ZIM vs IND: ಹೊಸ ಕೋಚ್ ಜೊತೆಗೆ ಜಿಂಬಾಬ್ವೆ ಪ್ರವಾಸಕ್ಕೆ ಹೊರಟ ಟೀಮ್ ಇಂಡಿಯಾ! ಗೆಲುವಿನ ನಿರೀಕ್ಷೆಯಲ್ಲಿ ಅಯ್ಯರ್ | ಕ್ರೀಡಾ ಸುದ್ದಿ | ACTPnews

ಟೀಮ್ ಇಂಡಿಯಾ


Last Updated:

ಭಾರತ ತಂಡವು ಇಂಗ್ಲೆಂಡ್ ಪ್ರವಾಸ ಮುಗಿಸಿದ ನಂತರ, ಜಿಂಬಾಬ್ವೆಯ ವಿರುದ್ಧ ಮೂರು ಟಿ20 ಪಂದ್ಯಗಳನ್ನು ಆಡಲಿದೆ. ಈ ಸರಣಿಗಾಗಿ ಬಿಸಿಸಿಐ ಈಗಾಗಲೇ ತಂಡವನ್ನು ಘೋಷಿಸಿದೆ. ಜುಲೈ 19ರ ಬೆಳಿಗ್ಗೆ ಟೀಮ್ ಇಂಡಿಯಾ ಜಿಂಬಾಬ್ವೆ ಪ್ರವಾಸಕ್ಕೆ ಹೊರಟಿತು.

ಟೀಮ್ ಇಂಡಿಯಾ
ಟೀಮ್ ಇಂಡಿಯಾ

ಮುಂದಿನ ವರ್ಷ ಭಾರತ ಕ್ರಿಕೆಟ್ ತಂಡಕ್ಕೆ ಬಹಳ ಬಿಡುವಿಲ್ಲದ ವಿದೇಶಿ ಪಂದ್ಯಗಳ ವೇಳಾಪಟ್ಟಿ ಇದೆ. ಇಂಗ್ಲೆಂಡ್ ಪ್ರವಾಸ ಮುಗಿದ ತಕ್ಷಣ, ಟೀಮ್ ಇಂಡಿಯಾ ಜಿಂಬಾಬ್ವೆಗೆ ಮೂರು ಟಿ20 ಪಂದ್ಯಗಳ ಸರಣಿಗೆ ಹೋಗಲಿದೆ. ಈ ಸರಣಿ ಜುಲೈ 23 ರಂದು ಪ್ರಾರಂಭವಾಗಿ ಜುಲೈ 26 ರಂದು ಮುಗಿಯಲಿದೆ. ಎಲ್ಲಾ ಮೂರು ಪಂದ್ಯಗಳೂ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿವೆ. ಬಿಸಿಸಿಐ ಈಗಾಗಲೇ ತಂಡವನ್ನು ಘೋಷಿಸಿದೆ. ಆದರೆ ಕೆಲವು ಪ್ರಮುಖ ಆಟಗಾರರನ್ನು ಹೊರಗಿಡಲಾಗಿದೆ. ಈ ಸರಣಿಯಲ್ಲಿ ದಿಗ್ಗಜ ಆಟಗಾರ ಭಾರತ ತಂಡದ ಹೆಡ್ ಕೋಚ್ ಆಗಿ ಸೇವೆ ಸಲ್ಲಿಸಲಿದ್ದಾರೆ. 

ಭಾರತ ತಂಡದ ಇಂಗ್ಲೆಂಡ್ ಪ್ರವಾಸವು ಜುಲೈ 19 ರಂದು ಮುಗಿಯಲಿದೆ. ಇದಾದ ನಂತರ ಜಿಂಬಾಬ್ವೆ ವಿರುದ್ಧ ಟಿ20 ಸರಣಿಯ ಮೊದಲ ಪಂದ್ಯ ಜುಲೈ 23 ರಿಂದ ಆರಂಭವಾಗಲಿದೆ. ಈ ಸರಣಿಗೆ ಪ್ರತ್ಯೇಕ ಹೆಡ್ ಕೋಚ್ ನೇಮಿಸದೆ, ಸಹಾಯಕ ಸಿಬ್ಬಂದಿಯೊಂದಿಗೆ ನಿರ್ವಹಿಸಲು ಬಿಸಿಸಿಐ ನಿರ್ಧರಿಸಿದೆ. ಆದ್ದರಿಂದ ವಿವಿಎಸ್ ಲಕ್ಷ್ಮಣ್ ಅವರು ಹಂಗಾಮಿ ಹೆಡ್ ಕೋಚ್ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ಇದು ಲಕ್ಷ್ಮಣ್ ಅವರಿಗೆ ಮೊದಲ ಬಾರಿಯಲ್ಲ. ರಾಹುಲ್ ದ್ರಾವಿಡ್ ಹೆಡ್ ಕೋಚ್ ಆಗಿದ್ದಾಗಲೂ ಕೆಲವು ಸರಣಿಗಳಲ್ಲಿ ಅವರು ಈ ಜವಾಬ್ದಾರಿ ನೋಡಿಕೊಂಡಿದ್ದರು. ಜಿಂಬಾಬ್ವೆ ಪ್ರವಾಸಕ್ಕೆ ಹೊರಡುವ ಮುನ್ನ ಬಿಸಿಸಿಐ ತನ್ನ ಸೋಶಿಯಲ್ ಮೀಡಿಯಾದಲ್ಲಿ ಕೆಲವು ಫೋಟೋಗಳನ್ನು ಹಾಕಿದೆ. ಅಲ್ಲಿ ಯುವ ಆಟಗಾರ ವೈಭವ್ ಸೂರ್ಯವಂಶಿ ಮತ್ತು ವಿವಿಎಸ್ ಲಕ್ಷ್ಮಣ್ ಜೊತೆಗೆ ಕಾಣಿಸಿಕೊಂಡಿದ್ದಾರೆ.

