದ್ದಾರೆ. ಸೂರ್ಪನಖಿ ಸಖತ್ ಗ್ಲಾಮರಸ್ ಅನಿಸುತ್ತಾರೆ.
ರಾಮಾಯಣದ ಸೀತೆಯನ್ನ ಆಯ್ಕೆ ಮಾಡಿರೋದು ಯಾರು? ಈ ಒಂದು ಪ್ರಶ್ನೆನೂ ಬರುತ್ತದೆ. ಆದರೆ, ಇಲ್ಲಿ ಒಂದು ಇಂಟ್ರಸ್ಟಿಂಗ್ ವಿಷಯವೂ ಇದೆ.
ರಾಕಿಂಗ್ ಸ್ಟಾರ್ ಯಶ್ ಈ ಚಿತ್ರದಲ್ಲಿ ರಾವಣನ ಪಾತ್ರಧಾರಿ ಅಷ್ಟೆ ಅಲ್ಲ, ಈ ಸಿನಿಮಾದ ಒನ್ ಆಫ್ ದಿ ನಿರ್ಮಾಪಕರೂ ಆಗಿದ್ದಾರೆ. ಹಾಗಾಗಿಯೇ ಈ ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ಮೇಲೆ ಸಾಯಿ ಪಲ್ಲವಿ ಆಯ್ಕೆ ಅದರು ಅನ್ನುವ ಮಾತುಗಳು ಕೇಳಿ ಬಂದಿದ್ದವು ನೋಡಿ.
ಇನ್ನುಳಿದಂತೆ ರಾಮಾಯಣ ಚಿತ್ರದ ಟ್ರೈಲರ್ ಸುಮಾರು ಕಾರಣಕ್ಕೆ ಟ್ರೋಲ್ ಆಗುತ್ತಿದೆ. ಇಡೀ ರಾಮಾಯಣದ ಟ್ರೈಲರ್ ಅಲ್ಲಿ ಆಂಜನೇಯನ ಪಾತ್ರ ಯಾಕೆ ಇಲ್ಲ ಅನ್ನುವ ಪ್ರಶ್ನೆಯನ್ನು ಅನೇಕರು ಕೇಳಿದ್ದಾರೆ.
ಮಾಡ್ರನ್ ಆಗೋದ್ರು ಲೇಡೀಸ್
ರಾಮಾಯಣದ ಈ ಚಿತ್ರದಲ್ಲಿ ಆಂಜನೇಯನ ಪಾತ್ರವೂ ಅಷ್ಟೆ ಮುಖ್ಯವಾಗಿದೆ. ಆದರೆ, ಈ ರಾಮಾಯಣದ ಟ್ರೈಲರ್ ಅಲ್ಲಿ ಆಂಜನೇಯನ ಒಂದೇ ಒಂದು ದೃಶ್ಯವು ಇಲ್ಲ.
ಆದರೆ, ಈ ಒಂದು ಪಾತ್ರದ ವಿಚಾರವಾಗಿ ನಟ ಸನ್ನಿ ಡಿಯೋಲ್ ಮಾತನಾಡಿದ್ದರು. ಆಂಜನೇಯನ ಪಾತ್ರವನ್ನ ಈ ಚಿತ್ರದಲ್ಲಿ ಮಾಡುತ್ತಿದ್ದೇನೆ. ಆದರೆ, ನಾನು ಇನ್ನು ಕೆಲಸವನ್ನೆ ಶುರು ಮಾಡಿಲ್ಲ.
ಆದರೆ, ಸ್ವಲ್ಪ ಮಾತ್ರ ಮಾಡಿದ್ದೇನೆ. ಇನ್ನು ಸಾಕಷ್ಟಿದೆ ಅಂತಲೇ ಸನ್ನಿ ಡಿಯೋಲ್ ಹೇಳಿಕೊಂಡಿದ್ದರು. ದೆಹಲಿಯಲ್ಲಿ ನಡೆದ ಚಿತ್ರದ ಪ್ರಥಮ್ ಸಂಕಲ್ಪ ಕಾರ್ಯಕ್ರಮದಲ್ಲಿಯೇ ಈ ಒಂದು ಮಾತನ್ನ ಸನ್ನಿ ಡಿಯೋಲ್ ಹೇಳಿದ್ದರು ಅಂತಲೇ ಹೇಳಬಹುದು.













