Last Updated:
ರಾಮಾಯಣ ಚಿತ್ರದ ಯಶ್ ಪಾತ್ರದ ರಾವಣನ ಲುಕ್ ರಿವೀಲ್ ಆಗಿದೆ. ನಿಜಕ್ಕೂ ಯಶ್ ಈ ಒಂದು ಪಾತ್ರದಲ್ಲಿ ಅದ್ಭುತವಾಗಿಯೇ ಕಾಣಿಸುತ್ತಿದ್ದಾರೆ. ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ರಾಮಾಯಣ ಚಿತ್ರದ (Ramayana Movie) ಟ್ರೈಲರ್ ಅನ್ನ ಕನ್ನಡ ಸಿನಿಮಾ ಪತ್ರಕರ್ತರು ನೋಡಿದ್ದಾರೆ. ದೆಹಲಿಯಲ್ಲಿ ನಡೆದ ‘ಪ್ರಥಮ್ ಸಂಕಲ್ಪ’ ಕಾರ್ಯಕ್ರಮದಲ್ಲಿ ಈ ಟ್ರೈಲರ್‌ನ ಪ್ರದರ್ಶನವೂ ಆಗಿದೆ. ಸಿನಿಮಾದ ರಾವಣನ (Ravana) ಪಾತ್ರಧಾರಿ ಯಶ್, (Yash) ರಾಮನ ರೋಲ್ ಮಾಡಿರೋ ರಣಬೀರ್ ಕಪೂರ್, (Ranbir Kapoor) ಸೀತಾ ಪಾತ್ರಧಾರಿ ಸಾಯಿ ಪಲ್ಲವಿ ಹೀಗೆ ಎಲ್ಲರೂ ಈ ಸಿನಿಮಾದ ಮಾಹಿತಿ ಕೊಟ್ಟಿದ್ದಾರೆ. ಈ ಚಿತ್ರದ ಹೊಸ ವಿಷಯ ಏನಂದ್ರೆ ಈ ಒಂದು ಟ್ರೈಲರ್ ಅಧಿಕೃತವಾಗಿಯೇ ಜುಲೈ-24 ರಂದು ಶುಕ್ರವಾರ ರಿಲೀಸ್ ಆಗುತ್ತಿದೆ. ಈ ಒಂದು ವಿಷಯವನ್ನ ಹೇಳುವ ಒಂದು ಪೋಸ್ಟರ್ ಕೂಡ ರಿಲೀಸ್ ಆಗಿದೆ. ಇದರಲ್ಲಿ ಯಶ್ ರೋಲ್ ಹೇಗಿದೆ ಅನ್ನೋದು ತಿಳಿಯುತ್ತದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಯಶ್ ‘ರಾವಣ’ ಲುಕ್ ರಿವೀಲ್
ಆದರೆ, ದೆಹಲಿಯಲ್ಲಿ ನಡೆದ ಪ್ರಥಮ ಸಂಕಲ್ಪ ಕಾರ್ಯಕ್ರಮದಲ್ಲಿ ಚಿತ್ರದ ಟ್ರೈಲರ್ ಪ್ರದರ್ಶನ ಕೂಡ ಆಗಿದೆ. ಇದನ್ನ ನೋಡಿದ ಕನ್ನಡ ಸಿನಿಮಾ ಪತ್ರಕರ್ತರು ತುಂಬಾನೆ ಮೆಚ್ಚಿಕೊಂಡಿದ್ದಾರೆ. ಇದು “ರಾವಣನ ರಾಮಾಯಣ” ಅಂತಲೂ ಬಣ್ಣಿಸಿದ್ದಾರೆ.
ರಾಮಾಯಣ ಚಿತ್ರದ ಟ್ರೈಲರ್ ರಿಲೀಸ್ ಮಾಹಿತಿ ಜೊತೆಗೆ ಯಶ್ ಪಾತ್ರದ ಲುಕ್ ಕೂಡ ರಿಲೀಸ್ ಆಗಿದೆ. ಈ ಒಂದು ಲುಕ್ ಅಲ್ಲಿ ಯಶ್ ನಿಜಕ್ಕೂ ಅದ್ಭುತವಾಗಿಯೇ ಕಾಣಿಸುತ್ತಿದ್ದಾರೆ.
ರಾವಣನ ಸುಂದರ ರೂಪ ಅನಿಸೋ ಮಟ್ಟಿಗೇನೆ ಯಶ್ ಇಲ್ಲಿ ಕಾಣಿಸುತ್ತಿದ್ದಾರೆ. ರಾಜನ ರೂಪದಲ್ಲಿ ಕಂಗೊಳಿಸುತ್ತಿದ್ದಾರೆ. ನೋಟವಂತು ನಿಜಕ್ಕೂ ಅದ್ಭುತವಾಗಿಯೇ ಇದೆ. ಇದನ್ನ ನೋಡಿದ್ರೆ ಇಡೀ ಚಿತ್ರದಲ್ಲಿ ರಾವಣನ ಅಬ್ಬರವೇ ಜಾಸ್ತಿ ಇದೆ ಅನಿಸಿಬಿಡುತ್ತದೆ.
ಜುಲೈ-24 ರಂದು ಚಿತ್ರದ ಪ್ರಥಮ ಟ್ರೈಲರ್ ರಿಲೀಸ್ ಆಗುತ್ತಿದೆ. ವಿಶ್ವದಾದ್ಯಂತ ಈ ಒಂದು ಟ್ರೈರಲ್ ರಿಲೀಸ್ ಆಗುತ್ತಿದೆ. ಈ ಮಾಹಿತಿ ಯಶ್ ಪಾತ್ರದ ಪೋಸ್ಟರ್‌ನೊಂದಿಗೆ ರಿವೀಲ್ ಆಗಿದೆ.
ಈ ಚಿತ್ರದ ಟೀಸರ್‌ಗಳಲ್ಲಿ ಯಶ್ ಪಾತ್ರದ ದರ್ಶನ ಆಗಿಯೇ ಇರಲಿಲ್ಲ. ಆದರೆ, ಪಾತ್ರ ಹೇಗೆ ಇರುತ್ತದೆ ಅನ್ನೋದು ಇದೀಗ ಗೊತ್ತಾಗಿದೆ ನೋಡಿ.
ರಾವಣನಾಗಿ ಯಶ್ ಅಬ್ಬರ
ಡೈರೆಕ್ಟರ್ ನಿತೇಶ್ ತಿವಾರಿ ಈ ಚಿತ್ರವನ್ನ ಎರಡು ಭಾಗದಲ್ಲಿ ತಯಾರಿಸುತ್ತಿದ್ದಾರೆ. ಮೊದಲ ಭಾಗ 2026 ರ ದೀಪಾವಳಿಯಲ್ಲಿ ರಿಲೀಸ್ ಆಗುತ್ತಿದೆ.
ಆದರೆ, ಎರಡನೇ ಭಾಗ ಮುಂದಿನ ವರ್ಷ ಅಂದರೆ 2027 ರ ದೀಪಾವಳಿಯಲ್ಲಿಯೇ ಬರ್ತಿದೆ. ಈ ಚಿತ್ರದಲ್ಲಿ ಸೀತಾ ಪಾತ್ರವನ್ನ ಸಾಯಿ ಪಲ್ಲವಿ ಮಾಡಿದ್ದಾರೆ. ರಾಮನ ಪಾತ್ರವನ್ನ ರಣಬೀರ್ ಕಪೂರ್ ನಿರ್ವಹಿಸಿದ್ದಾರೆ.
ಈ ಒಂದು ಚಿತ್ರದಲ್ಲಿ ರಾವಣನ ಅಬ್ಬರ ಜೋರಾಗಿಯೇ ಇದೆ. ಇದರ ಝಲಕ್ ಟ್ರೈಲರ್ ಅಲ್ಲಿ ಪಕ್ಕಾ ಸಿಗುತ್ತದೆ. ಸಿಂಹದ ಎದುರು ಅಬ್ಬರಿಸೋ ರಾವಣನ ಅಭಿನಯದ ಎಲ್ಲರಿಗೂ ಇಷ್ಟವಾಗುವ ರೀತಿನೆ ಇದೆ.
ಈ ಚಿತ್ರದ ಬಿಜಿಎಂ ಕೂಡ ಅದ್ಭುತ ಅನ್ನುವ ಅಭಿಪ್ರಾಯ ಕೂಡ ಬರ್ತಿವೆ. ರಾಮನಾಗಿ ರಣಬೀರ್ ಕಪೂರ್ ಭಕ್ತಿ ಭಾವ ಮೂಡಿಸಿದ್ದಾರೆ.
ಸೀತೆಯಾಗಿ ಸಾಯಿ ಪಲ್ಲವಿ ಕಣ್ಣಲ್ಲಿಯೇ ಎಲ್ಲ ಹೇಳಿ ಬಿಡುತ್ತಾರೆ ಅನ್ನುವ ಅಭಿಪ್ರಾಯಗಳು ಟ್ರೈಲರ್ ನೋಡಿದವರಿಂದ ಬರ್ತಿವೆ. ಇನ್ನುಳಿದಂತೆ ಈ ಚಿತ್ರದ ಟ್ರೈಲರ್ ದೊಡ್ಡ ನಿರೀಕ್ಷೆಯನ್ನ ಹುಟ್ಟುಹಾಕಿದೆ ಅಂತ ಹೇಳಬಹುದು.
Bangalore [Bangalore],Bangalore,Karnataka
Jul 19, 2026 10:28 PM IST