ಗೆಲುವಿನ ನಿರೀಕ್ಷೆಯಲ್ಲಿ ಅಯ್ಯರ್!

ಜಿಂಬಾಬ್ವೆಗೆ ನಡೆಯುವ ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ಗಮನ ಸೆಳೆಯುವ ಆಟಗಾರ ಯಾರಾದರೂ ಇದ್ದರೆ ಅದು 15 ವರ್ಷದ ವೈಭವ್ ಸೂರ್ಯವಂಶಿ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸಿಕ್ಕಿದ ಅವಕಾಶಗಳನ್ನು ಸೂರ್ಯವಂಶಿ ಸರಿಯಾಗಿ ಬಳಸಿಕೊಳ್ಳಲಿಲ್ಲ. ಶ್ರೇಯಸ್ ಅಯ್ಯರ್ ನಾಯಕನಾಗಿ ಇನ್ನೂ ಮೊದಲ ಗೆಲುವಿಗಾಗಿ ಕಾಯುತ್ತಿದ್ದಾರೆ. ಇದುವರೆಗೆ ಅವರು 7 ಪಂದ್ಯಗಳನ್ನು ಆಡಿದ್ದಾರೆ. ಒಂದು ಪಂದ್ಯ ಮಳೆಯಿಂದ ಕೈಬಿಟ್ಟುಹೋಗದರೆ, 6 ಪಂದ್ಯಗಳಲ್ಲಿ ಸೋತಿದ್ದಾರೆ. ಹೀಗಾಗಿ ಜಿಂಬಾಬ್ವೆ ಟಿ20 ಸರಣಿಯಲ್ಲಿ ಅಯ್ಯರ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಭಾರತ ತಂಡದ ಜಿಂಬಾಬ್ವೆ ಪ್ರವಾಸ

  • ಮೊದಲ ಟಿ20ಐ – ಜುಲೈ 23 (ಭಾರತೀಯ ಸಮಯ ಸಂಜೆ 4:30, ಹರಾರೆ ಸ್ಪೋರ್ಟ್ಸ್ ಕ್ಲಬ್)
  • ಎರಡನೇ ಟಿ20ಐ – ಜುಲೈ 25 (ಭಾರತೀಯ ಸಮಯ ಸಂಜೆ 4:30, ಹರಾರೆ ಸ್ಪೋರ್ಟ್ಸ್ ಕ್ಲಬ್)
  • ಮೂರನೇ ಟಿ20ಐ – ಜುಲೈ 26 (ಭಾರತೀಯ ಸಮಯ ಸಂಜೆ 4:30, ಹರಾರೆ ಸ್ಪೋರ್ಟ್ಸ್ ಕ್ಲಬ್)
ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಟೀಮ್ ಇಂಡಿಯಾ ತಂಡ

ಶ್ರೇಯಸ್ ಅಯ್ಯರ್ (ನಾಯಕ), ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ (ಉಪನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್). ಶಿವಂ ದುಬೆ, ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್, ಹರ್ಷ್ ದುಬೆ, ವರುಣ್ ಚಕ್ರವ್ರತಿ, ಪ್ರಿನ್ಸ್‌ ಯಾದವ್,‌ ಯಶ್ ಠಾಕೂರ್, ಅಶೋಕ್ ಶರ್ಮಾ, ಮಯಂಕ್ ಯಾದವ್, ಪ್ರಭ್‌ಸಿಮ್ರನ್ ಸಿಂಗ್.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed